‘RRR’ ಚಿತ್ರದ ವೇಳೆ ರಾಮ್​ ಚರಣ್​ಗೆ ಸಿಕ್ಕಿದ್ರಂತೆ ಹೊಸ ಸಹೋದರ; ಯಾರದು?

‘RRR’ ಚಿತ್ರದ ವೇಳೆ ರಾಮ್​ ಚರಣ್​ಗೆ ಸಿಕ್ಕಿದ್ರಂತೆ ಹೊಸ ಸಹೋದರ; ಯಾರದು?
ರಾಮ್​ ಚರಣ್, ರಾಜಮೌಳಿ, ಜೂ.ಎನ್​ಟಿಆರ್

Ram Charan | Jr NTR: ಇತ್ತೀಚೆಗೆ ‘ಆರ್​ಆರ್​ಆರ್​’ ಚಿತ್ರದ ಪ್ರಿ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ರಾಮ್ ಚರಣ್ ಅಚ್ಚರಿಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Dec 29, 2021 | 9:35 AM

ಚಿತ್ರದ ಬಿಡುಗಡೆಗೆ ಸಿದ್ಧವಾಗಿರುವ ‘ಆರ್​​ಆರ್​​ಆರ್​’ (RRR) ಚಿತ್ರತಂಡ ದೇಶದೆಲ್ಲೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ಚಿತ್ರದ ಪ್ರಿ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆದಿತ್ತು. ಅದರಲ್ಲಿ ನಿರ್ದೇಶಕ ಎಸ್​ಎಸ್​​ ರಾಜಮೌಳಿ (SS Rajamouli), ನಟರಾದ ಜ್ಯೂ.ಎನ್​ಟಿಆರ್​​, ರಾಮ್​ ಚರಣ್ ಹಾಗೂ ನಿರ್ಮಾಪಕ ಡಿವಿವಿ ದಾನಯ್ಯ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮ್​ ಚರಣ್ (Ram Charan) ಹಾಗೂ ಜ್ಯೂ ಎನ್​ಟಿಆರ್ (Jr NTR)​​ ನಡುವಿನ ಮಾತುಕತೆ ಇದೀಗ ಎಲ್ಲರ ಗಮನ ಸೆಳೆದಿದೆ. ಜ್ಯೂ ಎನ್​ಟಿಆರ್​ ಮಾತನಾಡುತ್ತಾ ರಾಮ್ ಚರಣ್ ಅವರೊಂದಿಗೆ ಕಾಣಿಸಿಕೊಳ್ಳುವುದು ಇದು ಆರಂಭವಷ್ಟೇ ಎಂದರು. ‘‘ಪ್ರೀತಿಯ ರಾಮ್​ ಚರಣ್, ನಿಮ್ಮೊಡನೆ ತೆರೆ ಹಂಚಿಕೊಳ್ಳಬಹುದು ಎಂಬ ಕಾರಣಕ್ಕೆ ಆರ್​ಆರ್​​ಆರ್​​ ಚಿತ್ರದ ಪ್ರತೀ ದೃಶ್ಯದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳಬೇಕು ಎಂದು ಮನಸ್ಸು ಹೇಳುತ್ತದೆ. ಇದು ಕೊನೆಯಲ್ಲ. ಹೊಸ ಪಯಣದ ಆರಂಭ’’ ಎಂದಿದ್ದಾರೆ ಜ್ಯೂ.ಎನ್​ಟಿಆರ್​.

ನಂತರ ಮಾತನಾಡಿದ ರಾಮ್​ ಚರಣ್, ಜ್ಯೂ.ಎನ್​ಟಿಆರ್ ಅವರೊಂದಿಗಿನ ಸ್ನೇಹದ ಕುರಿತು ಮಾತನಾಡುತ್ತಾ ಭಾವುಕರಾದರು. ‘‘ಪ್ರೀತಿಯ ಎನ್​ಟಿಆರ್, ನಮ್ಮಿಬ್ಬರಿಗೆ ಕೇವಲ ಒಂದು ವರ್ಷದ ವ್ಯತ್ಯಾಸ. ಆದರೆ ನಿಜ ಜೀವನದಲ್ಲಿ ಅವನದ್ದು (ಎನ್​ಟಿಆರ್) ಮಕ್ಕಳ ರೀತಿಯ ಮನಸ್ಸು ಆದರೆ ಸಿಂಹದಂತಹ ವ್ಯಕ್ತಿತ್ವ. ಇವನೊಡನೆ ಬಹಳ ಜಾಗೃತರಾಗಿರಬೇಕು’’ ಎಂದು ನಗುತ್ತಾ ರಾಮ್ ಚರಣ್ ಹೇಳಿದ್ದಾರೆ. ಮುಂದುವರೆಸಿದ ರಾಮ್ ಚರಣ್, ‘‘ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಆದರೆ ತಾರಕ್​ಗೆ ಹೇಳುವುದಿಲ್ಲ. ಕಾರಣ, ನಾನು ದೇವರಿಗೆ ಇಂತಹ ಸೋದರನನ್ನು ನೀಡಿದ್ದಕ್ಕೆ ಧನ್ಯವಾದ ಹೇಳಬೇಕು’’ ಎಂದು ಭಾವುಕರಾಗಿ ನುಡಿದಿದ್ದಾರೆ ರಾಮ್​ಚರಣ್.

ಜ್ಯೂ ಎನ್​ಟಿಆರ್ ಜತೆಗಿನ ಸೋದರ ಸಂಬಂಧದ ಕುರಿತು ಮತ್ತಷ್ಟು ಮಾತನಾಡಿದ ರಾಮ್​ ಚರಣ್, ‘‘ಈ ಚಿತ್ರದೊಂದಿಗಿನ ಸಂಬಂಧವನ್ನು ಎಲ್ಲರಂತೆ ನಾನೂ ಬಹಳ ಕಾಲ ಇಟ್ಟುಕೊಳ್ಳುತ್ತೇನೆ. ಆದರೆ ತಾರಕ್ ಜತೆಗಿನ ಸಂಬಂಧ ನನ್ನ ಸಂಪೂರ್ಣ ಜೀವಿತಾವಧಿಯವರೆಗೆ ಇರುತ್ತದೆ. ಆ ಸೋದರತ್ವವನ್ನು ನನ್ನ ಕೊನೆಯುಸಿರು ಇರುವವರೆಗೂ ಕಾಪಾಡಿಕೊಳ್ಳುತ್ತೇನೆ. ಎಲ್ಲರಿಗೂ ಧನ್ಯವಾದಗಳು’’ ಎಂದಿದ್ದಾರೆ. ಜ್ಯೂ.ಎನ್​ಟಿಆರ್​​ ಹಾಗೂ ರಾಮ್​ ಚರಣ್ ಮಾತುಗಳನ್ನು ಕೇಳಿ ಅವರ ಫ್ಯಾನ್ಸ್ ಸಅಖತ್ ಖುಷಿಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಜನವರಿ 7ರಂದು ವಿಶ್ವಾದ್ಯಂತ ತೆರೆಕಾಣಲಿದೆ. ರಾಮ್ ಚರಣ್, ಜ್ಯೂ ಎನ್​ಟಿಆರ್ ಅವರೊಂದಿಗೆ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:

Arun Vaidyanathan: ‘ಕೊವಿಡ್​ ಮಸಾಲಾ ಫಿಲ್ಮ್​ ಇದ್ದಂತೆ; ಲಾಜಿಕ್ ಇರೋದೇ ಇಲ್ಲ’ ಎಂದ ನಿರ್ದೇಶಕ!

Irrfan Khan: ಇರ್ಫಾನ್ ಅಭಿಮಾನಿಗಳಿಗೆ ಖುಷಿ ಸುದ್ದಿ; ಬರೋಬ್ಬರಿ 14 ವರ್ಷಗಳ ಬಳಿಕ ಓಟಿಟಿಯಲ್ಲಿ ತೆರೆಕಾಣಲಿದೆ ಈ ಚಿತ್ರ

Follow us on

Related Stories

Most Read Stories

Click on your DTH Provider to Add TV9 Kannada