‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್​ಗೆ ಸತತ ಸೋಲು; ಈಗಲಾದರೂ ಸಿಗಲಿದೆಯೇ ಯಶಸ್ಸು?

‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್​ಗೆ ಸತತ ಸೋಲು; ಈಗಲಾದರೂ ಸಿಗಲಿದೆಯೇ ಯಶಸ್ಸು?
ಕೀರ್ತಿ ಸುರೇಶ್​

‘ಮಹಾನಟಿ’ ಬಳಿಕ ಅವರ ನಟನೆಯ ಹಲವು ಸಿನಿಮಾಗಳು ತೆರೆಗೆ ಬಂದವು. ‘ಪೆಂಗ್ವಿನ್​’, ‘ಮಿಸ್​ ಇಂಡಿಯಾ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದರು. ಈ ಯಾವ ಸಿನಿಮಾಗಳಿಗೂ ಯಶಸ್ಸು ಸಿಕ್ಕಿಲ್ಲ.

TV9kannada Web Team

| Edited By: Rajesh Duggumane

Jan 27, 2022 | 3:16 PM

‘ಮಹಾನಟಿ’ (Mahanati) ಸಿನಿಮಾದಲ್ಲಿ ತಮ್ಮ ಅದ್ಭುತ ನಟನೆ ತೋರಿಸುವ ಮೂಲಕ ಕೀರ್ತಿ ಸುರೇಶ್ (Keerhi Suresh)​ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಅವರಿಗೆ ಈ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು. ಅದಾದ ಬಳಿಕ ಅವರು ಸಾಕಷ್ಟು ಬೀಳುಗಳನ್ನು ಕಂಡರು. ಅವರ ಬತ್ತಳಿಕೆಯಿಂದ ‘ಮಹಾನಟಿ’ ಮಟ್ಟಕ್ಕೆ ಮತ್ತೊಂದು ಸಿನಿಮಾ ಬರೋಕೆ ಸಾಧ್ಯವೇ ಆಗಲಿಲ್ಲ. ಅವರ ನಟನೆಯ ಹಲವು ಚಿತ್ರಗಳು ಮಕಾಡೆ ಮಲಗಿದವು. ಈಗ ಅವರ ನಟನೆಯ ‘ಗುಡ್​ ಲಕ್​ ಸಖಿ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಅವರಿಗೆ ಯಶಸ್ಸು ಸಿಗಲಿದೆಯೇ ಎಂಬ ಕುತೂಹಲ ಸದ್ಯದ್ದು.  

‘ಮಹಾನಟಿ’ ಬಳಿಕ ಅವರ ನಟನೆಯ ಹಲವು ಸಿನಿಮಾಗಳು ತೆರೆಗೆ ಬಂದವು. ‘ಪೆಂಗ್ವಿನ್​’, ‘ಮಿಸ್​ ಇಂಡಿಯಾ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದರು. ಈ ಯಾವ ಸಿನಿಮಾಗಳಿಗೂ ಯಶಸ್ಸು ಸಿಕ್ಕಿಲ್ಲ.  ಕೆಲ ಸಿನಿಮಾಗಳು ಗೆದ್ದಿವೆ. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಪಾತ್ರ  ಇರಲಿಲ್ಲ. ಈಗ ಅವರಿಗೆ ‘ಗುಡ್​ ಲಕ್​ ಸಖಿ’ ಚಿತ್ರದ ಮೇಲೆ ನಿರೀಕ್ಷೆ ಇದೆ. ನಾಗೇಶ್​ ಕುಕುನೂರ್​ ನಿರ್ದೇಶನದ ಈ ಸಿನಿಮಾ ಈ ಮೊದಲೇ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಮಹಾಮಾರಿಯಿಂದ ಸಿನಿಮಾ ತೆರೆಗೆ ಬರೋದು ತಡವಾಯಿತು.

ಸದ್ಯ, ದೇಶದಲ್ಲಿ ಕೊವಿಡ್​ ಮಹಾಮಾರಿ ಮೂರನೇ ಅಲೆ ಹರಡುತ್ತಿದೆ. ಇದನ್ನು ನಿಯಂತ್ರಿಸೋಕೆ ಸಾಧ್ಯವಾಗುತ್ತಿಲ್ಲ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಹೀಗಾಗಿ, ಈಗ ಸಿನಿಮಾ ರಿಲೀಸ್​ ಮಾಡಿದರೆ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದಾಗ್ಯೂ, ‘ಗುಡ್​ ಲಕ್​ ಸಖಿ’ ರಿಲೀಸ್​ ಮಾಡುವ ಸಾಹಸಕ್ಕೆ ಚಿತ್ರತಂಡ ಮುಂದಾಗಿದೆ.

ಈ ಸಿನಿಮಾ ರಿಲೀಸ್​ ಆಗಿ ಯಶಸ್ಸು ಕಾಣುತ್ತದೆಯೋ ಅಥವಾ ಇಲ್ಲವೋ ಎನ್ನುವುದು ಸದ್ಯದ ಪ್ರಶ್ನೆ. ಒಂದೊಮ್ಮೆ ಈ ಸಿನಿಮಾವೂ ಸೋತರೆ ಕೀರ್ತಿ ಅವರ ಬೇಡಿಕೆ ಟಾಲಿವುಡ್​ನಲ್ಲಿ ತಗ್ಗಬಹುದು. ಹೀಗಾಗಿ ಅವರಿಗೆ ಸದ್ಯದ ಮಟ್ಟಿಗೆ ಒಂದು ಯಶಸ್ಸು ಬೇಕಿದೆ. ‘ಗುಡ್​ ಲಕ್​ ಸಖಿ’ ಚಿತ್ರದಲ್ಲಿ ಜಗಪತಿ ಬಾಬು, ಆದಿ ಪಿನಿಶೆಟ್ಟಿ ಮತ್ತು ರಾಹುಲ್​ ರಾಮಕೃಷ್ಣ ಮೊದಲಾದವರು ನಟಿಸಿದ್ದಾರೆ.

ವರ್ಷದ ಆರಂಭದಲ್ಲೇ ಕೀರ್ತಿ ಸುರೇಶ್​ಗೆ ಕೊವಿಡ್ ಕಾಣಿಸಿಕೊಂಡಿತ್ತು. ‘ನನಗೆ ಕೊವಿಡ್ ಕಾಣಿಸಿಕೊಂಡಿದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡ ಸೋಂಕು ತಗುಲಿದೆ. ಎಲ್ಲರೂ ಮುನ್ನೆಚ್ಚರಿಕೆಗಳನ್ನು ಪಾಲಿಸಿ. ಒಂದು ವೇಳೆ ಇನ್ನೂ ಲಸಿಕೆ ಪಡೆದಿಲ್ಲ ಎಂದರೆ, ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ. ಇದರಿಂದ ಸೋಂಕಿನ ಪರಿಣಾಮ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ತೀವ್ರತರ ಸೋಂಕಿನಿಂದ ಪಾರಾಗಬಹುದು’ ಎಂದು ಕೀರ್ತಿ ಬರೆದುಕೊಂಡಿದ್ದರು.

ಇದ್ನೂ ಓದಿ: Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್​ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್​

Keerthy Suresh: ಕೀರ್ತಿ ಸುರೇಶ್​ಗೆ ಕೊವಿಡ್ ಪಾಸಿಟಿವ್; ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡ ನಟಿ

Follow us on

Related Stories

Most Read Stories

Click on your DTH Provider to Add TV9 Kannada