‘ಮಾಫಿಯಾ ಪಪ್ಪುಗಳು ಆರ್ಯನ್ ಖಾನ್ ರಕ್ಷಣೆಗೆ ಬಂದರು’; ಹೃತಿಕ್ಗೆ ತಿರುಗೇಟು ನೀಡಿದ ಕಂಗನಾ
ಹೃತಿಕ್ ಅವರು ಇಂದು (ಅಕ್ಟೋಬರ್ 7) ಬಹಿರಂಗ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಅವರು ಆರ್ಯನ್ ಖಾನ್ ಅವರನ್ನು ಬೆಂಬಲಿಸಿದ್ದರು.
ಶಾರುಖ್ ಖಾನ್ ಮಗ ಆರ್ಯನ್ ಖಾನ್ಗೆ ಬಾಲಿವುಡ್ನ ಸಾಕಷ್ಟು ಸ್ಟಾರ್ ನಟರು ಬೆಂಬಲ ಸೂಚಿಸುತ್ತಿದ್ದಾರೆ. ಈ ಮೂಲಕ ಈ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಸ್ಟಾರ್ಗಳು ಮಾಡುತ್ತಿದ್ದಾರೆ. ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ ಅವರನ್ನು ಬೆಂಬಲಿಸಿದ ನಟ ಹೃತಿಕ್ ರೋಷನ್ಗೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.
ಹೃತಿಕ್ ಅವರು ಇಂದು (ಅಕ್ಟೋಬರ್ 7) ಬಹಿರಂಗ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಅವರು ಆರ್ಯನ್ ಖಾನ್ ಅವರನ್ನು ಬೆಂಬಲಿಸಿದ್ದರು. ದೇವರು ಪ್ರಬಲರಿಗೆ ಮಾತ್ರ ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್ ಮಾಡಬೇಕು. ನಿನ್ನೊಳಗಿನ ಹೀರೋನನ್ನು ಹೊರತರಲು ಇವು ಪ್ರಮುಖ ಅಂಶಗಳು ಎಂಬಿತ್ಯಾದಿ ವಿಚಾರಗಳನ್ನು ಬರೆದುಕೊಂಡಿದ್ದರು ಅವರು. ಇದು ಕಂಗನಾ ಕಣ್ಣು ಕುಕ್ಕಿದೆ.
‘ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್ ಖಾನ್ ಅವರ ರಕ್ಷಣೆಗೆ ಬಂದಿದ್ದಾರೆ. ನಾವು ತಪ್ಪು ಮಾಡುತ್ತೇವೆ, ಆದರೆ ನಾವು ಅದನ್ನು ವೈಭವೀಕರಿಸಬಾರದು. ಈ ಘಟನೆ ಆರ್ಯನ್ಗೆ ಹೊಸ ದೃಷ್ಟಿಕೋನ ನೀಡಬಹುದು ಮತ್ತು ಮಾಡಿದ ಕೆಲಸದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವಾಗಬಹುದು. ಈ ಘಟನೆಯಿಂದ ಆರ್ಯನ್ ಬದಲಾಗಬಹುದು. ಯಾರಾದರೂ ದುರ್ಬಲರಾದಾಗ ಅವರ ಬಗ್ಗೆ ಗಾಸಿಪ್ ಮಾಡದಿರುವುದು ಒಳ್ಳೆಯದು. ಆದರೆ, ಅವರು ತಪ್ಪೇ ಮಾಡಿಲ್ಲ ಎಂದು ಅನಿಸುವಂತೆ ಮಾಡುವುದು ಅಪರಾಧ’ ಎಂದಿದ್ದಾರೆ ಕಂಗನಾ. ಈ ಮೂಲಕ ಹೃತಿಕ್ಗೆ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಹೃತಿಕ್ ಪತ್ರದಲ್ಲೇನಿದೆ?
‘ನನ್ನ ಪ್ರೀತಿಯ ಆರ್ಯನ್ ಖಾನ್..’ ಎಂದು ಹೃತಿಕ್ ಈ ಪತ್ರ ಆರಂಭಿಸಿದ್ದಾರೆ. ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್ ಮಾಡಬೇಕು. ನಿನ್ನೊಳಗಿನ ಹೀರೋನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು… ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’ ಎಂದು ಹೃತಿಕ್ ಅವರು ಈ ಪತ್ರದಲ್ಲಿ ಬರೆದಿದ್ದಾರೆ.
‘ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಮಗು ಆಗಿದ್ದಾಗಿನಿಂದ ನಾನು ನೋಡಿದ್ದೇನೆ. ದೊಡ್ಡವನಾದ ಮೇಲೂ ನೋಡಿದ್ದೇನೆ. ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದು ಹೃತಿಕ್ ಬರೆದಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಶಾರೂಖ್ ಖಾನ್ ಮಗ ಸೇರಿ ಒಟ್ಟು 11 ಜನರ ಬಂಧನ, ಆರೋಪಿಗಳು ಅ.11ರವರೆಗೆ ಎನ್ಸಿಬಿ ಕಸ್ಟಡಿಗೆ
ಶಾರುಖ್ ಮಗನ ಮೇಲೆ ನಡೆದ ದಾಳಿ ಒಂದು ಷಡ್ಯಂತ್ರವೇ? ಎನ್ಸಿಬಿ ಅಧಿಕಾರಿಗಳ ಮೇಲೆ ಮೂಡಿತು ಶಂಕೆ