‘ಎಲ್ಲರಿಗೂ ಕೊವಿಡ್​ ಬರ್ತಿದೆ, ನಂಗೂ ಬರಬೇಕಾ?’; ಸಣ್ಣ ವಿಚಾರಕ್ಕೆ ಇಂಥ ಮಾತಾಡಿದ ಸೋನಾಕ್ಷಿ ಸಿನ್ಹಾ

‘ಎಲ್ಲರಿಗೂ ಕೊವಿಡ್​ ಬರ್ತಿದೆ, ನಂಗೂ ಬರಬೇಕಾ?’; ಸಣ್ಣ ವಿಚಾರಕ್ಕೆ ಇಂಥ ಮಾತಾಡಿದ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ

ಇನ್​ಸ್ಟಾಗ್ರಾಮ್​ನಲ್ಲಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದರು. ಆಗ ಅವರ ಕಡೆಗೆ ನಾನಾ ಬಗೆಯ ಪ್ರಶ್ನೆಗಳು ತೂರಿಬಂದವು.

TV9kannada Web Team

| Edited By: Madan Kumar

Jan 31, 2022 | 1:42 PM

ದೇಶದೆಲ್ಲೆಡೆ ಕೊವಿಡ್​-19 (Covid 19) ಕಾಟ ಕೊಡುತ್ತಿದೆ. ಎರಡು ಡೋಸ್​ ಲಸಿಕೆ ಪಡೆದುಕೊಂಡಿದ್ದರೂ ಕೂಡ ಅನೇಕರಿಗೆ ಕೊರೊನಾ ವೈರಸ್​ ತಗುಲುತ್ತಿದೆ. ಹಲವಾರು ಸೆಲೆಬ್ರಿಟಿಗಳಿಗೆ ಕೊವಿಡ್​ ಪಾಸಿಟಿವ್​ (Corona Positive) ವರದಿ ಬಂದಿದೆ. ಹಾಗಾಗಿ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ ಆಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ದೊಡ್ಡದಿದೆ. ಇನ್ನು, ಲಾಕ್​ಡೌನ್​ ಕಾರಣದಿಂದ ಕೋಟ್ಯಂತರ ಜನರ ಬದುಕು ಕಷ್ಟಕ್ಕೆ ತಳ್ಳಲ್ಪಟ್ಟಿದೆ. ಇಂಥ ಸಂದರ್ಭದಲ್ಲಿ ಕೊರೊನಾ ವಿಚಾರ ಇಟ್ಟುಕೊಂಡು ತಮಾಷೆ ಮಾಡುವುದು ಕೂಡ ಸರಿಯಲ್ಲ. ಆದರೂ ಕೂಡ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಸಣ್ಣ ಮಾತಿನ ನಡುವೆಯೂ ಕೊವಿಡ್​ ವಿಚಾರವನ್ನು ಎಳೆದು ತಂದಿದ್ದಾರೆ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಈ ಬಾಲಿವುಡ್​ ಬೆಡಗಿ ಅದೇಕೋ ಮುಖ ಕೆಂಪು ಮಾಡಿಕೊಂಡಿದ್ದಾರೆ. ‘ಮದುವೆ ಆಗೋದಿಲ್ವಾ ಮೇಡಂ?’ ಅಂತ ಕೇಳಿದ್ದಕ್ಕೆ ಅವರು ಯಾಕೋ ಸೀರಿಯಸ್​​ ಮೂತಿ ಮಾಡಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಅಭಿಮಾನಿಗಳ ವಲಯದಲ್ಲಿ ಈ ವಿಚಾರ ಚರ್ಚೆ ಆಗಿದೆ.

ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಆಗಾಗ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ನಟಿ ಸೋನಾಕ್ಷಿ ಸಿನ್ಹಾ ಕೂಡ ಈ ಮಾತಿಗೆ ಹೊರತಾಗಿಲ್ಲ. ಅವರು ಕೂಡ ಅದೇ ಟ್ರೆಂಡ್​ ಪಾಲಿಸುತ್ತಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದರು. ಆಗ ಸೋನಾಕ್ಷಿ ಸಿನ್ಹಾ ಕಡೆಗೆ ನಾನಾ ಬಗೆಯ ಪ್ರಶ್ನೆಗಳು ತೂರಿಬಂದವು.

ನಟಿಮಣಿಯರ ಮದುವೆ ಮತ್ತು ಖಾಸಗಿ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ ಸೋನಾಕ್ಷಿ ಸಿನ್ಹಾ ಅವರ ಅಭಿಮಾನಿಯೊಬ್ಬರು ಕೂಡ ಅದೇ ಪ್ರಶ್ನೆ ಕೇಳಿದ್ದಾರೆ. ‘ಎಲ್ಲರಿಗೂ ಮದುವೆ ಆಗುತ್ತಿದೆ ಮೇಡಂ. ನೀವು ಯಾವಾಗ ಮದುವೆ ಆಗ್ತೀರಿ’ ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಸೋನಾಕ್ಷಿ ಸಿನ್ಹಾ ಅವರು ಕೊಂಕಾಗಿ ಉತ್ತರಿಸಿದ್ದಾರೆ. ಬೇಸರ ಮಾಡಿಕೊಂಡಂತಿರುವ ಮುಖದ ಫೋಟೋ ಹಾಕಿ ಉತ್ತರ ನೀಡಿದ್ದಾರೆ. ಅದನ್ನು ಉತ್ತರ ಎನ್ನುವುದಕ್ಕಿಂತ ಮರುಪ್ರಶ್ನೆ ಎಂಬುದೇ ಉತ್ತಮ. ‘ಎಲ್ಲರಿಗೂ ಕೊವಿಡ್​ ಬರುತ್ತಿದೆ. ನನಗೂ ಬರಬೇಕಾ?’ ಎಂದು ಸೋನಾಕ್ಷಿ ಕೇಳಿದ್ದಾರೆ. ನೆಚ್ಚಿನ ನಟಿಯಿಂದ ಇಂಥ ಉಲ್ಟಾ-ಪಲ್ಟಾ ಮಾತು ಕೇಳಬೇಕಾಗಿ ಬಂದಿದ್ದಕ್ಕೆ ಆ ಅಭಿಮಾನಿ ಬೇಸರ ಮಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ.

ಸೋನಾಕ್ಷಿ ಸಿನ್ಹಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆಯೂ ದೊಡ್ಡದಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು 2 ಕೋಟಿಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. 2010ರಲ್ಲಿ ಸಲ್ಮಾನ್​ ಖಾನ್​ ನಟನೆಯ ‘ದಬಂಗ್​’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಅವಕಾಶ ಸೋನಾಕ್ಷಿಗೆ ಸಿಕ್ಕಿತು. ಮೊದಲ ಚಿತ್ರದಲ್ಲೇ ಅವರು ಯಶಸ್ಸು ಕಂಡರು. ಪ್ರಸ್ತುತ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಸೋನಾಕ್ಷಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ 34 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿದಂತಿಲ್ಲ.

ಇದನ್ನೂ ಓದಿ:

‘ಗಂಗೂಬಾಯಿ ಕಾಠಿಯಾವಾಡಿ’ ರಿಲೀಸ್​ ದಿನಾಂಕ ಘೋಷಣೆ; ಕೊವಿಡ್​ ಮಧ್ಯೆ ಗೆಲ್ಲಲಿದೆಯೇ ಆಲಿಯಾ ಚಿತ್ರ?

ಕೊರೊನಾ ಹಿನ್ನೆಲೆ; ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪೂರ್ಣ ಕ್ಯಾರಿ ಓವರ್- ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada