‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?
ದೀಪಿಕಾ ಪಡುಕೋಣೆ

Deepika Padukone: ತುಂಬ ಚಿಕ್ಕ ಬಟ್ಟೆಯನ್ನು ಧರಿಸಿ ದೀಪಿಕಾ ಪಡುಕೋಣೆ ಅವರು ‘ಗೆಹರಾಯಿಯಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಅದನ್ನು ಕಂಡ ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಕಮೆಂಟ್​​ ಮಾಡಿದ್ದಾರೆ.

TV9kannada Web Team

| Edited By: Madan Kumar

Jan 31, 2022 | 9:40 AM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ. ಬಾಲಿವುಡ್​ನಲ್ಲಿ ಅವರು ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಹಾಲಿವುಡ್​ನಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಈಗ ಅವರ ಹೊಸ ಚಿತ್ರ ‘ಗೆಹರಾಯಿಯಾ’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ಕೂಡ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡು ಮತ್ತು ಟ್ರೇಲರ್​ ಸಖತ್​ ವೈರಲ್​ ಆಗಿದೆ. ಅನೇಕ ಕಾರಣಗಳಿಂದಾಗಿ ‘ಗೆಹರಾಯಿಯಾ’ (Gehraiyaan Movie) ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ತುಂಬ ಬೋಲ್ಡ್​ ಆದಂತಹ ಪಾತ್ರ ಮಾಡಿದ್ದಾರೆ. ನಟ ಸಿದ್ಧಾಂತ್​​ ಚತುರ್ವೇದಿ ಜೊತೆ ಅವರು ಅನೇಕ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ದೃಶ್ಯಗಳ ಝಲಕ್​ ಅನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಅದೇ ರೀತಿ ಚಿತ್ರದ ಪ್ರಮೋಷನ್​ನಲ್ಲಿ ಭಾಗವಹಿಸುವಾಗ ದೀಪಿಕಾ ಪಡುಕೋಣೆ ಅವರು ತುಂಬ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೆಲವರ ಕಣ್ಣು ಕುಕ್ಕಿದೆ. ಅದನ್ನು ಗಮನಿಸಿದ ನೆಟ್ಟಿಗರು ಟ್ರೋಲ್​ (Troll) ಕೂಡ ಮಾಡಿದ್ದಾರೆ. ಅದಕ್ಕೆ ದೀಪಿಕಾ ಪಡುಕೋಣೆ ಸೂಕ್ತ ತಿರುಗೇಟು ನೀಡಿದ್ದಾರೆ.

ತುಂಬ ಚಿಕ್ಕ ಬಟ್ಟೆಯನ್ನು ಧರಿಸಿ ದೀಪಿಕಾ ಪಡುಕೋಣೆ ಅವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವುದನ್ನು ಕಂಡ ನೆಟ್ಟಿಗರೊಬ್ಬರು ತುಂಬ ವ್ಯಂಗ್ಯವಾಗಿ ಪೋಸ್ಟ್​ ಮಾಡಿದ್ದಾರೆ. ‘​ಗೆಹರಾಯಿಯಾ ಸಿನಿಮಾದ ರಿಲೀಸ್​ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಬಟ್ಟೆ ಚಿಕ್ಕದಾಗುತ್ತ ಹೋಗುತ್ತದೆ. ಇದು ನ್ಯೂಟನ್​ನ ಬಾಲಿವುಡ್ ನಿಯಮ’ ಎಂದು ವ್ಯಂಗ್ಯ ಮಾಡಲಾಗಿದೆ. ಇದಕ್ಕೆ ದೀಪಿಕಾ ಪಡುಕೋಣೆ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಸೂಚ್ಯವಾಗಿ ಒಂದು ಪೋಸ್ಟ್​ ಮಾಡಿದ್ದಾರೆ.

ತಮ್ಮ ಚಿಕ್ಕ ಬಟ್ಟೆಯ ಬಗ್ಗೆ ವ್ಯಂಗ್ಯದ ಪೋಸ್ಟ್​ ವೈರಲ್​ ಆದ ಕೆಲವೇ ಸಮಯದ ಬಳಿಕ ದೀಪಿಕಾ ಪಡುಕೋಣೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಪೋಸ್ಟರ್​ ಹಂಚಿಕೊಂಡರು. ‘ನ್ಯೂಟ್ರಾನ್​, ಪ್ರೋಟಾನ್​ ಮತ್ತು ಎಲೆಕ್ಟ್ರಾನ್​ನಿಂದ ಈ ಜಗತ್ತು ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮೂರ್ಖರ ಬಗ್ಗೆ ಹೇಳಲು ಅವರು ಮರೆತಿದ್ದಾರೆ’ ಎಂಬ ಬರಹ ಆ ಸ್ಟೋರಿಯಲ್ಲಿದೆ. ಬಟ್ಟೆ ವಿಚಾರದಲ್ಲಿ ತಮ್ಮನ್ನು ಟ್ರೋಲ್​ ಮಾಡುವವರು ಮೂರ್ಖರು ಎಂದು ಈ ಮೂಲಕ ದೀಪಿಕಾ ಪಡುಕೋಣೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಈ ವಿಚಾರದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಗೆಹರಾಯಿಯಾ’ ಚಿತ್ರಕ್ಕೆ ಶಕುನ್​ ಭಾತ್ರಾ ನಿರ್ದೇಶನ ಮಾಡಿದ್ದಾರೆ. ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ಯಾವ ಹಂತ ತಲುಪಿವೆ ಎಂಬುದನ್ನು ಈ ಸಿನಿಮಾ ವಿವರಿಸಲಿದೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ದೀಪಿಕಾ ಪಡುಕೋಣೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರಮಂದಿರಗಳ ಬದಲು, ನೇರವಾಗಿ ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಫೆ.11ರಂದು ‘ಗೆಹರಾಯಿಯಾ’ ಬಿಡುಗಡೆ ಆಗಲಿದೆ. ಕರಣ್​ ಜೋಹರ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

ಕಿಸ್ಸಿಂಗ್​ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್​ನಲ್ಲಿ ಹೈಲೈಟ್​ ಆಯ್ತು ಸಂಬಂಧಗಳ​ ವಿಚಾರ

ದೀಪಿಕಾ ಪಡುಕೋಣೆ ವಿಡಿಯೋ ಕಾಲ್​ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಯಾರ ಜತೆಗೆ?

Follow us on

Related Stories

Most Read Stories

Click on your DTH Provider to Add TV9 Kannada