‘ನನ್ನ ಹೆಸರು ಸಲ್ಮಾನ್​ ಖಾನ್​’: ವಿದೇಶದಲ್ಲಿ ವಿನಯದಿಂದ​ ಪರಿಚಯ ಹೇಳಿಕೊಂಡ ಸಲ್ಲು; ವಿಡಿಯೋ ವೈರಲ್

‘ನನ್ನ ಹೆಸರು ಸಲ್ಮಾನ್​ ಖಾನ್​’: ವಿದೇಶದಲ್ಲಿ ವಿನಯದಿಂದ​ ಪರಿಚಯ ಹೇಳಿಕೊಂಡ ಸಲ್ಲು; ವಿಡಿಯೋ ವೈರಲ್
ಸಲ್ಮಾನ್​ ಖಾನ್​, ಜಾನ್​ ಟ್ರವೋಲ್ಟ

‘ಜಾಯ್​ ಅವಾರ್ಡ್ಸ್​ 2022’ ಸಮಾರಂಭ ಇತ್ತೀಚೆಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್, ಜಾನ್​ ಟ್ರವೋಲ್ಟ​ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

TV9kannada Web Team

| Edited By: Madan Kumar

Jan 30, 2022 | 4:43 PM

ಸಲ್ಮಾನ್​ ಖಾನ್​ (Salman Khan) ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕೆಲವೊಮ್ಮೆ ಅವರು ಕೂಡ ತಮ್ಮ ಪರಿಚಯವನ್ನು ತಾವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂಬುದು ಕೂಡ ಅಚ್ಚರಿಯ ಸಂಗತಿ. ಆ ರೀತಿಯ ಘಟನೆ ಇತ್ತೀಚೆಗೆ ನಡೆದಿದೆ. ‘ನನ್ನ ಹೆಸರು ಸಲ್ಮಾನ್​ ಖಾನ್​. ನಾನು ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತೇನೆ’ ಎಂದು ಸಲ್ಲು ಹೇಳಿರುವ ವಿಡಿಯೋ ವೈರಲ್​ ಆಗಿದೆ. ಈ ಘಟನೆ ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಅಲ್ಲಿ ಸಾಮಾನ್ಯವಾಗಿ ಹಿಂದಿ ಸಿನಿಮಾಗಳಿಗೆ ಪ್ರೇಕ್ಷಕರಿದ್ದಾರೆ. ಹಾಗಿದ್ದರೂ ಕೂಡ ಸಲ್ಮಾನ್​ ಖಾನ್​ ಅವರು ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದು ಯಾಕೆ? ಆ ಪ್ರಶ್ನೆಗೆ ಉತ್ತರ; ಹಾಲಿವುಡ್ (Hollywood) ನಟ ಜಾನ್​ ಟ್ರವೋಲ್ಟ! ಹೌದು, ಜಾನ್​ ಟ್ರವೋಲ್ಟ (John Travolta) ಮತ್ತು ಸಲ್ಮಾನ್​ ಖಾನ್​ ಅವರು ಸೌದಿ ಅರೇಬಿಯಾದ ರಿಯಾದ್​ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ಭಾಗವಹಿಸಿದ್ದಾರೆ. ಆ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರು ತಮ್ಮ ಪರಿಚಯವನ್ನು ತಾವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

‘ಜಾಯ್​ ಅವಾರ್ಡ್ಸ್​ 2022’ ಸಮಾರಂಭ ಇತ್ತೀಚೆಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಜಗತ್ತಿನ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಲ್ಮಾನ್​ ಅವರಿಗೆ ‘ಪರ್ಸನಾಲಿಟಿ ಆಫ್​ ದಿ ಇಯರ್​’ ಪ್ರಶಸ್ತಿ ಸಿಕ್ಕಿದೆ. ಹಾಲಿವುಡ್​ನ ಖ್ಯಾತ ನಟ ಜಾನ್​ ಟ್ರವೋಲ್ಟ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಜಾನ್​ ಟ್ರವೋಲ್ಟ ಮತ್ತು ಸಲ್ಮಾನ್​ ಖಾನ್​ ಅವರು ಪರಸ್ಪರ ಭೇಟಿ ಆಗಬೇಕಾದ ಸಂದರ್ಭ ಬಂತು. ಆಗ ಸಲ್ಲು ಸ್ವತಃ ತಮ್ಮ ಪರಿಚಯ ಹೇಳಿಕೊಂಡರು.

‘ನಾನು ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತೇನೆ. ನನ್ನ ಹೆಸರು ಸಲ್ಮಾನ್​ ಖಾನ್​’ ಎಂದು ಅವರು ಪರಿಚಯ ಹೇಳಿಕೊಂಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಷ್ಟು ದೊಡ್ಡ ಸ್ಟಾರ್​ ನಟನಾದರೂ ಕೂಡ ಯಾವುದೇ ಗರ್ವ ಇಲ್ಲದೇ ಇನ್ನೊರ್ವ ಸೂಪರ್​ ಸ್ಟಾರ್​ ಎದುರು ತಮ್ಮನ್ನು ತಾವು ಪರಿಚಯ ಮಾಡಿಕೊಂಡಿದ್ದಕ್ಕಾಗಿ ಸಲ್ಲುಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಂದೇ ಫ್ರೇಮ್​ನಲ್ಲಿ ಸಲ್ಮಾನ್​ ಖಾನ್​ ಮತ್ತು ಜಾನ್​ ಟ್ರವೋಲ್ಟ ಅವರನ್ನು ನೋಡಿ ಅಭಿಮಾನಿಗಳಯ ಖುಷಿಪಡುತ್ತಿದ್ದಾರೆ.

ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಲ್ಮಾನ್​ ಖಾನ್​ ಮಾತನಾಡಿದರು. ‘ನೀವು ನನ್ನನ್ನು 12 ವರ್ಷದ ಹುಡುಗನಾಗಿದ್ದಾಗ ನೋಡಿದ್ರಿ. ಈಗ ನನಗೆ 56 ವರ್ಷ ವಯಸ್ಸು. ಜನರನ್ನು ಮನರಂಜಿಸುವುದು ನನಗೆ ಇಷ್ಟ. ಹಾಗಾಗಿ ನನ್ನ ಜರ್ನಿ ಇಂದು ಮತ್ತೆ ಆರಂಭ ಆಗಿದೆ. ನನಗೆ ಸೌದಿ ಅರೇಬಿಯಾದಲ್ಲಿ ಸಿಕ್ಕ ಯಶಸ್ಸು ತುಂಬ ದೊಡ್ಡದು’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

‘ನಿಮ್ಮನ್ನು ಮುಟ್ಟಬಹುದಾ?’: ಸಲ್ಮಾನ್​ ಖಾನ್​​ ಭೇಟಿ ಮಾಡಿದ ಮೊದಲ ದಿನವೇ ನಟಿಯ ವಿಚಿತ್ರ ಬೇಡಿಕೆ

‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್​ ಜಡಿದ ಸಲ್ಮಾನ್​ ಖಾನ್

Follow us on

Related Stories

Most Read Stories

Click on your DTH Provider to Add TV9 Kannada