ಪುರುಷರ ಟಾಯ್ಲೆಟ್ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ-ಆಲಿಯಾ ಭಟ್; ಇದರ ಹಿಂದಿದೆ ಅಚ್ಚರಿಯ ಕಥೆ
ಕೋಲ್ಡ್ ಪ್ಲೇ ಕನ್ಸರ್ಟ್ಗಾಗಿ ಬರ್ಲಿನ್ಗೆ ತೆರಳಿದಾಗ ನಡೆದ ಘಟನೆ ಇದಾಗಿದೆ. ದೀಪಿಕಾ ಜತೆ ಆಲಿಯಾ ಕೂಡ ಇದ್ದರು. ಮಹಿಳೆಯರು ಬಳಕೆ ಮಾಡುತ್ತಿದ್ದ ವಾಷ್ರೂಂನಲ್ಲಿ ಉದ್ದನೆಯ ಸಾಲಿತ್ತು. ಆಗ ದೀಪಿಕಾ ಹಾಗೂ ಆಲಿಯಾ ಇಬ್ಬರೂ ತೆರಳಿದ್ದು ಬಾಯ್ಸ್ ಟಾಯ್ಲೆಟ್ಗೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ‘ಗೆಹರಾಯಿಯಾ’ (Gehraiyaan) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ನಾನಾ ಮಾಧ್ಯಮಗಳಿಗೆ ದೀಪಿಕಾ ಪಡುಕೋಣೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಚ್ಚರಿಯ ವಿಚಾರಗಳನ್ನು ಅವರು ಬಿಚ್ಚಿಡುತ್ತಿದ್ದಾರೆ. ಬರ್ಲಿನ್ನಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ದೀಪಿಕಾ ಈಗ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಏಕೆಂದರೆ ದೀಪಿಕಾ ಹಾಗೂ ಆಲಿಯಾ ಭಟ್ (Alia Bhatt) ಅಂದು ಪುರುಷರ ಟಾಯ್ಲೆಟ್ಗೆ ನುಗ್ಗಿದ್ದರು! ಇದಕ್ಕೆ ಒಂದು ಮಹತ್ವ ಕಾರಣವಿದೆ.
ಕೋಲ್ಡ್ ಪ್ಲೇ ಕನ್ಸರ್ಟ್ಗಾಗಿ ಬರ್ಲಿನ್ಗೆ ತೆರಳಿದಾಗ ನಡೆದ ಘಟನೆ ಇದಾಗಿದೆ. ದೀಪಿಕಾ ಜತೆ ಆಲಿಯಾ ಕೂಡ ಇದ್ದರು. ಮಹಿಳೆಯರು ಬಳಕೆ ಮಾಡುತ್ತಿದ್ದ ವಾಷ್ರೂಂನಲ್ಲಿ ಉದ್ದನೆಯ ಸಾಲಿತ್ತು. ಆಗ ದೀಪಿಕಾ ಹಾಗೂ ಆಲಿಯಾ ಇಬ್ಬರೂ ತೆರಳಿದ್ದು ಬಾಯ್ಸ್ ಟಾಯ್ಲೆಟ್ಗೆ. ಸಂದರ್ಶನದ ವೇಳೆ ಈ ವಿಚಾರ ಹೇಳುತ್ತಿದ್ದಂತೆ ಅವರ ಜತೆ ಇದ್ದ ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್ ಅಚ್ಚರಿ ಹೊರಹಾಕಿದ್ದಾರೆ.
ಸಂದರ್ಶನದ ವೇಳೆ ದೀಪಿಕಾಗೆ ಪ್ರಶ್ನೆ ಒಂದು ಎದುರಾಯಿತು. ‘ಗರ್ಲ್ಸ್ ಟಾಯ್ಲೆಟ್ ಕ್ಲೋಸ್ ಆಗಿರುತ್ತದೆ. ಆಗ ಬಾಯ್ಸ್ ಟಾಯ್ಲೆಟ್ ಬಳಸುತ್ತೀರಾ?’ ಎಂದು ಕೇಳಲಾಯಿತು. ಇದಕ್ಕೆ ಮೊದಲು ಉತ್ತರಿಸಿದ್ದು ಅನನ್ಯಾ ಪಾಂಡೆ. ‘ಸ್ವಚ್ಛವಾಗಿದ್ದರೆ ನಾನು ಹುಡುಗರ ಶೌಚಾಲಯ ಬಳಕೆ ಮಾಡುತ್ತೇನೆ’ ಎಂದರು. ಈ ವೇಳೆ ಮಾತನಾಡಿದ ಸಿದ್ಧಾಂತ್, ‘ನೂರಕ್ಕೆ ನೂರು ಹೇಳುತ್ತೇನೆ, ದೀಪಿಕಾ ಆ ಕೆಲಸ ಮಾಡುವುದಿಲ್ಲ’ ಎಂದರು. ಇದಕ್ಕೆ ದೀಪಿಕಾ ನಗುತ್ತಲೇ ಉತ್ತರಿಸಿದರು.
‘ನಾನು ಬಾಯ್ಸ್ ಟಾಯ್ಲೆಟ್ ಬಳಸುತ್ತೇನೆ. ಈ ಮೊದಲು ಕೂಡ ಆ ರೀತಿ ಮಾಡಿದ್ದೇನೆ. ನಾನು ಮತ್ತು ಆಲಿಯಾ ಗರ್ಲ್ಸ್ ಟಾಯ್ಲೆಟ್ಗೆ ಹೋದೆವು. ಆದರೆ, ಉದ್ದನೆಯ ಸಾಲು ಇತ್ತು. ಹೀಗಾಗಿ ಪುರುಷರ ಶೌಚಾಲಯಕ್ಕೆ ಲಗ್ಗೆ ಇಟ್ಟೆವು. ನನಗೆ ಶೌಚಾಲಯ ಬಳಸುವ ಸಂದರ್ಭ ಬಂದರೆ, ಎಲ್ಲಾದರೂ ಸರಿ ನಾನು ಅದನ್ನು ಬಳಸುತ್ತೇನೆ. ಸ್ವಚ್ಛತೆ ಅಲ್ಲಿ ಮುಖ್ಯವಾಗುವುದೇ ಇಲ್ಲ’ ಎಂದಿದ್ದಾರೆ ದೀಪಿಕಾ.
‘ಗೆಹರಾಯಿಯಾ’ ಚಿತ್ರದಲ್ಲಿ ಸಂಬಂಧಗಳ ಬಗ್ಗೆ ಹೇಳಲಾಗಿದೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಆಲಿಶಾ (ದೀಪಿಕಾ ಪಡುಕೋಣೆ) ಹಾಗೂ ಕರಣ್ (ಧೈರ್ಯ ಕರ್ವ) ಪ್ರೇಮಿಗಳು. ಆದರೆ, ಇವರ ನಡುವೆ ಯಾವುದೂ ಸರಿ ಇಲ್ಲ. ಇವರ ಸಂಬಂಧ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಆಗ ಆಲಿಶಾಗೆ ಪರಿಚಯ ಆಗೋದು, ಝೈನ್ (ಸಿದ್ಧಾಂತ್ ಚತುರ್ವೇದಿ). ಆಲಿಶಾ ಕಸಿನ್ ಟಿಯಾ (ಅನನ್ಯಾ ಪಾಂಡೆ) ಹಾಗೂ ಝೈನ್ ಮದುವೆ ನಿಗದಿ ಆಗಿದೆ. ಆದರೆ, ಝೈನ್ ಹಾಗೂ ಆಲಿಶಾ ನಡುವೆ ಅಫೇರ್ ಬೆಳೆಯುತ್ತದೆ. ಇದಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ಹೇಳಲಾಗಿದೆ. ಈ ಸಿನಿಮಾದ ಕಥೆ ಹೇಗೆ ಸಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: Deepika Padukone: ‘ಗೆಹರಾಯಿಯಾ’ ಚಿತ್ರದ ಪ್ರಚಾರದಲ್ಲಿ ಮಿಂಚಿದ ದೀಪಿಕಾ; ಫೋಟೋಗಳು ಇಲ್ಲಿವೆ
ಕಿಸ್ಸಿಂಗ್ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್ನಲ್ಲಿ ಹೈಲೈಟ್ ಆಯ್ತು ಸಂಬಂಧಗಳ ವಿಚಾರ