‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ

‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ಮಸ್ತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕಿಸ್ಸಿಂಗ್​ ದೃಶ್ಯಗಳು ಈ ಟ್ರೇಲರ್​ನಲ್ಲಿ ಎಲ್ಲರ ಕಣ್ಣು ಕುಕ್ಕಿದೆ. ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ಧಾಂತ್​​ ಚತುರ್ವೇದಿ​​ ನಡುವೆ ಸಾಕಷ್ಟು ಕಿಸ್ಸಿಂಗ್​ ದೃಶ್ಯಗಳಿವೆ.

TV9kannada Web Team

| Edited By: Madan Kumar

Jan 28, 2022 | 9:28 AM

ನಟಿಮಣಿಯರು ತೊಡುವ ಡ್ರೆಸ್​ ಎಲ್ಲರ ಗಮನ ಸೆಳೆಯುತ್ತದೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ, ಕೆಲವೊಮ್ಮೆ ಅವರು ಹಾಕಿಕೊಳ್ಳುವ ಡ್ರೆಸ್​ಗಳಿಂದ ಟ್ರೋಲ್ ಆದ ಉದಾಹರಣೆ ಸಾಕಷ್ಟಿದೆ. ಈಗ ದೀಪಿಕಾ ಪಡುಕೋಣೆ (Deepika Padukone) ಕೂಡ ಇದೇ ವಿಚಾರಕ್ಕೆ ಟ್ರೋಲ್​ ಆಗಿದ್ದಾರೆ. ಅವರು ‘ಗೆಹರಾಯಿಯಾ’ (Gehraiyaan) ಸಿನಿಮಾ ಪ್ರಮೋಷನ್​ ವೇಳೆ ತೊಟ್ಟ ಡ್ರೆಸ್​ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ಕೆಲವರು ಇದು ರಣವೀರ್​ ಸಿಂಗ್​ ಡ್ರೆಸ್​ ಎಂದು ಟೀಕೆ ಮಾಡಿದ್ದಾರೆ. ‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ಮಸ್ತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಕಿಸ್ಸಿಂಗ್​ ದೃಶ್ಯಗಳು ಈ ಟ್ರೇಲರ್​ನಲ್ಲಿ ಎಲ್ಲರ ಕಣ್ಣು ಕುಕ್ಕಿದೆ. ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ಧಾಂತ್​​ ಚತುರ್ವೇದಿ​​ ನಡುವೆ ಸಾಕಷ್ಟು ಕಿಸ್ಸಿಂಗ್​ ದೃಶ್ಯಗಳಿವೆ. ಸಿನಿಮಾದಲ್ಲಿ ಮಾತ್ರವಲ್ಲದೆ, ಸಿನಿಮಾ ಪ್ರಚಾರದಲ್ಲೂ ದೀಪಿಕಾ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ದೀಪಿಕಾ ಬ್ಲೇಜರ್​ ಡ್ರೆಸ್​ ಹಾಕಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳನ್ನು ಪಾಪರಾಜಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ಕೆಲವರು ಇದನ್ನು ರಣವೀರ್​ ಸಿಂಗ್​ ಅವರ ಡ್ರೆಸ್ ಎಂದು ಟೀಕೆ ಮಾಡಿದ್ದಾರೆ. ಆದರೆ, ನಟಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ರಣವೀರ್​ ಸಿಂಗ್​ ಚಿತ್ರ-ವಿಚಿತ್ರ ಬಟ್ಟೆ ತೊಡಲು ಎತ್ತಿದ ಕೈ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ತುಂಬಾನೇ ವಿಚಿತ್ರ ಬಟ್ಟೆ ತೊಟ್ಟು ಕಾಣಿಸಿಕೊಂಡ ಉದಾಹರಣೆ ಸಾಕಷ್ಟಿದೆ. ಈ ಕಾರಣಕ್ಕೆ ದೀಪಿಕಾ ಅವರನ್ನು ರಣವೀರ್​ ಸಿಂಗ್​ಗೆ ಹೋಲಿಕೆ ಮಾಡಿ ಟ್ರೋಲ್​ ಮಾಡಲಾಗುತ್ತಿದೆ.

‘ಗೆಹರಾಯಿಯಾ’ ಚಿತ್ರವನ್ನು ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾ ತುಂಬ ರೊಮ್ಯಾಂಟಿಕ್​ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್​​ನಲ್ಲಿ ಸಾಕ್ಷಿ ಸಿಕ್ಕಿದೆ.  ‘ಗೆಹರಾಯಿಯಾ’​ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ನಟಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರ ಫೆಬ್ರವರಿ 11ರಂದು ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ:

Deepika Padukone: ‘ಗೆಹರಾಯಿಯಾ’ ಚಿತ್ರದ ಪ್ರಚಾರದಲ್ಲಿ ಮಿಂಚಿದ ದೀಪಿಕಾ; ಫೋಟೋಗಳು ಇಲ್ಲಿವೆ

ಇನ್ನೂ ಐದು ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ರಣವೀರ್​ ಸಿಂಗ್​? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ

Follow us on

Related Stories

Most Read Stories

Click on your DTH Provider to Add TV9 Kannada