‘ನಿಮ್ಮನ್ನು ಮುಟ್ಟಬಹುದಾ?’: ಸಲ್ಮಾನ್​ ಖಾನ್​​ ಭೇಟಿ ಮಾಡಿದ ಮೊದಲ ದಿನವೇ ನಟಿಯ ವಿಚಿತ್ರ ಬೇಡಿಕೆ

‘ನಿಮ್ಮನ್ನು ಮುಟ್ಟಬಹುದಾ?’: ಸಲ್ಮಾನ್​ ಖಾನ್​​ ಭೇಟಿ ಮಾಡಿದ ಮೊದಲ ದಿನವೇ ನಟಿಯ ವಿಚಿತ್ರ ಬೇಡಿಕೆ
ಪ್ರಗ್ಯಾ ಜೈಸ್ವಾಲ್, ಸಲ್ಮಾನ್ ಖಾನ್

‘ಮೊದಲ ದಿನ ಸಲ್ಮಾನ್​ ಖಾನ್​ ಅವರನ್ನು ಭೇಟಿ ಆದಾಗ ನಾನು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ನನಗೆ ಅರಿವು ಇರಲಿಲ್ಲ’ ಎಂದು ನಟಿ ಪ್ರಗ್ಯಾ ಜೈಸ್ವಾಲ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Jan 24, 2022 | 10:08 AM

ಬಾಲಿವುಡ್​ನ ಬಹುಬೇಡಿಕೆಯ ನಟನಾಗಿ ಸಲ್ಮಾನ್​ ಖಾನ್​ (Salman Khan) ಮಿಂಚುತ್ತಿದ್ದಾರೆ. ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು (Salman Khan Fans) ಇದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಸಲ್ಮಾನ್​ ಖಾನ್​ ಎಂದು ಅಚ್ಚುಮೆಚ್ಚು. ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಅಂತ ಎಷ್ಟೋ ಮಂದಿ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಅಂಥ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಒಂದು ವೇಳೆ ಭೇಟಿಯಾಗುವ ಅವಕಾಶ ಸಿಕ್ಕರೂ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಇತ್ತೀಚೆಗೆ ನಟಿ ಪ್ರಗ್ಯಾ ಜೈಸ್ವಾಲ್​ ಅವರಿಗೆ ಹಾಗೆಯೇ ಆಯಿತು. ಸಲ್ಮಾನ್​ ಖಾನ್​ ಎಂದರೆ ಪ್ರಗ್ಯಾ ಜೈಸ್ವಾಲ್ (Pragya Jaiswal)​ ಅವರಿಗೆ ಸಖತ್​ ಇಷ್ಟ. ಜೀವನದಲ್ಲಿ ಮೊದಲ ಬಾರಿಗೆ ಸಲ್ಲು ಅವರನ್ನು ಭೇಟಿ ಮಾಡಿದಾಗ ವಿಚಿತ್ರ ಆಸೆಯನ್ನು ಅವರು ವ್ಯಕ್ತಪಡಿಸಿದರು. ‘ನಿಮ್ಮನ್ನು ಮುಟ್ಟಬಹುದೇ’ ಎಂದು ಪ್ರಗ್ಯಾ ಜೈಸ್ವಾಲ್​ ನೇರವಾಗಿ ಕೇಳಿಬಿಟ್ಟರು. ಅಷ್ಟಕ್ಕೂ ಆ ದಿನ ಯಾಕೆ ಹೀಗಾಯಿತು ಎಂಬುದು ಅವರೇ ಈಗ ವಿವರಿಸಿದ್ದಾರೆ. ‘ಮೇ ಚಲಾ’ ಮ್ಯೂಸಿಕ್​ ವಿಡಿಯೋದಲ್ಲಿ ಪ್ರಗ್ಯಾ ಜೈಸ್ವಾಲ್​ ಮತ್ತು ಸಲ್ಮಾನ್​ ಖಾನ್​ ಅವರು ಜೊತೆಯಾಗಿ ನಟಿಸಿದ್ದಾರೆ. ಮೊದಲ ದಿನದ ಶೂಟಿಂಗ್​ ಅನುಭವದ ಬಗ್ಗೆ ಈಗ ಅವರು ಮಾತನಾಡಿದ್ದಾರೆ.

ಗಾಯಕ/ಸಂಗೀತ ನಿರ್ದೇಶಕ ಗುರು ರಂಧವಾ ಮತ್ತು ಸಲ್ಮಾನ್​ ಖಾನ್​ ಪ್ರೇಯಸಿ ಎನ್ನಲಾದ ಯುಲಿಯಾ ವಂಟೂರ್​ ಅವರು ಜೊತೆಯಾಗಿ ‘ಮೇ ಚಾಲಾ’ ಹಾಡು ತಯಾರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಈ ಮ್ಯೂಸಿಕ್​ ವಿಡಿಯೋಗೆ ಅಭಿಮಾನಿಗಳಿಗೆ ಮೆಚ್ಚುಗೆ ಸಿಕ್ಕಿದೆ. ಅದರ ಶೂಟಿಂಗ್​ ಸಲುವಾಗಿ ಮೊದಲ ದಿನ ಸೆಟ್​ಗೆ ಹೋಗಿದ್ದಾಗ ಸಲ್ಮಾನ್​ ಖಾನ್​ ಅವರನ್ನು ಕಂಡು ನಟಿ ಪ್ರಗ್ಯಾ ಜೈಸ್ವಾಲ್​ ಅವರಿಗೆ ಎಲ್ಲಿಲ್ಲದ ಖುಷಿ ಆಗಿತ್ತು. ಅಂದಿನ ಅನುಭವನ್ನು ಅವರೀಗ ಹಂಚಿಕೊಂಡಿದ್ದಾರೆ.

‘ಮೊದಲ ದಿನ ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಆದಾಗ ನಾನು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ಅರಿವು ನನಗೆ ಇರಲಿಲ್ಲ. ಸಲ್ಮಾನ್​ ಖಾನ್​ ಅವರಂಥ ದೊಡ್ಡ ಸ್ಟಾರ್​ ನಟನನ್ನು ಭೇಟಿಯಾದಾಗ ಅವರಿಗೆ ಕಿರಿಕಿರಿ ಆಗುವಂತೆ ನಾವು ನಡೆದುಕೊಳ್ಳಬಾರದು. ಅಪ್ಪಿತಪ್ಪಿಯೂ ಕೂಡ ಅವರಿಗೆ ಕೋಪ ಬರುವಂತೆ ನಾವು ವರ್ತಿಸಬಾರದು. ಹಾಗಾಗಿ ನಾನು ಹೆಚ್ಚಿನ ಎಚ್ಚರಿಕೆಯಿಂದ ನಡೆದುಕೊಂಡೆ. ನಿಮ್ಮನ್ನು ನಾನು ಮುಟ್ಟಬಹುದೇ ಅಂತ ಮೊದಲ ಬಾರಿಗೆ ಅನುಮತಿ ಕೇಳಿದೆ’ ಎಂದು ಪ್ರಗ್ಯಾ ಜೈಸ್ವಾಲ್​ ಹೇಳಿದ್ದಾರೆ.

‘ಅದೊಂದು ರೊಮ್ಯಾಂಟಿಕ್​ ಸಾಂಗ್​. ಅದರಲ್ಲಿ ನಟಿಸುವಾಗ ಇಬ್ಬರ ನಡುವೆ ಕೆಮಿಸ್ಟ್ರೀ ಚೆನ್ನಾಗಿ ಇರಬೇಕಾಗದ್ದು ಅತ್ಯಗತ್ಯ. ಅದಕ್ಕಾಗಿ ಸಲ್ಮಾನ್​ ಖಾನ್​ ಅವರು ಒಳ್ಳೆಯ ಮೂಡ್​ನಲ್ಲಿ ಇರುವಂತೆ ನೋಡಿಕೊಳ್ಳಬೇಕಿತ್ತು. ಈಕೆ ಅತಿಯಾಗಿ ಆಡ್ತಾ ಇದ್ದಾಳೆ ಎಂಬ ಮಾತು ಅವರಿಂದ ಬಾರದಂತೆ ಎಚ್ಚರಿಕೆ ವಹಿಸಬೇಕಿತ್ತು. ಹಾಗಾಗಿ ನಿಮ್ಮನ್ನು ಮುಟ್ಟಬಹುದೇ ಅಂತ ಅನುಮತಿ ಕೇಳಿದೆ. ಖಂಡಿತವಾಗಿಯೂ ಮುಟ್ಟಬಹುದು ಅಂತ ಸಲ್ಮಾನ್​ ಖಾನ್ ಅವರು ಒಪ್ಪಿಗೆ ನೀಡಿದರು’ ಎಂದು ಆ ದಿನವನ್ನು ಪ್ರಗ್ಯಾ ಜೈಸ್ವಾಲ್​ ಮೆಲುಕು ಹಾಕಿದ್ದಾರೆ.

ಕಳೆದ ವರ್ಷ ಡಿ.17ರಂದು ಸಲ್ಮಾನ್​ ಖಾನ್​ ಅವರ ಬರ್ತ್​ಡೇ ಆಚರಿಸಲಾಯಿತು. ಪನ್ವೇಲ್​ ಫಾರ್ಮ್​ಹೌಸ್​ನಲ್ಲಿ ಅದ್ದೂರಿಯಾಗಿ ನಡೆದ ಬರ್ತ್​ಡೇ ಪಾರ್ಟಿಗೆ ಪ್ರಗ್ಯಾ ಜೈಸ್ವಾಲ್​ ಅವರನ್ನೂ ಆಹ್ವಾನಿಸಲಾಗಿತ್ತು. ಅಂದಿನ ಫೋಟೋವನ್ನು ಪ್ರಗ್ಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಲ್ಲುಗೆ ವಿಶ್​ ಮಾಡಿದ್ದರು.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್​ ಜಡಿದ ಸಲ್ಮಾನ್​ ಖಾನ್

Follow us on

Related Stories

Most Read Stories

Click on your DTH Provider to Add TV9 Kannada