ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ
ಪಲಕ್ ತಿವಾರಿ, ಇಬ್ರಾಹಿಂ ಅಲಿ ಖಾನ್

ಕ್ಯಾಮೆರಾ ಕಾಣುತ್ತಿದ್ದಂತೆಯೇ ಇಬ್ರಾಹಿಂ ಅಲಿ ಖಾನ್​ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ. ಆದರೆ ಪಲಕ್​ ತಿವಾರಿ ಅವರು ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದರು.

TV9kannada Web Team

| Edited By: Madan Kumar

Jan 23, 2022 | 4:18 PM

ಸೆಲೆಬ್ರಿಟಿಗಳ ದುನಿಯಾದಲ್ಲಿ ಡೇಟಿಂಗ್​ ತುಂಬ ಕಾಮನ್​. ಆದರೆ ಜನರ ಕಣ್ಣು ತಪ್ಪಿಸಿ ತಿರುಗಾಡುವುದು ಅಷ್ಟು ಸುಲಭವಲ್ಲ. ಸ್ಟಾರ್​ ನಟ-ನಟಿಯರು ಎಲ್ಲಿಗೆ ಹೋದರೂ ಕೂಡ ಅವರ ಹಿಂದೆ ಪಾಪರಾಜಿ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ನಟ ಸೈಫ್​ ಅಲಿ ಖಾನ್​ (Saif Ali Khan) ಅವರ ಹಿರಿಯ ಪುತ್ರ ಇಬ್ರಾಹಿಂ ಅಲಿ ಖಾನ್​ ವಿಚಾರದಲ್ಲಿಯೂ ಅದೇ ರೀತಿ ಆಗಿದೆ. ಇತ್ತೀಚೆಗೆ ನಟಿ ಪಲಕ್​ ತಿವಾರಿ (Palak Tiwari) ಜೊತೆ ಅವರು ಡೇಟಿಂಗ್​ಗೆ ತೆರಳಿರುವುದು ಗೊತ್ತಾಗಿದೆ. ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಅವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಇಬ್ರಾಹಿಂ ಅಲಿ ಖಾನ್​ (Ibrahim Ali Khan) ಯಾವುದೇ ಮುಜುಗರಕ್ಕೆ ಒಳಗಾಗಿಲ್ಲ. ಆದರೆ ನಟಿ ಪಲಕ್​ ತಿವಾರಿ ಅವರು ಯಾಕೋ ಕೊಂಚ ಕಸಿವಿಸಿಗೆ ಒಳಗಾದಂತೆ ಕಂಡರು. ತಮ್ಮ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವುದನ್ನು ತಪ್ಪಿಸಿಕೊಳ್ಳಲು ಅವರು ಮುಖ ಮುಚ್ಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಇಂಟರ್​ನೆಟ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇಬ್ರಾಹಿಂ ಅಲಿ ಖಾನ್​ ಮತ್ತು ಪಲಕ್​ ತಿವಾರಿ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ.

ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್​ ಅವರಿಗೆ ಈಗಿನ್ನೂ 20ರ ಹರೆಯ. ನಟಿ ಪಲಕ್​ ತಿವಾರಿ ಅವರಿಗೆ 21 ವರ್ಷ ವಯಸ್ಸು. ಮೂಲಗಳ ಪ್ರಕಾರ, ಶುಕ್ರವಾರ (ಜ.21) ರಾತ್ರಿ ಮುಂಬೈನ ಬಾಂದ್ರದಲ್ಲಿರುವ ಒಂದು ರೆಸ್ಟೋರೆಂಟ್​ಗೆ ಈ ಜೋಡಿ ತೆರಳಿತ್ತು. ಊಟ ಮುಗಿಸಿ ಹೊರಬರುವಾಗ ಪಾಪರಾಜಿ ಕ್ಯಾಮೆರಾ ಕಣ್ಣಿಗೆ ಇಬ್ಬರೂ ಕಾಣಿಸಿಕೊಂಡಿದ್ದಾರೆ.

ಕ್ಯಾಮೆರಾ ಕಾಣುತ್ತಿದ್ದಂತೆಯೇ ಇಬ್ರಾಹಿಂ ಅಲಿ ಖಾನ್​ ಏನೂ ತಲೆ ಕೆಡಿಸಿಕೊಂಡಿಲ್ಲ. ಕ್ಯಾಮೆರಾಗಳ ಕಡೆಗೆ ಕೈ ಬೀಸಿದ ಅವರು, ನಂತರ ಕಾರಿನೊಳಗೆ ಹೋಗಿ ಕುಳಿತುಕೊಂಡರು. ಆದರೆ ಪಲಕ್​ ಅವರು ಇಬ್ರಾಹಿಂ ಹಿಂದೆ ಅಡಗಿಕೊಂಡು, ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಆ ಕ್ಷಣದ ಫೋಟೋ ಮತ್ತು ವಿಡಿಯೋಗಳು ಸಖತ್​ ವೈರಲ್​ ಆಗುತ್ತಿವೆ.

ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಶ್ವೇತಾ ತಿವಾರಿ ಅವರ ಪುತ್ರಿಯೇ ಪಲಕ್​ ತಿವಾರಿ. ಪಲಕ್​ ಕೂಡ ಬಣ್ಣ ಲೋಕದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕಿರುಚಿತ್ರ ಮತ್ತು ಮ್ಯೂಸಿಕ್​ ವಿಡಿಯೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇಬ್ರಾಹಿಂ ಅಲಿ ಖಾನ್​ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಈ ಮೊದಲು ಬೇರೆ ಹುಡುಗಿಯರ ಜೊತೆ ಇಬ್ರಾಹಿಂ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ಅವರು ಬಾಯಿ ಬಿಟ್ಟಿಲ್ಲ. ಈಗ ಪಲಕ್​ ಮತ್ತು ಇಬ್ರಾಹಿಂ ನಡುವಿನ ಆಪ್ತತೆ ಎಲ್ಲರ ಕಣ್ಣು ಕುಕ್ಕುತ್ತಿದೆ.

ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಅವರು 1991ರಲ್ಲಿ ಮದುವೆ ಆಗಿದ್ದರು. ಆ ಜೋಡಿಗೆ ಸಾರಾ ಅಲಿ ಖಾನ್​ ಮತ್ತು ಇಬ್ರಾಹಿಂ ಅಲಿ ಖಾನ್​ ಜನಿಸಿದರು. 2004ರಲ್ಲಿ ಅಮೃತಾ ಸಿಂಗ್​ ಮತ್ತು ಸೈಫ್​ ವಿಚ್ಛೇದನ ಪಡೆದರು. ಡಿವೋರ್ಸ್​ ಬಳಿಕವೂ ಮೊದಲ ಪತ್ನಿಯ ಮಕ್ಕಳ ಜೊತೆ ಸೈಫ್​ ಆಪ್ತವಾಗಿದ್ದಾರೆ. ಅವರ ಕಾಳಜಿ ವಹಿಸುತ್ತಿದ್ದಾರೆ. ಪುತ್ರಿ ಸಾರಾ ಅಲಿ ಖಾನ್​ ಈಗಾಗಲೇ ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಗುರುಸಿಕೊಂಡಿದ್ದಾರೆ. ಅವರ ವೃತ್ತಿಜೀವನಕ್ಕೆ ಸೈಫ್​ ಬೆಂಬಲ ನೀಡುತ್ತಿದ್ದಾರೆ. ಇಬ್ರಾಹಿಂ ಅಲಿ ಖಾನ್​ ಹೀರೋ ಆಗುವುದಕ್ಕೂ ಮುನ್ನವೇ ಡೇಟಿಂಗ್​ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ:

ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಾರಾ ಅಲಿ ಖಾನ್​; ಸೈಫ್​ ಪುತ್ರಿಯ ಫೋಟೋ ವೈರಲ್​

ಸೈಫ್​ ಪುತ್ರ ತೈಮೂರ್​ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್​; ಯಾರಿದು?

Follow us on

Most Read Stories

Click on your DTH Provider to Add TV9 Kannada