AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್​ ಪುತ್ರ ತೈಮೂರ್​ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್​; ಯಾರಿದು?

ಈ ಬಾಲಕನ ಹೆಸರು ಜಾರ್ಯನ್ ಥಾಪರ್​. ತೈಮೂರ್​ ಮತ್ತು ಜಾರ್ಯನ್​ ಫೋಟೋಗಳನ್ನು ಅಕ್ಕ-ಪಕ್ಕ ಇರಿಸಿ ಪೋಸ್ಟ್​ ಮಾಡಲಾಗಿದೆ. ಅದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸೈಫ್​ ಪುತ್ರ ತೈಮೂರ್​ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್​; ಯಾರಿದು?
ತೈಮೂರ್​, ಜಾರ್ಯನ್ ಥಾಪರ್​
TV9 Web
| Edited By: |

Updated on:Oct 28, 2021 | 8:37 AM

Share

ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ಕಾಣಿಸಿಕೊಳ್ಳೋಕೆ ಬಿಡುವುದಿಲ್ಲ. ಆದರೆ ಕೆಲವರು ಇಂಥ ನಿರ್ಬಂಧಗಳನ್ನು ಹಾಕಿಕೊಳ್ಳುವುದಿಲ್ಲ. ಕರೀನಾ ಕಪೂರ್​ ಖಾನ್​ ಮತ್ತು ಸೈಫ್​ ಅಲಿ ಖಾನ್​ ಪುತ್ರ ತೈಮೂರ್​ ಅಲಿ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾನೆ. ಆತ ಎಲ್ಲೇ ಹೋದರೂ ಪಾಪರಾಜಿ ಕ್ಯಾಮೆರಾಗಳು ಅವನನ್ನು ಹಿಂಬಾಲಿಸುತ್ತವೆ. ಅಚ್ಚರಿ ಎಂದರೆ ಈಗ ಸೋಶಿಯಲ್​ ಮೀಡಿಯಾದಲ್ಲಿ ಓರ್ವ ಬಾಲಕನ ಫೋಟೋ ವೈರಲ್​ ಆಗಿದೆ. ಆದರೆ ಅದು ತೈಮೂರ್​ ಅಲ್ಲವೇ ಅಲ್ಲ. ಆದರೆ ಈ ಬಾಲಕ ಕೂಡ ತೈಮೂರ್​ ರೀತಿಯೇ ಇದ್ದಾನೆ ಎಂಬುದು ವಿಶೇಷ.

ಸೆಲೆಬ್ರಿಟಿ ಫೋಟೋಗ್ರಾಫರ್​ ವೈರಲ್​ ಭಯಾನಿ ಅವರು ಈ ಬಾಲಕನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈತನ ಹೆಸರು ಜಾರ್ಯನ್ ಥಾಪರ್​. ತೈಮೂರ್​ ಮತ್ತು ಜಾರ್ಯನ್​ ಫೋಟೋಗಳನ್ನು ಅಕ್ಕ-ಪಕ್ಕ ಇರಿಸಿ ಪೋಸ್ಟ್​ ಮಾಡಲಾಗಿದೆ. ಅದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೇರ್​ಸ್ಟೈಲ್​, ಡ್ರೆಸಿಂಗ್ ಸೆನ್ಸ್​ ಎಲ್ಲದರಲ್ಲಿಯೂ ಈ ಇಬ್ಬರು ಬಾಲಕರ ನಡುವೆ ಸಾಮ್ಯತೆ ಇದೆ.

ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಜಾರ್ಯನ್​ ಫೋಟೋಗೆ ಭರ್ಜರಿ ಲೈಕ್ಸ್​ ಸಿಕ್ಕಿದೆ. ಜಾರ್ಯನ್​ ಥಾಪರ್​ನ ಬೇರೆ ಬೇರೆ ಫೋಟೋಗಳು ಕೂಡ ವೈರಲ್​ ಆಗುತ್ತಿವೆ. ಈತನನ್ನು ತೈಮೂರ್​ ಜೊತೆ ಹೋಲಿಕೆ ಮಾಡುತ್ತಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪ್ರತಿ ಮಕ್ಕಳಿಗೆ ಬೇರೆ ಬೇರೆ ಐಡೆಂಟಿಟಿ ಇರುತ್ತದೆ. ಈ ರೀತಿ ಹೋಲಿಕೆ ಮಾಡುವುದು ಸರಿಯಲ್ಲ. ಜಾರ್ಜನ್​ ಥಾಪರ್​ನನ್ನು ಅವನ ಪಾಡಿಗೆ ಬಿಟ್ಟುಬಿಡಿ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಈ ವೈರಲ್​ ಫೋಟೋ ಬಗ್ಗೆ ಸದ್ಯ ಕರೀನಾ ಅವರಾಗಲೀ ಸೈಫ್​ ಅಲಿ ಖಾನ್​ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕರೀನಾ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಆ ಚಿತ್ರಕ್ಕೆ ಆಮಿರ್​ ಖಾನ್​ ಹೀರೋ. ಅತ್ತ, ಸೈಫ್​ ಅಲಿ ಖಾನ್​ ಕೂಡ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ಆದಿಪುರುಷ್​’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ‘ಭೂತ್​ ಪೊಲೀಸ್​’ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

ಇದನ್ನೂ ಓದಿ:

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

ಹುಟ್ಟುಹಬ್ಬದ ದಿನ ಸೈಫ್​ ಜತೆ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ ಕರೀನಾ

Published On - 8:20 am, Thu, 28 October 21

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ