ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಾರಾ ಅಲಿ ಖಾನ್​; ಸೈಫ್​ ಪುತ್ರಿಯ ಫೋಟೋ ವೈರಲ್​

ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಾರಾ ಅಲಿ ಖಾನ್​; ಸೈಫ್​ ಪುತ್ರಿಯ ಫೋಟೋ ವೈರಲ್​
ಸಾರಾ ಅಲಿ ಖಾನ್​, ಅಮೃತಾ ಸಿಂಗ್

ಈ ಫೋಟೋಗಳಿಗೆ ಫ್ಯಾನ್ಸ್​ ಬಗೆಬಗೆಯ ಕಮೆಂಟ್​ ಮಾಡಿದ್ದಾರೆ. ಎಲ್ಲ ಧರ್ಮಗಳನ್ನೂ ಸಾರಾ ಅಲಿ ಖಾನ್​ ಅವರು ಸಮನಾಗಿ ಗೌರವಿಸುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

TV9kannada Web Team

| Edited By: Madan Kumar

Jan 16, 2022 | 10:20 AM

ನಟಿ ಸಾರಾ ಅಲಿ ಖಾನ್​ (Sara Ali Khan) ಅವರು ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ತಮ್ಮದೇ ನಿಯಮಗಳನ್ನು ಹಾಕಿಕೊಂಡಿರುವ ಅವರಿಗೆ ಸ್ಟಾರ್​ ನಟರ ಜೊತೆ ಅಭಿನಯಿಸುವ ಅವಕಾಶ ಸಿಗುತ್ತಿದೆ. ಇತ್ತೀಚೆಗೆ ಅವರು ನಟಿಸಿದ ‘ಅತರಂಗೀ ರೇ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಆ ಸಿನಿಮಾದಲ್ಲಿ ಅವರು ಅಕ್ಷಯ್​ ಕುಮಾರ್​ ಮತ್ತು ಧನುಷ್​​ ಜೊತೆ ನಟಿಸಿದ್ದಾರೆ. ‘ಅತರಂಗಿ ರೇ’ ಚಿತ್ರದ ಗೆಲುವಿನ ನಂತರದಲ್ಲಿ ಸಾರಾ ಅಲಿ ಖಾನ್​ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಅವರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವುದು ಹೈಲೈಟ್​ ಆಗಿದೆ. ಸೈಫ್​ ಅಲಿ ಖಾನ್​ (Saif Ali Khan) ಪುತ್ರಿಯ ಈ ಭಕ್ತಿ ಕಂಡು ಕೆಲವರು ಫಿದಾ ಆಗಿದ್ದಾರೆ. ಅವರ ಜೊತೆಗೆ ತಾಯಿ ಅಮೃತಾ ಸಿಂಗ್​ (Amrita Singh) ಕೂಡ ಸಾಥ್​ ನೀಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ಇರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಸಾರಾ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಭೇಟಿ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಇಬ್ಬರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸಾರಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಜೈ ಮಹಾಕಾಳ, ಜೈ ಭೋಲೇನಾಥ್​ ಎಂಬ ಹ್ಯಾಶ್​ಟ್ಯಾಗ್​​ಗಳನ್ನು ಅವರು ಬಳಸಿದ್ದಾರೆ.

ಈ ಫೋಟೋಗಳಿಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಎಲ್ಲ ಧರ್ಮಗಳನ್ನೂ ಸಾರಾ ಅಲಿ ಖಾನ್​ ಅವರು ಸಮನಾಗಿ ಗೌರವಿಸುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಅವರು ಕೇದಾರನಾಥ ದೇವಸ್ಥಾನಕ್ಕೆ ತೆರಳಿದ್ದು ದೊಡ್ಡ ಸುದ್ದಿ ಆಗಿತ್ತು. ಒಂದು ವರ್ಗದ ನೆಟ್ಟಿಗರು ಸಾರಾ ಅಲಿ ಖಾನ್​ ಅವರ ನಡೆಯನ್ನು ವಿರೋಧಿಸಿದ್ದರು. ಆದರೆ ಅದಕ್ಕೆಲ್ಲ ಸಾರಾ ತಲೆ ಕೆಡಿಸಿಕೊಂಡಿಲ್ಲ. ತಮಗೆ ಇಷ್ಟ ಬಂದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ.

ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ ಅವರು, ತಂದೆ-ತಾಯಿ ವಿಚ್ಛೇದನ ಪಡೆದ ಸಂದರ್ಭವನ್ನು ಈ ಹಿಂದೆ ನೆನಪಿಸಿಕೊಂಡಿದ್ದರು. ಸೈಫ್ ಹಾಗೂ ಅಮೃತಾ ವಿಚ್ಛೇದನ ಪಡೆಯುವಾಗ ಸಾರಾಗೆ ಕೇವಲ ಒಂಬತ್ತು ವರ್ಷ. ‘ಅಪ್ಪ-ಅಮ್ಮ ಜೊತೆಯಿದ್ದಾಗ ಏನೇನೂ ಸಂತಸವಾಗಿರಲಿಲ್ಲ. ಆದ್ದರಿಂದಲೇ ಅವರ ಬೇರ್ಪಡುವಿಕೆ ಒಂದರ್ಥದಲ್ಲಿ ಇಬ್ಬರಿಗೂ ಒಳ್ಳೆಯದೇ ಆಯಿತು’ ಎಂದು ಸಾರಾ ಹೇಳಿದ್ದರು.

ಇದನ್ನೂ ಓದಿ:

ಫ್ಯೂಚರ್​ ಗಂಡನಿಗೆ ಷರತ್ತು ಹಾಕಿದ ಸಾರಾ ಅಲಿ ಖಾನ್​; ಇದನ್ನು ಪಾಲಿಸದಿದ್ದರೆ ಇಲ್ಲ ಮದುವೆ

Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್

Follow us on

Related Stories

Most Read Stories

Click on your DTH Provider to Add TV9 Kannada