Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್

Sara Ali Khan | Saif Ali Khan: ಬಾಲಿವುಡ್​ನಲ್ಲಿ ಭರವಸೆ ಮೂಡಿಸುತ್ತಿರುವ ನಟಿ ಸಾರಾ ಅಲಿ ಖಾನ್. ಇದೀಗ ಅವರ ನಟನೆಯ ‘ಅತರಂಗಿ ರೇ’ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರ ನೋಡಿ ಸಾರಾ ತಂದೆ ತಾಯಿ ಹೇಳಿದ್ದೇನು?

Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ತಮ್ಮ ಕುಟುಂಬದವರೊಂದಿಗೆ
Follow us
TV9 Web
| Updated By: shivaprasad.hs

Updated on:Dec 28, 2021 | 10:48 AM

ಬಾಲಿವುಡ್​​ನ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಅವರ ನೂತನ ಚಿತ್ರ ‘ಅತರಂಗಿ ರೇ’ (Atrangi Re) ಇತ್ತೀಚೆಗೆ ತೆರೆ ಕಂಡಿದೆ. ಬಹುದೊಡ್ಡ ಯಶಸ್ಸಿಗೆ ಹಂಬಲಿಸುತ್ತಿರುವ ಸಾರಾ ‘ಅತರಂಗಿ ರೇ’ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದ್ದಾರೆ. ಇದೀಗ ನಟಿ ಸಂದರ್ಶನವೊಂದರಲ್ಲಿ ಚಿತ್ರಕ್ಕೆ ತಂದೆ ಸೈಫ್ ಹಾಗೂ ತಾಯಿ ಅಮೃತಾ ಸಿಂಗ್ (Amritha Singh) ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿಸಿದ್ದಾರೆ. ‘ಅತರಂಗಿ ರೇ’ ಚಿತ್ರ ನೋಡಿ ಸಾರಾ ತಾಯಿ ಅಮೃತಾ ಹಾಗೂ ಸೈಫ್ ಕಣ್ಣೀರು ಹಾಕಿದ್ದಾರಂತೆ. ಇದು ವಿಚಿತ್ರ ಸಾಧನೆಯ ಭಾವ ನೀಡಿದೆ ಎಂದು ಸಾರಾ ಹೇಳಿಕೊಂಡಿದ್ದಾರೆ. ಈ ಕುರಿತು ಮತ್ತಷ್ಟು ಮಾತನಾಡಿರುವ ಸಾರಾ, ‘‘ತಾಯಿ ಅಮೃತಾ ಭಾವನಾತ್ಮಕ ವ್ಯಕ್ತಿ. ಅವರು ಚಿತ್ರ ನೋಡಿ ಕಣ್ಣೀರು ಹಾಕಿದ್ದಾರೆ. ಆದರೆ ತಂದೆ ಸೈಫ್ ಬಹಳ ಗಟ್ಟಿ ವ್ಯಕ್ತಿ. ಅವರು ಅಷ್ಟು ಸುಲಭವಾಗಿ ಅಳುವುದಿಲ್ಲ. ಆದರೆ ಚಿತ್ರ ನೋಡಿ ಅವರೂ ಭಾವುಕರಾಗಿದ್ದಾರೆ. ಪೋಷಕರು ನನ್ನ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ತಂದೆ- ತಾಯಿ ಭಾವುಕರಾಗಿ ನಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುವುದು, ಒಂದು ರೀತಿಯ ವಿಚಿತ್ರ(weird) ಸಾಧನೆಯ ಭಾವ ನೀಡುತ್ತದೆ’’ ಎಂದಿದ್ದಾರೆ.

ಸಹೋದರ ಇಬ್ರಾಹಿಂ ಅವರ ಪ್ರತಿಕ್ರಿಯೆಯನ್ನು ಹೇಳಲು ಸಾರಾ ಮರೆಯಲಿಲ್ಲ. ಕಾಲೇಜು ದಿನಗಳಿಂದ ಇಬ್ಬರೂ ಒಬ್ಬರಿಗೊಬ್ಬರು ರೇಗಿಸಿಕೊಂಡು ಬೆಳೆದಿದ್ದೇವೆ. ಆದರೆ ಈಗ ಆತ ನನ್ನ ಸಾಧನೆ ನೋಡಿ ಹೆಮ್ಮೆ ಪಟ್ಟಿದ್ದಾನೆ. ಅಲ್ಲದೇ ಇದನ್ನು ಬೇರೆಯವರಿಗೂ ತಿಳಿಸುತ್ತಿದ್ದಾನೆ. ಇದು ಬಹಳ ಸಂತಸ ತಂದಿದೆ ಎಂದು ಸಾರಾ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಾರಾ ಅಲಿ ಖಾನ್ ‘ಅತರಂಗಿ ರೇ’ ಚಿತ್ರದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ‘‘ಇದನ್ನು ಹೇಗೆ ಬರೆಯುವುದೆಂದು ತಿಳಿಯುತ್ತಿಲ್ಲ. ಆದರೆ 2020ರಲ್ಲಿ ನನಗೆ ಸಂಭವಿಸಿದ ಏಕೈಕ ಒಳ್ಳೆಯ ವಿಚಾರ ಇದು. ಇಡೀ ಜೀವಮಾನಕ್ಕಾಗುವಷ್ಟು ಸುಮಧುರ ನೆನಪು ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು’’ ಎಂದು ಸಾರಾ ಬರೆದಿದ್ದರು.

ಸಾರಾ ಅಭಿನಯಕ್ಕೆ ಸಹನಟ ಧನುಷ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಶಹಬ್ಬಾಸ್ ಎಂದಿದ್ದರು. ಅಲ್ಲದೇ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ನಟಿ ಖುಷಿಯಾಗಿದ್ದಾರೆ. ಡಿಸೆಂಬರ್ 24ರಂದು ‘ಅತರಂಗಿ ರೇ’ ಡಿಸ್ನೆ+ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧನುಷ್, ಸಾರಾ ಅಲಿ ಖಾನ್ ಹಾಗೂ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Year Ender 2021: ಈ ವರ್ಷ ಮದುವೆ ಆದ ಸ್ಯಾಂಡಲ್​ವುಡ್​ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ

Published On - 8:28 am, Tue, 28 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ