ಸಿಕ್ಸ್ ಪ್ಯಾಕ್ ಮಾಡಿಕೊಂಡು ಬಂದ್ರೂ ಈ ನಟನಿಗೆ ಟ್ರೋಲ್ ಕಾಟ ತಪ್ಪಲಿಲ್ಲ; ಟೈಗರ್ ಶ್ರಾಫ್ ಮಾಡಿದ ತಪ್ಪೇನು?
ನೆಟ್ಟಿಗರು ಮಾಡುವ ಕೆಟ್ಟ ಕಮೆಂಟ್ಗಳಿಗೆಲ್ಲ ಟೈಗರ್ ಶ್ರಾಫ್ ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಕೆಲಸದ ಕಡೆಗೆ ಅವರು ಗಮನ ಹರಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ನಟ ಟೈಗರ್ ಶ್ರಾಫ್ (Tiger Shroff) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ವಾರ್’ ರೀತಿಯ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಸಿಕ್ಸ್ ಪ್ಯಾಕ್ಸ್ (Six Pack) ಮಾಡಿಕೊಂಡು ಕಣ್ಣು ಕುಕ್ಕುತ್ತಿದ್ದಾರೆ. ನಟಿ ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಕಾರಣದಿಂದಲೂ ಟೈಗರ್ ಶ್ರಾಫ್ ಆಗಾಗ ಸುದ್ದಿ ಆಗುತ್ತಾರೆ. ಇದೆಲ್ಲದರ ನಡುವೆ ಅವರೀಗ ಟ್ರೋಲ್ ಆಗಿದ್ದಾರೆ. ಎಲ್ಲ ವಿಚಾರದಲ್ಲಿಯೂ ಪರ್ಫೆಕ್ಟ್ ಎನಿಸಿಕೊಳ್ಳುವ ಅವರನ್ನು ಬಟ್ಟೆಯ ವಿಷಯದಲ್ಲಿ ಕೆಲವರು ಗೇಲಿ ಮಾಡಿದ್ದಾರೆ. ಟೈಗರ್ ಶ್ರಾಫ್ಗೆ ಡ್ರೆಸಿಂಗ್ ಸೆನ್ಸ್ ಇಲ್ಲ ಎಂದು ನೆಟ್ಟಿಗರು ಟ್ರೋಲ್ (Troll) ಮಾಡುತ್ತಿದ್ದಾರೆ. ಟೈಗರ್ ಶ್ರಾಫ್ ಈ ರೀತಿ ಟ್ರೋಲ್ ಆಗಲು ಕಾರಣ ಕೂಡ ಇದೆ.
ಇತ್ತೀಚೆಗೆ ಟೈಗರ್ ಶ್ರಾಫ್ ಅವರ ಫೋಟೋವೊಂದನ್ನು ಪಾಪರಾಜಿ Manav Manglani ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋದಲ್ಲಿ ಟೈಗರ್ ಶ್ರಾಫ್ ಧರಿಸಿರುವ ಬಟ್ಟೆ ಕಂಡು ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಪದೇ ಪದೇ ಒಂದೇ ರೀತಿಯ ಕಾಸ್ಟ್ಯೂಮ್ ಧರಿಸುತ್ತಾರೆ ಎಂದು ಜನರು ಟೀಕಿಸಿದ್ದಾರೆ.
‘ಇವರದ್ದು ಯಾವಾಗಲೂ ಇದೇ ಸ್ಟೈಲ್ ಆಯಿತು. ಬನಿಯನ್ ರೀತಿಯ ಹಾಫ್ ಶರ್ಟ್ ಹಾಕುತ್ತಾರೆ. ಬಾಡಿ ಬೆಳೆಸಿದ್ದಾರೆ, ಬೈಸೆಪ್ಸ್ ಚೆನ್ನಾಗಿದೆ. ಹಾಗಾಗಿ ಅದನ್ನು ಪ್ರದರ್ಶನ ಮಾಡಲು ಈ ರೀತಿ ಬಟ್ಟೆ ಹಾಕ್ತಾರೆ. ಬಾಡಿ ಬೆಳೆಸಬೇಕು, ಆದರೆ ತೋರಿಸಿಕೊಂಡು ಓಡಾಡಬಾರದು. ಟೈಗರ್ ಶ್ರಾಫ್ ಅವರೇ.. ನೀವು ಮೊದಲು ಡ್ರೆಸಿಂಗ್ ಸೆನ್ಸ್ ಕಲಿತುಕೊಳ್ಳಿ’ ಎಂದು ನೆಟ್ಟಿಗರೊಬ್ಬರು ಮಾಡಿರುವ ಕಮೆಂಟ್ ವೈರಲ್ ಆಗಿದೆ.
View this post on Instagram
ಈ ಬಗೆಯ ಕಮೆಂಟ್ಗಳಿಗೆಲ್ಲ ಟೈಗರ್ ಶ್ರಾಫ್ ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಅವರು ಕೆಲಸದ ಕಡೆಗೆ ಗಮನ ಹರಿಸಿದ್ದಾರೆ. ಬಾಲಿವುಡ್ನಲ್ಲಿ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ‘ವಾರ್’, ‘ಬಾಘಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಬಾಘಿ 3’, ‘ಹೀರೋಪಂಥಿ 2’, ‘ಗಣಪತ್’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಜತೆ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ:
ರಾಣಿ ಮುಖರ್ಜಿ-ಟೈಗರ್ ಶ್ರಾಫ್ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ
ಟೈಗರ್ ಶ್ರಾಫ್ ಸಿನಿಮಾಗೆ ಜೇಮ್ಸ್ ಬಾಂಡ್ ಸ್ಟಂಟ್ ಡೈರೆಕ್ಟರ್; ರಷ್ಯಾದಲ್ಲಿ ನಡೆಯಲಿದೆ ಶೂಟ್