ಹನಿಮೂನ್​ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ಮಾಲ್ಡೀವ್ಸ್​ ನನ್ನ ಹ್ಯಾಪಿ ಪ್ಲೇಸ್ ಎಂದ ನಟಿ  

ಹನಿಮೂನ್​ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ಮಾಲ್ಡೀವ್ಸ್​ ನನ್ನ ಹ್ಯಾಪಿ ಪ್ಲೇಸ್ ಎಂದ ನಟಿ  
ಕತ್ರಿನಾ ಕೈಫ್​

ಕತ್ರಿನಾ ಕೈಫ್​ ಬೀಚ್​ನಲ್ಲಿ ಕುಳಿತಿದ್ದಾರೆ. ಬೀಚ್​ನಲ್ಲಿ ಸಮಯ ಕಳೆದಿರುವ ಮೂರು ಫೋಟೋಗಳನ್ನು ಅವರು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಫೋಟೋ ಪೋಸ್ಟ್ ಮಾಡಿದ ಎರಡು ಗಂಟೆಯಲ್ಲಿ 15 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Jan 24, 2022 | 4:02 PM

ಬಾಲಿವುಡ್​ನ ​ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರ ಮದುವೆ ಡಿ.9ರಂದು ಅದ್ದೂರಿಯಾಗಿ ನಡೆಯಿತು. ಇದಾದ ಮರುದಿನವೇ ಅವರು ಹನಿಮೂನ್​ ಸಲುವಾಗಿ ಮಾಲ್ಡೀವ್ಸ್ ವಿಮಾನ ಹತ್ತಿದ್ದರು ಎನ್ನಲಾಗಿತ್ತು. ನಾಲ್ಕು ದಿನ ಮಾಲ್ಡೀವ್ಸ್​ನಲ್ಲಿ ಸಮಯ ಕಳೆದು ಭಾರತಕ್ಕೆ ವಾಪಸ್ ಬಂದಿತ್ತು ಈ ಜೋಡಿ. ಆದರೆ, ಎಲ್ಲಿಯೂ ಇವರು ಹನಿಮೂನ್​ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್​ ಫೋಟೋ ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ (Maldives)​ ಸಮುದ್ರ ತೀರದಲ್ಲಿ ನಿಂತಿರುವ ಚಿತ್ರವನ್ನು ಕತ್ರಿನಾ ಪೋಸ್ಟ್​ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.  

ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಅದ್ದೂರಿಯಾಗಿ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ ಮದುವೆ ನೆರವೇರಿತ್ತು. ಕಳೆದ ವರ್ಷ ಸೆಲೆಬ್ರಿಟಿ ವಲಯದಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಕತ್ರಿನಾ-ವಿಕ್ಕಿ ಮದುವೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮದುವೆ ಬಳಿಕ ಫೋಟೋ ಹಂಚಿಕೊಂಡು ದಂಪತಿ ಸಂಭ್ರಮಿಸಿದ್ದರು. ಮದುವೆ ಬಳಿಕ ಕತ್ರಿನಾ ಅಡುಗೆ ಕಲಿಯುತ್ತಿರುವುದು ವಿಶೇಷ. ಈಗ ಅವರು ಹನಿಮೂನ್​ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ಮೈ ಹ್ಯಾಪಿ ಪ್ಲೇಸ್’​ ಎಂದು ಅವರು ಹಾಕಿಕೊಂಡಿದ್ದಾರೆ.

ಕತ್ರಿನಾ ಕೈಫ್​ ಬೀಚ್​ನಲ್ಲಿ ಕುಳಿತಿದ್ದಾರೆ. ಬೀಚ್​ನಲ್ಲಿ ಸಮಯ ಕಳೆದಿರುವ ಮೂರು ಫೋಟೋಗಳನ್ನು ಅವರು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಫೋಟೋ ಪೋಸ್ಟ್ ಮಾಡಿದ ಎರಡು ಗಂಟೆಯಲ್ಲಿ 15 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ. ವಿಶೇಷ ಎಂದರೆ, ಇವರ ಮದುವೆ ದಿನ ಹಾಕಿದ ಫೋಟೋ ಒಂದು ಕೋಟಿಗೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

View this post on Instagram

A post shared by Katrina Kaif (@katrinakaif)

ಚಿತ್ರರಂಗದಲ್ಲಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತುಂಬ ಬ್ಯುಸಿ ಆಗಿದ್ದಾರೆ. ಇಬ್ಬರಿಗೂ ಸಖತ್​ ಡಿಮ್ಯಾಂಡ್​ ಇದೆ. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಈಗಾಗಲೇ ಒಪ್ಪಿಕೊಂಡಿರುವ ಅನೇಕ ಸಿನಿಮಾಗಳ ಶೂಟಿಂಗ್​ ಬಾಕಿ ಇದೆ. ಮದುವೆಗಾಗಿ ಒಂದಷ್ಟು ದಿನ ವಿರಾಮ ಪಡೆದುಕೊಂಡಿದ್ದ ಅವರು ಈಗ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಜೀ ಲೇ ಝರಾ’, ‘ಫೋನ್​ ಭೂತ್​’ ಮುಂತಾದ ಸಿನಿಮಾಗಳ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ‘ಸ್ಯಾಮ್​ ಬಹದ್ದೂರ್​’ ಸಿನಿಮಾದ ಚಿತ್ರೀಕರಣದಲ್ಲಿ ವಿಕ್ಕಿ ಪಾಲ್ಗೊಳ್ಳುತ್ತಿದ್ದಾರೆ.

ಅಡುಗೆ ಕಲಿಯುತ್ತಿರುವ ಕತ್ರಿನಾ..

ಕತ್ರಿನಾ ಕೈಫ್​ ಲಂಡನ್​ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್​ ಆಗಿದ್ದಾರೆ. ಈಗ ವಿಕ್ಕಿ ಕೌಶಲ್​ ಅವರನ್ನು ಮದುವೆಯಾಗಿ ಪಂಜಾಬ್​ನ ಸೊಸೆ ಆಗಿದ್ದಾರೆ. ಮದುವೆ ಬಳಿಕ ಅವರು ಪಂಜಾಬಿ ಸಂಪ್ರದಾಯವನ್ನು ಪಾಲಿಸಲು ಆರಂಭಿಸಿದ್ದಾರೆ. ಪಂಜಾಬಿ ಶೈಲಿಯ ಕೆಲವು ತಿನಿಸುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಅವರು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು.  ವಿಕ್ಕಿ ಕೌಶಲ್​ ಅವರ ತಾಯಿ ವೀಣಾ ಕೌಶಲ್​ ಅವರು ಕತ್ರಿನಾ ಕೈಫ್​ಗೆ ಅಡುಗೆ ಹೇಳಿಕೊಡುತ್ತಿದ್ದಾರೆ. ರೆಸಿಪಿ ತಿಳಿದುಕೊಳ್ಳಲು ಯೂಟ್ಯೂಬ್​ನಲ್ಲಿ ಸಾಕಷ್ಟು ವಿಡಿಯೋಗಳನ್ನು ಕೂಡ ಕತ್ರಿನಾ ನೋಡುತ್ತಿದ್ದಾರೆ. ಇದರ ಜೊತೆಗೆ ಪಂಜಾಬಿ ಭಾಷೆಯನ್ನು ಕಲಿತುಕೊಳ್ಳಲು ಕೂಡ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿವೆ.

ಇದನ್ನೂ ಓದಿ: ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ಕ್ಲಾಸ್​; ಇದು ಹೊಸ ಸಿನಿಮಾ ಅಪ್​ಡೇಟ್​

ಮುಂಬೈ ಏರ್​ಪೋರ್ಟ್​ನಲ್ಲಿ ಹಸಿರು ಪೈಜಾಮಾ ಧರಿಸಿ ಮಿಂಚಿದ ಕತ್ರಿನಾ; ಅದರ ಬೆಲೆ ಕೇಳಿ ದಂಗಾದ ಫ್ಯಾಶನ್ ಪ್ರಿಯರು

Follow us on

Related Stories

Most Read Stories

Click on your DTH Provider to Add TV9 Kannada