ಮದುವೆ ವಿಚಾರ ಖಚಿತಪಡಿಸಿದ ಮೌನಿ ರಾಯ್; ಅವರು ಹೇಳಿದ ವಿಧಾನ ಹೇಗಿತ್ತು ನೋಡಿ
2004ರಲ್ಲಿ ತೆರೆಗೆ ಬಂದ ‘ರನ್’ ಸಿನಿಮಾದಲ್ಲಿ ಮೌನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ವರ್ಷ ಬಿಟ್ಟು ಪಂಜಾಬಿ ಸಿನಿಮಾದಲ್ಲಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ‘ಗೋಲ್ಡ್’ ಸಿನಿಮಾ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ.
‘ಕೆಜಿಎಫ್’ (KGF Chpater 1) ಹಿಂದಿ ವರ್ಷನ್ನಲ್ಲಿ ನಟಿ ಮೌನಿ ರಾಯ್ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಅವರು ಸೊಂಟ ಬಳುಕಿಸಿದ ಪರಿಗೆ ಎಲ್ಲರೂ ಫಿದಾ ಆಗಿದ್ದರು. ಇದಲ್ಲದೆ, ಕೆಲವು ಸಿನಿಮಾಗಳಲ್ಲಿ ಮೌನಿ ರಾಯ್ (Mouni Roy) ನಟಿಸಿದ್ದಾರೆ. ಇತ್ತೀಚೆಗೆ ಅವರ ಮದುವೆ ವಿಚಾರದ ಬಗ್ಗೆ ಸಾಕಷ್ಟು ವರದಿಗಳು ಹರಿದಾಡಿದ್ದವು. ಬಾಯ್ಫ್ರೆಂಡ್ ಸೂರಜ್ ನಂಬಿಯಾರ್ ಜತೆ ಮೌನಿ ರಾಯ್ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಅವರು ಮೌನ ವಹಿಸಿದ್ದರು. ಮೌನಿ ಈ ಬಗ್ಗೆ ಮೌನ ಮುರಿದಿದ್ದಾರೆ. ತಾವು ಮದುವೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.
2004ರಲ್ಲಿ ತೆರೆಗೆ ಬಂದ ‘ರನ್’ ಸಿನಿಮಾದಲ್ಲಿ ಮೌನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ವರ್ಷ ಬಿಟ್ಟು ಪಂಜಾಬಿ ಸಿನಿಮಾದಲ್ಲಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ‘ಗೋಲ್ಡ್’ ಸಿನಿಮಾ ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಅದೇ ವರ್ಷ ‘ಕೆಜಿಎಫ್’ ಹಿಂದಿ ವರ್ಷನ್ನ ‘ಗಲಿ ಗಲಿ..’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು. ಹಲವು ಧಾರಾವಾಹಿಗಳಲ್ಲೂ ಮೌನಿ ನಟಿಸಿದ್ದಾರೆ. ಮ್ಯೂಸಿಕ್ ವಿಡಿಯೋದಲ್ಲೂ ಅವರು ಹೆಜ್ಜೆ ಹಾಕಿದ್ದಾರೆ. ಈಗ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಶೀಘ್ರವೇ ಅವರ ಮದುವೆ ಆಗಲಿದೆ ಎನ್ನಲಾಗಿತ್ತು. ಈಗ ಮೌನಿ ಇದನ್ನು ಒಪ್ಪಿಕೊಂಡಿದ್ದಾರೆ.
ಮೌನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಮೌನಿಗೆ ಪಾಪರಾಜಿಗಳು ಅಭಿನಂದನೆ ಸಲ್ಲಿಸಿದ್ದಾರೆ. ‘ಮದುವೆ ಆಗುತ್ತಿರುವುದಕ್ಕೆ ಅಭಿನಂದನೆಗಳು ಮೌನಿ ಅವರೇ’ ಎಂದಿದ್ದಾರೆ ಪಾಪರಾಜಿಗಳು. ಇದಕ್ಕೆ ಅವರು ಧನ್ಯವಾದ ಹೇಳಿದ್ದಾರೆ. ಈ ಮೂಲಕ ತಾವು ಮದುವೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ವೈರಲ್ ಭಯಾನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೌನಿ ಅವರ ಡ್ರೆಸ್ ಕೂಡ ಅನೇಕರಿಗೆ ಇಷ್ಟವಾಗಿದೆ.
View this post on Instagram
ಜನವರಿ 27ರಂದು ಮೌನಿ ಅವರು ಗೋವಾದಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಕೊವಿಡ್ ಹೆಚ್ಚಿರುವ ಕಾರಣ ಕೇವಲ ಕುಟುಂಬದವರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ಈ ಯೋಜನೆ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಅವರು ಹೊಸ ಜೀವನ ಆರಂಭಿಸುವುದಕ್ಕೂ ಮೊದಲೇ ಅವರಿಗೆ ಶುಭಾಶಯಗಳು ಬರುತ್ತಿವೆ.
ಸೂರಜ್ ಅವರು ಉದ್ಯಮಿ. ದುಬೈನಲ್ಲಿ ಸೆಟಲ್ ಆಗಿದ್ದಾರೆ. ಅವರು ಈ ವಿಚಾರದ ಬಗ್ಗೆ ಮೌನ ವಹಿಸಿದ್ದೇ ಹೆಚ್ಚು. ಇಬ್ಬರೂ ಅನೇಕ ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್
ಫ್ರಾಕ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್: ಇಲ್ಲಿವೆ ನೋಡಿ ಫೋಟೋಗಳು