Shilpa Shetty: ಕಿಸ್ಸಿಂಗ್​ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ರಿಲೀಫ್​ ನೀಡಿದ ಕೋರ್ಟ್​

Shilpa Shetty: ಕಿಸ್ಸಿಂಗ್​ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ರಿಲೀಫ್​ ನೀಡಿದ ಕೋರ್ಟ್​
ಶಿಲ್ಪಾ ಶೆಟ್ಟಿ

ಅದು 2007ರ ಸಮಯ. ಶಿಲ್ಪಾ ಶೆಟ್ಟಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್​ ನಟ ರಿಚರ್ಡ್​ ಗಿಯರ್ ಅವರು ಕಾರ್ಯಕ್ರಮದಲ್ಲಿ ಶಿಲ್ಪಾಗೆ ಮುತ್ತಿಟ್ಟಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

TV9kannada Web Team

| Edited By: Rajesh Duggumane

Jan 25, 2022 | 12:52 PM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ವಿಚಾರದಲ್ಲಿ ಅವರು ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಕುಟುಂಬ, ಮಕ್ಕಳು ಎಂದು ಬ್ಯುಸಿ ಇರುವ ಶಿಲ್ಪಾ ಈಗ ಕಿಸ್ಸಿಂಗ್ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ದಶಕಗಳ ಹಿಂದಿನ ಪ್ರಕರಣದಲ್ಲಿ ಶಿಲ್ಪಾಗೆ ದೊಡ್ಡ ರಿಲೀಫ್​ ಸಿಕ್ಕಿದ್ದು, ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಾದರೆ ಏನಿದು ಪ್ರಕರಣ? ಶಿಲ್ಪಾ ವಿರುದ್ಧ ಕೇಸ್ ದಾಖಲಾಗಿದ್ದು ಏಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅದು 2007ರ ಸಮಯ. ಶಿಲ್ಪಾ ಶೆಟ್ಟಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್​ ನಟ ರಿಚರ್ಡ್​ ಗಿಯರ್​ ಅವರು ಕಾರ್ಯಕ್ರಮದಲ್ಲಿ ಶಿಲ್ಪಾಗೆ ಮುತ್ತಿಟ್ಟಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಅಶ್ಲೀಲತೆ ಮೆರೆದಿದ್ದಾರೆ ಎಂದು ಆರೋಪಿಸಿ ಶಿಲ್ಪಾ ಶೆಟ್ಟಿ ವಿರುದ್ಧ ಕೇಸ್​ ದಾಖಲಾಗಿತ್ತು. ಕಳೆದ 15 ವರ್ಷಗಳಿಂದ ಈ ಪ್ರಕರಣ ಕೋರ್ಟ್​ನಲ್ಲಿಯೇ ಇತ್ತು. ಈಗ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್​ ಸಿಕ್ಕಿದೆ.

ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೇತಕಿ ಚವಾಣ್​ ಪ್ರಕಾರ, 2007ರಲ್ಲಿ ಈ ಘಟನೆ ನಡೆದ ಬಳಿಕ ಶಿಲ್ಪಾ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದರು. ಪೊಲೀಸರ ವರದಿ ಹಾಗೂ ದಾಖಲೆಗಳನ್ನು ಪರಿಗಣಿಸಿದಾಗ ಶಿಲ್ಪಾ ಅವರ ವಿರುದ್ಧ ದಾಖಲಾದ ಪ್ರಕರಣ ಆಧಾರ ರಹಿತವಾದದ್ದು ಎಂಬುದು ಗೊತ್ತಾಗಿದೆ. ಹೀಗಾಗಿ ಪ್ರಕರಣವನ್ನು ಕೈ ಬಿಡಲಾಗಿದೆ.

ಅಶ್ಲೀಲತೆ ತೋರಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ವಿರುದ್ಧ ರಾಜಸ್ಥಾನದಲ್ಲಿ ಎರಡು​ ಹಾಗೂ ಗಜಿಯಾಬಾದ್​ನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಮುಂಬೈಗೆ ವರ್ಗಾಯಿಸಲು 2017ರಲ್ಲಿ ಸುಪ್ರೀಂಕೋರ್ಟ್​ ಅವಕಾಶ ನೀಡಿತ್ತು.  ಈ ಪ್ರಕರಣಗಳನ್ನು ಕೈಬಿಡುವಂತೆ ಶಿಲ್ಪಾ ಅವರು ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಪ್ರಕರಣದಲ್ಲಿ ಅವರಿಗೆ ರಿಲೀಫ್​ ಸಿಕ್ಕಿದೆ.

ರಾಜ್​ ಕುಂದ್ರಾ ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟಿ ಪಾಲಿಗೆ 2021 ತುಂಬಾನೇ ಕಹಿಯಾಗಿತ್ತು. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಜೈಲಿಗೆ ಹೋಗಿ ಬಂದರು. ಪತಿ ಇಂಥ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದು ಶಿಲ್ಪಾ ಶೆಟ್ಟಿಗೆ ತುಂಬಾನೇ ಮುಜುಗರ ತಂದಿತ್ತು. ಸಮಾಜದಲ್ಲಿ ತಲೆಎತ್ತಿಕೊಂಡು ಓಡಾಡೋಕೆ ಅವರಿಗೆ ಆಗುತ್ತಿರಲಿಲ್ಲ. ಜೈಲಿನಿಂದ ಹೊರ ಬಂದ ನಂತರದಲ್ಲಿ ರಾಜ್​ ಕುಂದ್ರಾ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಬದಲಿಗೆ, ಸೈಲೆಂಟ್​ ಆದರು. ಸೋಶಿಯಲ್​ ಮೀಡಿಯಾದಿಂದ ದೂರ ಉಳಿದುಕೊಂಡರು. ಇತ್ತೀಚೆಗೆ ಅವರು ಸೋಶೀಯಲ್​ ಮೀಡಿಯಾಗೆ ಕಂಬ್ಯಾಕ್​ ಮಾಡಿದ್ದರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’​ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ

Follow us on

Related Stories

Most Read Stories

Click on your DTH Provider to Add TV9 Kannada