8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’​ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ

ನಟಿ ಶಿಲ್ಪಾ ಶೆಟ್ಟಿ ಅವರು ತಮಗಾಗಿ ತರುವ ಬಾದಾಮಿಯನ್ನು ಇತರರು ತಿಂದು ಮುಗಿಸುತ್ತಾರೆ! ಅದು ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’​ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ
ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 09, 2022 | 9:48 AM

ಒಂದಿಲ್ಲೊಂದು ಕಾರಣಕ್ಕೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಸುದ್ದಿ ಆಗುತ್ತಲೇ ಇರುತ್ತಾರೆ. ಪತಿ ರಾಜ್​ ಕುಂದ್ರಾ (Raj Kundra) ಅವರಿಂದಾಗಿ ಒಂದಷ್ಟು ದಿನಗಳ ಕಾಲ ಶಿಲ್ಪಾ ಮುಜುಗರ ಅನುಭವಿಸುವಂತಾಯಿತು. ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ ಹೊತ್ತಿರುವ ರಾಜ್​ ಕುಂದ್ರಾ ಅವರು ಸದ್ಯ ತನಿಖೆ ಎದುರಿಸುತ್ತಿದ್ದಾರೆ. ಕಹಿ ಘಟನೆಯನ್ನೆಲ್ಲಾ ಬದಿಗಿಟ್ಟು ಶಿಲ್ಪಾ ಶೆಟ್ಟಿ ಅವರು ಮತ್ತೆ ಕೆಲಸದತ್ತ ಮುಖ ಮಾಡಿದ್ದಾರೆ. ಜನಪ್ರಿಯ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್’ (India’s Got Talent) ಕಾರ್ಯಕ್ರಮದಲ್ಲಿ ಅವರು ಜಡ್ಜ್​ ಆಗಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಅವರು ಕೇವಲ 8 ಬಾದಾಮಿಗಾಗಿ ಜಗಳ ಮಾಡಿದ್ದಾರೆ! ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇಂಡಿಯಾಸ್​ ಗಾಟ್​ ಟ್ಯಾಲೆಂಟ್​ ಕಾರ್ಯಕ್ರಮದ ಸೆಟ್​ಗೆ ಬರುವಾಗ ಶಿಲ್ಪಾ ಶೆಟ್ಟಿ ಅವರು ಬಾದಾಮಿ ಬೀಜಗಳನ್ನು ತರುತ್ತಾರೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಉಪಯೋಗಗಳಿವೆ. ಆದರೆ ಶಿಲ್ಪಾ ಶೆಟ್ಟಿ ತರುವ ಬಾದಾಮಿಯನ್ನು ಇತರರು ತಿಂದು ಮುಗಿಸುತ್ತಾರೆ! ಅದು ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

‘ಇವತ್ತು ನಾನು 6 ಬಾದಾಮಿ ತಂದಿದ್ದೇನೆ. ಕಳೆದ ಬಾರಿ ನಾನು 8 ಬಾದಾಮಿ ತಂದಿದ್ದೆ. ನನಗೆ ತಿನ್ನಲು ಸಿಕ್ಕಿದ್ದು ಒಂದು ಬಾದಾಮಿ ಮಾತ್ರ’ ಎಂದು ಅವರು ಟೇಬಲ್​ ಕುಟ್ಟಿ ಮಾತನಾಡಿದರು. ಇದನ್ನೆಲ್ಲ ಕೇಳಿಸಿಕೊಂಡ ಮತ್ತೋರ್ವ ಜಡ್ಜ್​, ಹಿರಿಯ ನಟಿ ಕಿರಣ್​ ಖೇರ್​ ಅವರು ಖಡಕ್​ ಉತ್ತರ ನೀಡಿದರು. ‘ನೀನು ಎಷ್ಟೊಂದು ಕಂಜೂಸ್. ಇಲ್ಲಿ ನಾವು ತುಂಬ ಜನ ಇದ್ದೇವೆ. ​ನೀನು ಕೇವಲ 6-8 ಬಾದಾಮಿ ತರುತ್ತೀದ್ದೀಯ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅದನ್ನು ಕೇಳಿ ಸೆಟ್​ನಲ್ಲಿ ಇದ್ದ ಎಲ್ಲರೂ ಜೋರಾಗಿ ನಕ್ಕರು.

ಒಟ್ಟಾರೆ ಈ ಪ್ರಸಂಗ ತಮಾಷೆಯಾಗಿತ್ತು. ಅದರ ಪ್ರೋಮೋವನ್ನು ಸೋನಿ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ನಟಿಯಾಗಿ, ಯೋಗ ತರಬೇತುದಾರಳಾಗಿ, ರಿಯಾಲಿಟಿ ಶೋಗಳ ಜಡ್ಜ್​ ಆಗಿ ಶಿಲ್ಪಾ ಶೆಟ್ಟಿ ಬ್ಯುಸಿ ಆಗಿದ್ದಾರೆ.

ಕೋರ್ಟ್​ನಲ್ಲಿದೆ ರಾಜ್​ ಕುಂದ್ರಾ ಪ್ರಕರಣ:

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರು ಸದ್ಯಕ್ಕೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರ ಕೇಸ್​ ಈಗ ಕೋರ್ಟ್​ನಲ್ಲಿದೆ. ಇತ್ತೀಚೆಗೆ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದರು. ‘ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದರಲ್ಲಿ ಸತ್ಯ ಗೆಲ್ಲುತ್ತದೆ. ನಾನು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ’ ಎಂದು ರಾಜ್​ ಕುಂದ್ರಾ ಹೇಳಿದ್ದರು.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ