Rashmika Mandanna: ಪರ- ವಿರೋಧದ ಚರ್ಚೆಗೆ ಕಾರಣವಾದ ರಶ್ಮಿಕಾ ದಿರಿಸು; ಕಾರಣವೇನು?

Rashmika Mandanna: ಪರ- ವಿರೋಧದ ಚರ್ಚೆಗೆ ಕಾರಣವಾದ ರಶ್ಮಿಕಾ ದಿರಿಸು; ಕಾರಣವೇನು?

TV9 Web
| Updated By: shivaprasad.hs

Updated on: Jan 25, 2022 | 6:23 PM

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಿಧ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಗ ಧರಿಸಿದ್ದ ಉಡುಪು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ಬಾಲಿವುಡ್, ಟಾಲಿವುಡ್ ಮೊದಲಾದ ಚಿತ್ರರಂಗಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿನ ಅವರ ಉಡುಗೆ ಟ್ರೋಲಿಗರಿಗೆ ಆಹಾರವಾಗಿದೆ. ಥರಹೇವಾರಿ ಕಾಮೆಂಟ್​ಗಳ ಮೂಲಕ ನೆಟ್ಟಿಗರು ರಶ್ಮಿಕಾರ ಕಾಲೆಳೆಯುತ್ತಿದ್ದಾರೆ. ಹಲವರು ನಟಿಯ ಬೆಂಬಲಕ್ಕೆ ನಿಂತಿದ್ದು, ಉಡುಪು ಅವರವರ ಇಷ್ಟ. ಇದನ್ನೆಲ್ಲಾ ಪ್ರಶ್ನಿಸುವುದು ನಿಲ್ಲಿಸುವುದು ಯಾವಾಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ರಶ್ಮಿಕಾ ಸದ್ಯ ‘ಪುಷ್ಪ: ದಿ ರೂಲ್’ ಚಿತ್ರೀಕರಣಕ್ಕೆ ಎದುರು ನೋಡುತ್ತಿದ್ದಾರೆ. ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು’, ಹಿಂದಿಯ ‘ಮಿಷನ್ ಮಜ್ನು’, ‘ಗುಡ್ ಬೈ’ ಮೊದಲಾದ ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ರಶ್ಮಿಕಾ ಬತ್ತಳಿಕೆಯಲ್ಲಿವೆ.

ರಶ್ಮಿಕಾ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ:

 

View this post on Instagram

 

A post shared by Viral Bhayani (@viralbhayani)

ಇದನ್ನೂ ಓದಿ:

Rashmika Mandanna: ಬಿ-ಟೌನ್​ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ರಶ್ಮಿಕಾ; ಇದಕ್ಕೆ ಕಾರಣ ಒಂದೇ ಒಂದು ಭೇಟಿ!

ಕರಣ್​ ಜೋಹರ್​ ಜತೆ ರಶ್ಮಿಕಾ ಮಂದಣ್ಣ ಸಿನಿಮಾ?