ವಸಾಯಿ ರೇಲ್ವೇ ಸ್ಟೇಷನ್ನಲ್ಲಿ ನಿಶ್ವಿತ ಸಾವಿನಿಂದ ಪಾರಾದ ಈ ವ್ಯಕ್ತಿ ನಿಸ್ಸಂದೇಹವಾಗಿ ಅದೃಷ್ಟವಂತರು!
ರೈಲು ಹತ್ತುವ ಪ್ರಯತ್ನದಲ್ಲಿ ಅವರು ಜಾರಿಬಿಡುತ್ತಾರೆ ಮತ್ತು ಬೋಗಿಯ ಬಾಗಿಲಿಗೆ ಇರುವ ಕಂಬಿಯನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ರೈಲು ಅವರನ್ನು ಸುಮಾರು 20 ಮೀಟರ್ವರೆಗೆ ಎಳೆದೊಯ್ಯುತ್ತದೆ. ಹಾಗೆ ಎಳೆಯುವಾಗ ಅವರೇನಾದರೂ ಟ್ರೇನಿನ ಕೆಳಗೆ ಜಾರಿದ್ದರೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತಿತ್ತು.
ರೇಲ್ವೆ ನಿಲ್ದಾಣದಲ್ಲಿ (railway station) ರೈಲು ನಿಲ್ಲುವ ಮುಂಚೆಯೇ ಹತ್ತುವ ಪ್ರಯತ್ನ ಮಾಡುವುದು ಇಲ್ಲವೇ ರೈಲು ಚಲಿಸಲಾರಂಭಿಸಿದ ನಂತರ ಒಡೋಡಿ ಹತ್ತುವುದು ಮತ್ತು ರೈಲುಗಾಡಿ (train) ಸ್ಟೇಷನ್ ನಲ್ಲಿ ನಿಲ್ಲುವ ಮೊದಲೇ ಇಳಯುವುದು-ಇಂಥ ದೃಶ್ಯಗಳು ಭಾರತದ ಎಲ್ಲ ರೇಲ್ವೇ ಸ್ಟೇಷನ್ಗಳಲ್ಲಿ ಕಂಡುಬರುತ್ತದೆ. ರೈಲಿನಲ್ಲಿ ನಿಯಮಿತವಾಗಿ ಪ್ರಯಾಣಿಸುವವರು (passengers) ಹಾಗೆ ಮಾಡುವುದುಂಟು ಮತ್ತು ಅವರು ಸುರಕ್ಷಿತವಾಗಿ ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಅದರೆ, ಹಾಗೆ ಮಾಡುವುದು ಗೊತ್ತಿಲ್ಲದವರು ವಿಡಿಯೋನಲ್ಲಿ ಕಾಣುವ ಅಪಾಯಗಳಿಗೆ ಸಿಕ್ಕುತ್ತಾರೆ. ನಾವು ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸುತ್ತೇವೆ. ಅನುಭವಸ್ಥರೇ ಅಗಲಿ ಅಥವಾ ಅನನುಭವಿಗಳು-ಚಲಿಸುವ ರೈಲಿನಲ್ಲಿ ಹತ್ತುವುದು ಮತ್ತು ಅದರಿಂದ ಇಳಿಯುವುದು ಸರ್ವಥಾ ತಪ್ಪು. ಹಾಗೆ ಮಾಡುವವರು ರೇಲ್ವೇ ಇಲಾಖೆಯಿಂದ ಜುಲ್ಮಾನೆಗೊಳಗಾಗುವ ಸಾಧ್ಯತೆ ಇರುತ್ತದೆ.
ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಬಚಾವಾದ ಈ ವ್ಯಕ್ತಿಯ ವಿಷಯಕ್ಕೆ ಬರೋಣ. ಈ ಘಟನೆ ಮಹಾರಾಷ್ಟ್ರದ ಮತ್ತು ಮುಂಬೈ ಮಹಾನಗರದ ಸಬರ್ಬ್ ಆಗಿರುವ ವಸಾಯಿ ರೇಲ್ವೇ ಸ್ಟೇಷನಲ್ಲಿ ನಡೆದಿದೆ. ಈ ವ್ಯಕ್ತಿಗೆ ರೈಲು ಚಲಿಸುವ ರೈಲು ಹತ್ತುವ ಅಂಥ ಆವಸರವೇನಿತ್ತೋ? ಅವರಿಗೆ ವಯಸ್ಸಾಗಿದೆ. ನಿಜ ಹೇಳಬೇಕೆಂದರೆ, ಅವರ ಪತ್ನಿಯ ತಾಳಿಭಾಗ್ಯ ಗಟ್ಟಿಯಾಗಿದೆ ಮಾರಾಯ್ರೇ. ಅವರು ನಿಶ್ವಿತವಾದ ಸಾವಿನಿಂದ ಬಚಾವಾದರು!
ರೈಲು ಹತ್ತುವ ಪ್ರಯತ್ನದಲ್ಲಿ ಅವರು ಜಾರಿಬಿಡುತ್ತಾರೆ ಮತ್ತು ಬೋಗಿಯ ಬಾಗಿಲಿಗೆ ಇರುವ ಕಂಬಿಯನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ರೈಲು ಅವರನ್ನು ಸುಮಾರು 20 ಮೀಟರ್ವರೆಗೆ ಎಳೆದೊಯ್ಯುತ್ತದೆ. ಹಾಗೆ ಎಳೆಯುವಾಗ ಅವರೇನಾದರೂ ಟ್ರೇನಿನ ಕೆಳಗೆ ಜಾರಿದ್ದರೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತಿತ್ತು. ಅದೃಷ್ಟವಶಾತ್ ಅವರು ಪ್ಲಾಟ್ಫಾರ್ಮ್ ಮೇಲೆ ಉಳಿದುಬಿಡುತ್ತಾರೆ.
ಅಲ್ಲಿಯೇ ಇದ್ದ ರೇಲ್ವೇ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಅವರ ನೆರವಿಗೆ ಧಾವಿಸುತ್ತರಾದರೂ ಅಷ್ಟ್ಹೊತ್ತಿಗಾಗಲೇ ಅಪಾಯ ತಪ್ಪಿರುತ್ತದೆ. ನಿಸ್ಸಂದೇಹವಾಗಿ ಈ ವ್ಯಕ್ತಿ ಅದೃಷ್ಟವಂತರು. ಈ ದೃಶ್ಯ ಸ್ಟೇಷನ್ನಲ್ಲಿರುವ ಸಿಸಿಟಿವಿ ಕೆಮೆರಾನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ‘ನಮ್ಮ ನಿರ್ಧಾರ ಬದಲಾಗಿಲ್ಲ’; ಮಗಳ ವೈರಲ್ ವಿಡಿಯೋ ಬಗ್ಗೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಪ್ರತಿಕ್ರಿಯೆ