ಪುನೀತ್ ಚಿತ್ರದ ಮೇಲೆ ಆಟೊಗ್ರಾಫ್ ನೀಡುವಂತೆ ಫ್ಯಾನ್ಸ್ ಮನವಿ; ಯುವ ರಾಜ್​ಕುಮಾರ್ ಪ್ರತಿಕ್ರಿಯೆ ಏನಿತ್ತು?

Yuva Rajkumar | Puneeth Rajkumar: ನಟ ಯುವ ರಾಜ್​ಕುಮಾರ್ ತಮ್ಮ ನಡವಳಿಕೆಯಿಂದ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ. ಘಟನೆಯೇನು? ವಿಡಿಯೋ ಇಲ್ಲಿದೆ.

TV9kannada Web Team

| Edited By: shivaprasad.hs

Jan 25, 2022 | 4:46 PM

ಈಗಾಗಲೇ ಸ್ಯಾಂಡಲ್​ವುಡ್​​ನಲ್ಲಿ (Sandalwood) ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಯುವ ರಾಜ್​ಕುಮಾರ್ (Yuva Rajkumar) ಅವರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಅವರು ತಮ್ಮ ನಡವಳಿಕೆಯಿಂದ ಮತ್ತೆ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ಅಭಿಮಾನಿಗಳು ಯುವ ರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆಗ ಅಭಿಮಾನಿಗಳ ಕಾರಿನ ಹಿಂಭಾಗದಲ್ಲಿದ್ದ ಪುನೀತ್ ರಾಜ್​ಕುಮಾರ್ (Puneeth Rajkumar) ಫೋಟೋಕ್ಕೆ ಸವಿನೆನಪಿನ ಕಾರಣದಿಂದ ಸಹಿ ಹಾಕುವಂತೆ ಯುವ ರಾಜ್​ಕುಮಾರ್ ಅವರನ್ನು ಕೋರಿಕೊಂಡಿದ್ದಾರೆ. ಇದನ್ನು ನಯವಾಗಿಯೇ ತಿರಸ್ಕರಿಸಿದ ಯುವ ರಾಜ್​ಕುಮಾರ್, ಅವರ ಫೋಟೋದ ಮೇಲೆ ಸಹಿ ಹಾಕುವುದಿಲ್ಲ. ಅದು ಸರಿಯಾಗುವುದಿಲ್ಲ ಎಂದಿದ್ದಾರೆ. ನಂತರ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾರಿನ ಒಳಭಾಗದಲ್ಲಿ ಆಟೋಗ್ರಾಫ್ ನೀಡಿದ್ದಾರೆ. ಈ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ವೈರಲ್ ಆಗಿದೆ. ಯುವ ರಾಜ್​ಕುಮಾರ್ ಅವರ ಗುಣಕ್ಕೆ ಅಭಿಮಾನಿಗಳು ತಲೆದೂಗಿದ್ದಾರೆ.

ಇದನ್ನೂ ಓದಿ:

ಅಪ್ಪು-ಅಂಬಿ ಫ್ಯಾನ್ಸ್​ ನಡುವೆ ಮನಸ್ತಾಪ? ರಸ್ತೆಗೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳ ಆಕ್ಷೇಪ

ಗಣರಾಜ್ಯೋತ್ಸವಕ್ಕೆ ರಿಲೀಸ್​ ಆಗಲಿದೆ ಪುನೀತ್​ ನಟನೆಯ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್

Follow us on

Click on your DTH Provider to Add TV9 Kannada