ಸಿನಿಮಾ ಶೂಟಿಂಗ್​ನಲ್ಲಿ ನಟಿ ರಮೋಲಾ ಬ್ಯುಸಿ; ವೈರಲ್​ ಆಗುತ್ತಿದೆ ಸಾಂಗ್​ ಶೂಟ್​ ವಿಡಿಯೋ

‘ರಿಚ್ಚಿ’ ಸಿನಿಮಾದಲ್ಲಿ ಸಾನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್​ ಶೂಟಿಂಗ್ ಪ್ರಗತಿಯಲ್ಲಿದೆ. ಸೆಟ್​ನ ಫೋಟೋಗಳು ವೈರಲ್​ ಆಗಿವೆ.

TV9kannada Web Team

| Edited By: Rajesh Duggumane

Jan 25, 2022 | 9:05 AM

‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್​ ವಿಲನ್​ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್​ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಅವರ ನಟನೆಯನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದರು. ಆದರೆ, ರಮೋಲಾ ಏಕಾಏಕಿ ಕಿರುತೆರೆ ತೊರೆದು ಹೊರಬಂದಿದ್ದರು. ಇದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಸಿನಿಮಾವೊಂದರಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ‘ರಿಚ್ಚಿ’ ಸಿನಿಮಾದಲ್ಲಿ ಸಾನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್​ ಶೂಟಿಂಗ್ ಪ್ರಗತಿಯಲ್ಲಿದೆ. ಸೆಟ್​ನ ಫೋಟೋಗಳು ವೈರಲ್​ ಆಗಿವೆ. ಸಾನಿಯಾ ಹಿರಿತೆರೆಗೆ ಕಾಲಿಡೋಕೆ ಸಜ್ಜಾಗಿರುವ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಬಗ್ಗೆ ಸಂಪೂರ್ಣ ಅಪ್​ಡೇಟ್​ ಇನ್ನಷ್ಟೇ ತಿಳಿದುಬರಬೇಕಿದೆ. ಅವರು ‘ಕನ್ನಡತಿ’ ಧಾರಾವಾಹಿ ತೊರೆದಿದ್ದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಇದನ್ನೂ ಓದಿ: Ramola: ಹಳದಿ ಬಣ್ಣದ ಡ್ರೆಸ್​ನಲ್ಲಿ ಹುಡುಗರ ಹಾರ್ಟ್​ಬೀಟ್​ ಹೆಚ್ಚಿಸಿದ ಕಿರುತೆರೆ ನಟಿ ರಮೋಲಾ

Ramola: ರಮೋಲಾ ಈಗ ನಾಯಕಿ; ‘ಕನ್ನಡತಿ’ ವಿಲನ್​ಗೆ ಸಿನಿಮಾದಲ್ಲಿ ಹೀರೋಯಿನ್​ ಪಟ್ಟ

Follow us on

Click on your DTH Provider to Add TV9 Kannada