ಗಣರಾಜ್ಯೋತ್ಸವಕ್ಕೆ ರಿಲೀಸ್ ಆಗಲಿದೆ ಪುನೀತ್ ನಟನೆಯ ‘ಜೇಮ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್
‘ಜೇಮ್ಸ್’ ಯಾವಾಗ ರಿಲೀಸ್ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಪುನೀತ್ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಸದ್ಯಕ್ಕೆ ಮರೆಯುವಂತಹದ್ದಲ್ಲ. ಅವರು ಅಗಲಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ (James Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದರ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿತ್ತು. ಈಗ ಗಣರಾಜ್ಯೋತ್ಸವದ ಪ್ರಯುಕ್ತ ಸಿನಿಮಾದಿಂದ ವಿಶೇಷ ಪೋಸ್ಟರ್ ಒಂದು ರಿಲೀಸ್ ಆಗಲಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಬೆಳಗ್ಗೆ 11.11 ಗಂಟೆಗೆ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ. ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಪುನೀತ್ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪುನೀತ್ ಫೋಟೋ ಇಟ್ಟು ಶೂಟಿಂಗ್ ಪೂರ್ಣಗೊಳಿಸಿದ ‘ಜೇಮ್ಸ್’ ಚಿತ್ರತಂಡ; ಇಲ್ಲಿವೆ ಫೋಟೋಗಳು
ಪುನೀತ್ ನಟನೆಯ ‘ಜೇಮ್ಸ್’ ಎದುರು ‘ಆರ್ಆರ್ಆರ್’ ರಿಲೀಸ್? ರಾಜಮೌಳಿಗೆ ಧರ್ಮಸಂಕಟ