ಗುಳೇದಗುಡ್ಡ ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಯಲ್ಲವ್ವ ಅಗಲಿದ ಪತಿಯನ್ನು ನೆನೆದು ಸಿದ್ದರಾಮಯ್ಯ ಎದುರು ಗಳಗಳ ಅತ್ತುಬಿಟ್ಟರು

ಗುಳೇದಗುಡ್ಡ ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಯಲ್ಲವ್ವ ಅಗಲಿದ ಪತಿಯನ್ನು ನೆನೆದು ಸಿದ್ದರಾಮಯ್ಯ ಎದುರು ಗಳಗಳ ಅತ್ತುಬಿಟ್ಟರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 24, 2022 | 11:19 PM

ಕೊನೆಗೆ ಮಾಜಿ ಮುಖ್ಯಮಂತ್ರಿಗಳೇ ಯಲ್ಲವ್ವನನ್ನು ಸಮಾಧಾನಡಿಸಲು ಮುಂದಾಗುತ್ತಾರೆ. ಯಲ್ಲವ್ವನ ಹಿಂದೆ ಅವರ ಕುಟುಂಬದ ಸದಸ್ಯರು ನಿಂತಿರುವಂತಿದೆ. ಅವರಿಗೂ ಯಲ್ಲವ್ವ ಅಳು ನಿಲ್ಲಿಸಲು ಹೇಳುವಂತೆ ಸಿದ್ದರಾಮಯ್ಯ ಸನ್ನೆ ಮಾಡುತ್ತಾರೆ.

ಬಾಗಲಕೋಟೆ ಜಿಲ್ಲೆ ಗುಳೆದಗುಡ್ಡ (Guledgud) ಪುರಸಭೆ ಆವರಣದಲ್ಲಿ ಚಿತ್ರಿತವಾಗಿರುವ ಈ ವಿಡಿಯೋನಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯನವರು (Siddaramaiah) ಕಾಣುತ್ತಿದ್ದರೂ, ಸುತ್ತ ನೆರೆದಿರುವ ಜನರ ಮತ್ತು ಕೆಮೆರಾಮನ್ಗಳ ಫೋಕಸ್ ಭಾವೋದ್ರೇಕದಿಂದ ಕಣ್ಣೀರು ಹಾಕುತ್ತಿರುವ ಈ ಮಹಿಳೆ ಮೇಲಿದೆ. ಅವರ ಹೆಸರು ಯಲ್ಲವ್ವ ಗೌಡರ್. ಸೋಮವಾರ ಗುಳೇದಗುಡ್ಡ ಪುರಸಭೆಗೆ ಯಲ್ಲವ್ವ ಗೌಡರ್ (Yellavva Goudar) ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಇನ್ನೊಬ್ಬ ಮಹಿಳೆ ಆಯ್ಕೆಯಾದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಯಲ್ಲವ್ವ ಇತ್ತೀಚಿಗೆಗಷ್ಟೇ ಪತಿಯನ್ನು ಕಳೆದುಕೊಂಡಿದ್ದಾರೆ. ಅವರ ಪತಿ ನಾಗಪ್ಪ ಗೌಡರ್ ಹಿಂದೊಮ್ಮೆ ಗುಳೇದಗಡ್ಡ ಪುರಸಭಾ ಸದಸ್ಯರಾಗಿದ್ದರಂತೆ.
ಅಗಲಿದ ಪತಿಯನ್ನು ನೆನೆದು ಯಲ್ಲವ್ವ ಭಾವೋದ್ರೇಕಕ್ಕೆ ಒಳಗಾಗಿ ಚಿಕ್ಕ ಮಗುವಿನ ಹಾಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಅವರ ಪಕ್ಕದಲ್ಲಿ ಕುಳಿತಿರುವ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಹಿಳೆಗೆ ಸಮಾಧಾನಪಡಿಸುವಂತೆ ಸಿದ್ದರಾಮಯ್ಯನವರು ಹೇಳುತ್ತಾರೆ. ಅವರು ಪ್ರಯತ್ನಿಸುವುದೂ ವಿಡಿಯೋನಲ್ಲಿ ಕಾಣುತ್ತಿದೆ. ಅದರೆ ಯಲ್ಲವ್ವನಿಗೆ ಮಾತ್ರ ಭಾವನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ.

ಕೊನೆಗೆ ಮಾಜಿ ಮುಖ್ಯಮಂತ್ರಿಗಳೇ ಯಲ್ಲವ್ವನನ್ನು ಸಮಾಧಾನಡಿಸಲು ಮುಂದಾಗುತ್ತಾರೆ. ಯಲ್ಲವ್ವನ ಹಿಂದೆ ಅವರ ಕುಟುಂಬದ ಸದಸ್ಯರು ನಿಂತಿರುವಂತಿದೆ. ಅವರಿಗೂ ಯಲ್ಲವ್ವ ಅಳು ನಿಲ್ಲಿಸಲು ಹೇಳುವಂತೆ ಸಿದ್ದರಾಮಯ್ಯ ಸನ್ನೆ ಮಾಡುತ್ತಾರೆ.

ಅಂತಿಮವಾಗಿ ಹಿಂದೆ ಗುಂಪಿನಲ್ಲಿ ಒಬ್ಬ ವ್ಯಕ್ತಿಯನ್ನು ಯಲ್ಲವ್ವನೇ ಕೈಹಿಡಿದು ಮುಂದೆ ಬರುವಂತೆ ಎಳೆಯುತ್ತಾರೆ. ಪ್ರಾಯಶಃ ಅದು ಅವರ ಮಗನಿರಬಹುದು. ಆ ವ್ಯಕ್ತಿ ಮುಂದೆ ಬಂದ ನಂತರ ಅವರ ಅಳು ನಿಲ್ಲುತ್ತದೆ ಮತ್ತು ಸಿದ್ದರಾಮಯ್ಯ ತಮ್ಮ ಪತ್ರಿಕಾ ಗೋಷ್ಠಿ ಆರಂಭಿಸುತ್ತಾರೆ.

ಇದನ್ನೂ ಓದಿ:   UP Diwas 2022: ಉತ್ತರ ಪ್ರದೇಶ ಜನರಿಗೆ ರಾಷ್ಟ್ರಪತಿ, ಗೃಹ ಸಚಿವರಿಂದ ಶುಭಾಶಯ; ಸಿಎಂ ಯೋಗಿ ವಿಡಿಯೋ ಶೇರ್​ ಮಾಡಿದ ಪ್ರಧಾನಿ ಮೋದಿ