AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಾಮಿಕ ಫೋಟೋ ವೈರಲ್ ಆದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ: ಏನಂದ್ರು?

Virat Kohli: ವಾಮಿಕ ಫೋಟೋ ವೈರಲ್ ಆದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ: ಏನಂದ್ರು?

TV9 Web
| Updated By: Vinay Bhat|

Updated on: Jan 25, 2022 | 9:06 AM

Share

Vamika Photo Viral: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಅರ್ಧ ಶತಕ ಪೂರ್ತಿಗೊಳಿಸಿದಾಗ ಗ್ಯಾಲರಿಯಲ್ಲಿ ಮಗಳನ್ನು ಎತ್ತಿಕೊಂಡಿದ್ದ ಅನುಷ್ಕಾ ಕಾಣಿಸಿಕೊಂಡರು. ಈ ವೇಳೆ ಕೊಹ್ಲಿ ಜೋಗುಳ ಹಾಡುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಕ್ರಿಕೆಟ್‌ ನೇರ ಪ್ರಸಾರದಲ್ಲಿ ಈ ದೃಶ್ಯ ಸೆರೆಯಾಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ, ವಿರಾಟ್ ಕೊಹ್ಲಿ (Virat Kohli) ಮುದ್ದಿನ ಮಗಳು ವಮಿಕಾ (Vamika) ಫೋಟೋ ವೈರಲ್ ಆಗಿದೆ. ವರ್ಷದಿಂದ ಮಗಳ ಮುಖವನ್ನೇ ತೋರಿಸದಿದ್ದ ವಿರುಷ್ಕಾಗೆ ಇದರಿಂದ ಬೇಸರವಾಗಿದ್ದು, ಅಭಿಮಾನಿಗಳ ಬಳಿ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. 3ನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಅರ್ಧ ಶತಕ ಪೂರ್ತಿಗೊಳಿಸಿದಾಗ ಗ್ಯಾಲರಿಯಲ್ಲಿ ಮಗಳನ್ನು ಎತ್ತಿಕೊಂಡಿದ್ದ ಅನುಷ್ಕಾ ಶರ್ಮಾ (Anushka Sharma) ಕಾಣಿಸಿಕೊಂಡರು. ಈ ವೇಳೆ ಕೊಹ್ಲಿ ಜೋಗುಳ ಹಾಡುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಕ್ರಿಕೆಟ್‌ ನೇರ ಪ್ರಸಾರದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ವಮಿಕಾ ಚಿತ್ರ ವೈರಲ್‌ ಆಗಿತ್ತು. ಅಭಿಮಾನಿಗಳು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು. “ಸ್ನೇಹಿತರೆ! ಕ್ರೀಡಾಂಗಣದಲ್ಲಿ ಸೆರೆಹಿಡಿದ ನನ್ನ ಮಗಳ ಫೋಟೊವನ್ನು ವ್ಯಾಪಕವಾಗಿ ಹಂಚಿಕೊಂಡಿರುವ ವಿಚಾರ ನಮಗೆ ತಿಳಿದಿದೆ. ಕ್ಯಾಮರಾ ನಮ್ಮ ಮೇಲೆ ಇದೆ ಎಂದು ತಿಳಿದಿರಲಿಲ್ಲ ಎಂದು ನಾವು ಎಲ್ಲರಿಗೂ ತಿಳಿಸಲು ಬಯಸುತ್ತೇವೆ. ಈ ವಿಚಾರದಲ್ಲಿ ನಮ್ಮ ನಿಲುವು ಮತ್ತು ಕೋರಿಕೆ ಒಂದೇ ಆಗಿದೆ. ನಾವು ಹಿಂದೆ ವಿವರಿಸಿದಂತೆ ವಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡದಿದ್ದರೆ ಅಥವಾ ಪ್ರಕಟಿಸದಿದ್ದರೆ ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ಧನ್ಯವಾದಗಳು,” ಎಂದು ಕೊಹ್ಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Happy Birthday Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹುಟ್ಟುಹಬ್ಬ: ಇಲ್ಲಿದೆ ಇವರ ಮರೆಯಲಾಗದ ಇನ್ನಿಂಗ್ಸ್