Happy Birthday Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹುಟ್ಟುಹಬ್ಬ: ಇಲ್ಲಿದೆ ಇವರ ಮರೆಯಲಾಗದ ಇನ್ನಿಂಗ್ಸ್

ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ (Cheteshwar Pujara) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭ ಪೂಜಾರ ಹೊಂದಿರುವ ಕೆಲವು ಅತ್ಯುತ್ತಮ ದಾಖಲೆಗಳನ್ನು ನೋಡೋಣ.

Happy Birthday Cheteshwar Pujara: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹುಟ್ಟುಹಬ್ಬ: ಇಲ್ಲಿದೆ ಇವರ ಮರೆಯಲಾಗದ ಇನ್ನಿಂಗ್ಸ್
cheteshwar pujara birthday
Follow us
TV9 Web
| Updated By: Vinay Bhat

Updated on: Jan 25, 2022 | 8:30 AM

ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ (Cheteshwar Pujara) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವರ್ಷಕ್ಕೆ ಪೂಜಾರ ಕಾಲಿಟ್ಟಿದ್ದು, ಅನೇಕ ಕ್ರೀಡಾಭಿಮಾನಿಗಳು, ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಶುಭಕೋರುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನ (Indian Cricket) ಹೊಸ ವಾಲ್ ಎಂದು ಕರೆಯಲ್ಪಡುವ ಪೂಜಾರ ತಂಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಏಕಾಂಗಿಯಾಗಿ ನಿಂತು ಅದೆಷ್ಟೊ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ಕಳೆದೊಂದು ವರ್ಷದಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಇವರು ಸದ್ಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಕಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯದಲ್ಲೂ ಪೂಜಾರ ಅನುಭವಕ್ಕೆ ತಕ್ಕಂತೆ ಶ್ರೇಷ್ಠ ಪ್ರದರ್ಶನ ನೀಡಲಿಲ್ಲ. ಚೇತೇಶ್ವರ ಪೂಜಾರ ಅವರು 95 ಪಂದ್ಯ (162 ಇನ್ನಿಂಗ್ಸ್)ಗಳಲ್ಲಿ 6713 ರನ್, 18 ಶತಕ, 3 ದ್ವಿಶತಕ ಮತ್ತು 32 ಅರ್ಧಶತಕಗಳನ್ನು ಬಾರಿಸಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 51 ರನ್ ಬಾರಿಸಿದ್ದಾರೆ.

ಸೌರಾಷ್ಟ್ರ ಮೂಲದ ಬ್ಯಾಟರ್ ಪೂಜಾರ ಅವರು 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಏಕದಿನ ಕ್ರಿಕೆಟ್​ಗೆ 2013ರಲ್ಲಿ ಕಾಲಿಟ್ಟರೆ ಇವರು ಒಟ್ಟಾರೆಯಾಗಿ 64 ಟಿ20 ಪಂದ್ಯಗಳನ್ನು ಕೂಡ ಆಡಿದ್ದಾರೆ. ಇಂದು ಪೂಜಾರ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ಹೊಂದಿರುವ ಕೆಲವು ಅತ್ಯುತ್ತಮ ದಾಖಲೆಗಳನ್ನು ನೋಡೋಣ.

ಎಲ್ಲ 5 ದಿನಗಳಲ್ಲಿ ಬ್ಯಾಟಿಂಗ್ ಮಾಡಿದ ಮೂರನೇ ಭಾರತೀಯ:

ಹೌದು, ಟೆಸ್ಟ್ ಪಂದ್ಯವೊಂದರ ಎಲ್ಲ ಐದು ದಿನಗಳಲ್ಲೂ ಬ್ಯಾಟಿಂಗ್ ಮಾಡಿದ ಈ ವಿಶಿಷ್ಟ ದಾಖಲೆಯನ್ನು ತಮ್ಮ ಹೆಸರಿಗೆ ಪೂಜಾರ ಹೊಂದಿದ್ದಾರೆ ಮತ್ತು ಎಂಎಲ್ ಜೈಸಿಮ್ಹಾ ಮತ್ತು ರವಿಶಾಸ್ತ್ರಿ ನಂತರ ಇವರು ಮೂರನೇ ಭಾರತೀಯರಾಗಿದ್ದಾರೆ. ಅವರು 2017ರಲ್ಲಿ ಶ್ರೀಲಂಕಾ ವಿರುದ್ಧದ ಕೋಲ್ಕತಾ ಟೆಸ್ಟ್ ಸಮಯದಲ್ಲಿ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಪಾರ್ಟನರ್‌ಶಿಪ್‌:

2013 ರಲ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ಪೂಜಾರ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 222 ರನ್‌ಗಳ ಸ್ಟ್ಯಾಂಡ್‌ ನೀಡಿದರು. ಇದು ಕೇಪ್ ಟೌನ್ 199 ರಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ದಾಖಲಿಸಿದ ಹಿಂದಿನ ಸಾಧನೆಗೆ ಸಮಗಟ್ಟುವುದರ ಜೊತೆಗೆ ಯಾವುದೇ ವಿಕೆಟ್‌ಗೆ ದೇಶದ ಜಂಟಿ-ಅತ್ಯುನ್ನತ ಪಾರ್ಟನರ್‌ಶಿಪ್‌ ಆಗಿದೆ. ಇದೇ ಟೆಸ್ಟ್‌ನಲ್ಲಿ ಪೂಜಾರಾ 153 ರನ್ ಗಳಿಸಿದರು. ಇದು ಭಾರತೀಯರೊಬ್ಬರು ಗಳಿಸಿದ ಅತ್ಯಧಿಕ ಎರಡನೇ ಇನ್ನಿಂಗ್ಸ್ ಸ್ಕೋರ್. ಹಿಂದೆ ಕಪಿಲ್ ದೇವ್  ಗರಿಷ್ಠ 129 ರನ್ ಗಳಿಸಿದ್ದರು.

ಎರಡನೇ ಫಾಸ್ಟೆಸ್ಟ್‌ 1,000:

2013ರಲ್ಲಿ, ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ, ಪೂಜಾರಾ ತನ್ನ 1,000 ನೇ ರನ್ ಅನ್ನು ಈ ಫಾರ್ಮ್ಯಾಟ್‌ನಲ್ಲಿ ಗಳಿಸಿದರು. ವಿನೋದ್ ಕಾಂಬ್ಳಿ ನಂತರ ಅವರು 18 ಇನ್ನಿಂಗ್ಸ್‌ಗಳಲ್ಲಿ 1000 ಗಳಿಸಿದ ಭಾರತದ ಎರಡನೇ ವೇಗದ ಆಟಗಾರರಾದರು.

ಇನ್ನಿಂಗ್ಸ್‌ನಲ್ಲಿ ಹೆಚ್ಚಿನ ಎಸೆತಗಳನ್ನು ಎದುರಿಸಿದರು:

ರಾಂಚಿ ಟೆಸ್ಟ್‌ನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ, ಪೂಜಾರ ತಮ್ಮ ವೃತ್ತಿಜೀವನದ ಸುದೀರ್ಘ ಇನ್ನಿಂಗ್ಸ್ ಆಡಿದರು, ಅಲ್ಲಿ ಅವರು 525 ಎಸೆತಗಳನ್ನು ಎದುರಿಸಿ 202 ರನ್ ಗಳಿಸಿದರು. ಇಲ್ಲಿಯವರೆಗೆ ಭಾರತೀಯರು ಎದುರಿಸಿರುವ ಚೆಂಡುಗಳ ವಿಷಯದಲ್ಲಿ ಇದು ಅತಿ ಉದ್ದದ ಇನ್ನಿಂಗ್ಸ್ ಆಗಿದೆ.

Pro Kabaddi 2022: ಬೆಂಗಾಲ್​ಗೆ ಗೆಲುವು, ದಬಾಂಗ್ ಡೆಲ್ಲಿಗೆ ಸೋಲು: ಬೆಂಗಳೂರು ಬುಲ್ಸ್ ಟಾಪರ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ