Virat Kohli: ರಿಷಭ್ ಪಂತ್ ಮೊದಲ ಎಸೆತದಲ್ಲೇ ಔಟಾದಾಗ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Rishabh Pant, South Africa vs India: ಮೂರನೇ ಏಕದಿನ ಪಂದ್ಯದಲ್ಲೂ ಭಾರತದ ಮಧ್ಯಮ ಕ್ರಮಾಂಕ ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ರಿಷಭ್ ಪಂತ್ ಗೋಲ್ಡನ್ ಡಕ್ ಆದರು. ಹೀಗೆ ಪಂತ್ ಸೊನ್ನೆ ಸುತ್ತಿದ ಸಂದರ್ಭ ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಪೈಕಿ ಮೂರರಲ್ಲೂ ಸೋತಿರುವ ಭಾರತ (India vs South Africa) ತಂಡ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಅವರೇ ಹೇಳಿರುವಂತೆ ತಂಡದ ಮಧ್ಯಮ ಕ್ರಮಾಂಕ ಸೋಲಿಗೆ ಪ್ರಮುಖ ಕಾರಣ. ಆರಂಭದ ಎರಡು ಮೂರು ವಿಕೆಟ್ ಪತನಗೊಂಡರೆ ನಂತರ ನಿತ್ತು ಆಡುವ ಆಟಗಾರರು ಈ ಬಾರಿ ಕೈಕೊಟ್ಟರು. ಇತ್ತ ಬೌಲಿಂಗ್ ವಿಭಾಗದಲ್ಲೂ ಇದೇ ತೊಂದರೆ. ಪವರ್ ಪ್ಲೇನಲ್ಲಿ ವಿಕೆಟ್ ಕಿತ್ತಿದ್ದು ಬಿಟ್ಟರೆ ಮಧ್ಯಮ ಓವರ್ನಲ್ಲಿ ಬೌಲರ್ಗಳು ಸಾಕಷ್ಟು ಬೆವರಿದರು. ಮೂರನೇ ಏಕದಿನ ಪಂದ್ಯದಲ್ಲೂ ಭಾರತದ ಮಧ್ಯಮ ಕ್ರಮಾಂಕ ವಿಫಲವಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಅದರಲ್ಲೂ ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ರಿಷಭ್ ಪಂತ್ (Rishabh Pant) ಗೋಲ್ಡನ್ ಡಕ್ ಆಗಿದ್ದು ಪಂದ್ಯದ ತಿರುವನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಹೀಗೆ ಪಂತ್ ಸೊನ್ನೆ ಸುತ್ತಿದ ಸಂದರ್ಭ ವಿರಾಟ್ ಕೊಹ್ಲಿ (Virat Kohli) ಏನು ಮಾಡಿದರು ನೋಡಿ.
ಎರಡನೇ ಏಕದಿನ ಪಂದ್ಯದಲ್ಲಿ ಪಂತ್ ಅವರು ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. 85 ರನ್ ಚಚ್ಚಿ ತಂಡಕ್ಕೆ ಆಸರೆಯಾಗಿದ್ದರು. ಮೂರನೇ ಪಂದ್ಯದಲ್ಲೂ ಪಂತ್ ಅವರಿಂದ ಇದೇರೀತಿಯ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಪಂತ್ ಹೆಚ್ಚಿನ ಬಾರಿ ಟೀಕೆಗಳಿಗೆ ಗುರಿಯಾಗುವುದು ಶಾಟ್ ಸೆಲೆಕ್ಷನ್ ವಿಚಾರದಲ್ಲಿ. ನಿನ್ನೆಯ ಪಂದ್ಯದಲ್ಲೂ ನಡೆದಿದ್ದು ಇದೆ. ಬಂದ ಬೆನ್ನಲ್ಲೇ ಮೊದಲ ಎಸೆತದಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಪ್ರಮುಖ ಬ್ಯಾಟರ್, ಪ್ರಮುಖ ಹಂತದಲ್ಲಿ ಶೂನ್ಯಕ್ಕೆ ಔಟಾದಾಗ ನಾನ್ ಸ್ಟ್ರೈಕ್ನಲ್ಲಿದ್ದ ವಿರಾಟ್ ಕೊಹ್ಲಿ ಕೋಪಗೊಂಡರು. ಕ್ಯಾಮೆರಾದಲ್ಲಿ ಕೊಹ್ಲಿ ಸೆರೆಯಾಗಿದ್ದು ಪಂತ್ ಅವರನ್ನು ದಿಟ್ಟಿಸಿ ನೋಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Virat Kohli stare says it all after R Pant’s golden duck.
Very foolish shot when you are playing with an ODI ?.
Huge disappointment ?#INDvsSA pic.twitter.com/sfDTFPODDD
— Diwakar¹⁸ (@diwakarkumar47) January 23, 2022
Virat Kohli gave a stare to Rishabh Pant after he got out pic.twitter.com/1zS6DABSw8
— India Fantasy (@india_fantasy) January 23, 2022
ಮೂರನೇ ಏಕದಿನ ಪಂದ್ಯದಲ್ಲಿ ಇನ್ನೇನು ಗೆಲ್ಲುತ್ತದೆ ಎಂದುಕೊಂಡಿದ್ದಾಗ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡು 4 ರನ್ ಗಳಿಂದ ಸೋತು ಸರಣಿ ವೈಟ್ ವಾಶ್ ಅವಮಾನಕ್ಕೀಡಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 287 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಟೀಮ್ ಇಂಡಿಯಾಗೆ ನಾಯಕ ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ಔಟಾದರೂ, ಶಿಖರ್ ಧವನ್ (61), ವಿರಾಟ್ ಕೊಹ್ಲಿ (65) ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದ್ದು ಮತ್ತು ಶ್ರೇಯಸ್ ಐಯರ್ ಮತ್ತೆ ಇನಿಂಗ್ಸ್ ಕಟ್ಟಲು ವಿಫಲರಾಗಿದ್ದು ಭಾರತಕ್ಕೆ ದುಬಾರಿಯಾಯಿತು.
ಇದರ ನಡುವೆ ದೀಪಕ್ ಚಹರ್ ಹೊಡೆಬಡಿಯ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಇನ್ನೇನು ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ಹಂತದಲ್ಲಿ ದೀಪಕ್ ಚಹರ್ ಔಟಾಗಿ ನಿರಾಸೆ ಅನುಭವಿಸಿದರು. ಭಾರತ 49.2 ಓವರ್ ಗಳಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸುವಂತಾಯಿತು.
BPL 2022: ವಿಕೆಟ್ ಪಡೆದಾಗ ಬಾಂಗ್ಲಾದೇಶ ಬೌಲರ್ ಅಲ್ಲು ಅರ್ಜುನ್ ಪುಷ್ಪ ಅವತಾರ ತಾಳಿದ್ದು ನೋಡಿ
Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್