AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BPL 2022: ವಿಕೆಟ್ ಪಡೆದಾಗ ಬಾಂಗ್ಲಾದೇಶ ಬೌಲರ್ ಅಲ್ಲು ಅರ್ಜುನ್​ ಪುಷ್ಪ ಅವತಾರ ತಾಳಿದ್ದು ನೋಡಿ

Allu Arjun Pushpa movie: ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್​ಗೆ ಎರಡು ದಿನಗಳ ಹಿಂದೆ ಅದ್ಧೂರಿ ಚಾಲನೆ ಸಿಕ್ಕಿದೆ. ಭಾನುವಾರ ನಡೆದ ಪಂದ್ಯದಲ್ಲಿ ವಿಕೆಟ್ ಕಿತ್ತಾಗ ಬಾಂಗ್ಲಾ ಬೌಲರ್ ಪುಷ್ಪ ಚಿತ್ರದಲ್ಲಿ 'ತಗ್ಗೆದೆ ಲೇ' ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್​ ಮಾಡುವ ಆ್ಯಕ್ಷನ್​ ರೀತಿಯಲ್ಲೇ ಸಂಭ್ರಮಿಸಿದ್ದಾರೆ.

BPL 2022: ವಿಕೆಟ್ ಪಡೆದಾಗ ಬಾಂಗ್ಲಾದೇಶ ಬೌಲರ್ ಅಲ್ಲು ಅರ್ಜುನ್​ ಪುಷ್ಪ ಅವತಾರ ತಾಳಿದ್ದು ನೋಡಿ
BPL 2022 and Allu Arjun
TV9 Web
| Edited By: |

Updated on:Jan 24, 2022 | 12:01 PM

Share

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ: ದಿ ರೈಸ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈವರೆಗೆ 300 ಕೋಟಿಗೂ ಅಧಿಕ ರೂಪಾಯಿಯನ್ನು ಬಾಜಿಕೊಂಡಿದೆ. ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಡೈಲಾಗ್, ಹಾಡುಗಳು ಸಾಕಷ್ಟು ಪಾಪ್ಯುಲರ್ ಆಗಿದೆ. ಇದರಿಂದ ಸೆಲೆಬ್ರೆಟಿಗಳು ಕೂಡ ದೂರ ಉಳಿದಿಲ್ಲ. ಅವರು ಕೂಡ ಅಲ್ಲು ಶೈಲಿಯಲ್ಲೇ ಡೈಲಾಗ್​ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಪುಷ್ಪ (Pushpa: The Rise) ಲುಕ್​ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರಾ ಜಡೇಜಾ ಕಾಣಿಸಿಕೊಂಡಿದ್ದರು. ವಿದೇಶದಲ್ಲೂ ಪುಷ್ಪ ಹವಾ ಜೋರಾಗಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು. ಅಲ್ಲು ಅರ್ಜುನ್ ಈ ಹಾಡಿನಲ್ಲಿ ಮಾಡಿದ ಸ್ಟೆಪ್ ಅನ್ನು ಅವರು ಅನುಕರಿಸಿದ್ದರು. ಕೇವಲ ಹಾಡು ಮಾತ್ರವಲ್ಲದೆ ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಅವರ “ತಗ್ಗೆದೆ ಲೇ” ಡೈಲಾಗ್, ಈ ಡೈಲಾಗ್​ನ ಆ್ಯಕ್ಷನ್ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಇದೀಗ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲೂ ಪುಷ್ಪ ಟ್ರೆಂಡ್ ಆಗಿದೆ.

ಹೌದು, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್​ಗೆ ಎರಡು ದಿನಗಳ ಹಿಂದೆ ಅದ್ಧೂರಿ ಚಾಲನೆ ಸಿಕ್ಕಿದೆ. ಭಾನುವಾರ ನಡೆದ ಪಂದ್ಯದಲ್ಲಿ ವಿಕೆಟ್ ಕಿತ್ತಾಗ ಬಾಂಗ್ಲಾ ಬೌಲರ್ ಪುಷ್ಪ ಚಿತ್ರದಲ್ಲಿ ‘ತಗ್ಗೆದೆ ಲೇ’ ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್​ ಮಾಡುವ ಆ್ಯಕ್ಷನ್​ ರೀತಿಯಲ್ಲೇ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಹಿಂದೆ ಪುಷ್ಪ ಚಿತ್ರದ ‘ತಗ್ಗೆದೆ ಲೇ’ ಡೈಲಾಗಿಗೆ ಡೇವಿಡ್ ವಾರ್ನರ್ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಹಾಗೂ ಇದಕ್ಕೂ ಮುನ್ನ ಇದೇ ಸಂಭಾಷಣೆಗೆ ರವೀಂದ್ರ ಜಡೇಜಾ ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲು ಅರ್ಜುನ್ ರೀತಿಯೇ ರವೀಂದ್ರ ಜಡೇಜಾ ಕೂಡ ಸದ್ಯ ಗಡ್ಡಧಾರಿಯಾಗಿದ್ದು ಆ ಸಂಭಾಷಣೆ ರವೀಂದ್ರ ಜಡೇಜಾಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು. ಹಾಗೂ ರವೀಂದ್ರ ಜಡೇಜಾರ ಆ ವಿಡಿಯೋ ಸಾಮಾಜಿಕ ಜಾಲ ತಾಣದ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈ ಟ್ರೆಂಡ್​ ಸೃಷ್ಟಿಸಿದ್ದೆ ಡೇವಿಡ್​ ವಾರ್ನರ್​:

ಈ ಟ್ರೆಂಡ್ ಮೊದಲಿಗೆ ಹುಟ್ಟುಹಾಕಿದ ಕೀರ್ತಿ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರಿಗೆ ಸಲ್ಲಬೇಕು. ಮೊದಲಿಗೆ ತೆಲುಗು ಚಿತ್ರಗಳ ಸಂಭಾಷಣೆ ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದ ಡೇವಿಡ್ ವಾರ್ನರ್ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ತನ್ನ ಪತ್ನಿ ಜತೆ ನೃತ್ಯವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಈ ವಿಡಿಯೋಗಳು ಕೂಡ ಸಾಕಷ್ಟು ವೈರಲ್​ ಆಗಿತ್ತು.

ಸದ್ಯ ಕ್ರಿಕೆಟ್ ಜಗತ್ತಿಗೆ ಸಿನಿಮಾ ಸಾಕಷ್ಟು ಹತ್ತಿರವಾಗಿದೆ. ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಖ್ಯಾತ ಕ್ರಿಕೆಟಿಗರು ವಿಡಿಯೋ ಮಾಡಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಳ್ಳುವುದು ಇತ್ತೀಚೆಗಿನ ಟ್ರೆಂಡ್ ಆಗಿಬಿಟ್ಟಿದೆ. ಕ್ರಿಕೆಟ್ ದಿಗ್ಗಜರ ಜೀವನ ಬರೋಪಿಕ್​ ಆಗಿ ಮೂಡಿಬರುತ್ತಿರುವುದರಿಂದ ಸಿನಿಮಾ ಮತ್ತು ಕ್ರೀಡೆ ಎರಡು ಜಗತ್ತಿನ ನಂಟು ಮತ್ತಷ್ಟು ಮತ್ತಷ್ಟು ಗಟ್ಟಿಯಾಗಿದೆ.

Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್

Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ

Published On - 12:00 pm, Mon, 24 January 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್