AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ

Virat Kohli trolled IND vs SA 3rd ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಈ ವರ್ತನೆ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅಷ್ಟಕ್ಕೂ ಇವರು ಮಾಡಿದ್ದೇನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ
Virat Kohli National Anthem IND vs SA
TV9 Web
| Updated By: Vinay Bhat|

Updated on: Jan 24, 2022 | 9:41 AM

Share

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಭಾರತ ಕ್ರಿಕೆಟ್ ತಂಡ (Indian Cricket Team) ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದೆ. ಅನೇಕರು ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತರೆ, ಏಕದಿನ ಸರಣಿಯನ್ನು ಹೀನಾಯವಾಗಿ 0-3 ಅಂತರದಿಂದ ಸೋತು ವೈಟ್​ವಾಷ್​ ಮುಖಭಂಗಕ್ಕೆ ಒಳಗಾಯಿತು. ನಾಯಕತ್ವ ಬದಲಾವಣೆ, ರೋಹಿತ್ ಶರ್ಮಾ (Rohit Sharma) ಅಲಭ್ಯ, ಹೊಸ ನಾಯಕ ಹೀಗೆ ಟೀಮ್ ಇಂಡಿಯಾದಲ್ಲಿನ ಮಹತ್ವದ ಬದಲಾವಣೆ ತಂಡದ ಮೇಲೆ ನೇರ ಪರಿಣಾಮ ಬೀರಿದಂತೆ ಗೋಚರಿಸುತ್ತದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಹಿಂದಿನ ರೀತಿಯ ಹುರುಪಿನಲ್ಲಿಲ್ಲ. ಇದು ಭಾರತ- ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಸರಿಯಾಗಿ ಗೋಚರವಾಯಿತು. ಕೊಹ್ಲಿಯ ಈ ವರ್ತನೆ ಅನೇಕರ ಕೆಂಗಣ್ಣಿಗೂ ಕಾರಣವಾಗಿದೆ. ಅಷ್ಟಕ್ಕೂ ವಿರಾಟ್ (Virat Kohli) ಮಾಡಿದ್ದೇನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೇಪ್​ಟೌನ್​ನ ನ್ಯೂಲೆಂಡ್ಸ್​ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಭಾರತ ಬೌಲಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವಕೊಡುವುದು ವಾಡಿಕೆ. ಅದರಂತೆ ಈ ಪಂದ್ಯದಲ್ಲಿ ಕೂಡ ರಾಷ್ಟ್ರಗೀತೆಯನ್ನು ಹಾಕಲಾಯಿತು. ಈ ಸಂದರ್ಭ ಭಾರತ ತಂಡದ ಎಲ್ಲ ಆಟಗರರು ಹಾಗೂ ಕೋಚ್, ಸಹಾಯಕ ಸಿಬ್ಬಂದಿಗಳು ತಾವುಕೂಡ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು.

ಭಾರತದ ರಾಷ್ಟ್ರಗೀತೆ ಪ್ರಸಾರದ ವೇಳೆ ಕ್ಯಾಮೆರಾ ಎಲ್ಲ ಟೀಮ್ ಇಂಡಿಯಾ ಆಟಗಾರರನ್ನ ತೋರಿಸುತ್ತಾ ಬಂತು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕೂಡ ಕ್ಯಾಮೆರಾ ಕಣ್ಣಲ್ಲಿಸ ಸೆರೆಯಾದರು. ಆದರೆ, ಈ ಸಂದರ್ಭ ಕೊಹ್ಲಿ ರಾಷ್ಟ್ರಗೀತೆ ಹೇಳುವ ಬದಲು ಚೀವಿಂಗ್‌ ಗಮ್‌ ಜಗಿಯುತ್ತಾ ನಿಂತ್ತಿದ್ದರು. ಇದು ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ. ಇದನ್ನು ಕಂಡ ಅನೇಕ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ದೇಶಭಕ್ತಿಯನ್ನು ಸೂಚಿಸುವ ರಾಷ್ಟ್ರಗೀತೆ ವೇಳೆ ಚೀವಿಂಗ್‌ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದು ಹೇಳಿ ಅನೇಕರು ಕಾಲೆಳೆದಿದ್ದಾರೆ. ಕೊಹ್ಲಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಫೀಲ್ಡ್​ನಲ್ಲಿ ಅವರಿರುವ ರೀತಿ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾದ ನಾಯಕ ಎಂದೂ ಗಮನಿಸದೆ ಅವರನ್ನೇ ಕೊಹ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಪಂದ್ಯದ ಮಧ್ಯೆ ಬವುಮಾ ರನ್ ಗಳಿಸಲೆಂದು ಕ್ರೀಸ್​ ಬಿಡಲು ತಯಾರಾದಾಗ ಕೊಹ್ಲಿ ಚೆಂಡನ್ನು ವಿಕೆಟ್​ಗೆ ಥ್ರೋ ಮಾಡಿದರು. ಆದರೆ, ಚೆಂಡು ಬವುಮಾ ಅವರಿಗೆ ತಾಗುವುದರಲ್ಲಿತ್ತು. ಇದನ್ನು ಕಂಡು ಬವುಮಾ ಕೂಡ ಕೋಪಗೊಂಡರು. ಈ ಸಂದರ್ಭ ಕೊಹ್ಲಿ ರೊಚ್ಚಿಗೆದ್ದು, “ಏನು? ನೀನು ರನ್​ ಗಳಿಸಲೆಂದು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನೇನು ಈಗ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳಿತು,” ಎಂದು ನುಡಿದಿದ್ದರು.

KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ

South Africa vs India: ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ ಭಾರತಕ್ಕೆ ಭಾರೀ ಮುಖಭಂಗ: ಟೀಮ್ ಇಂಡಿಯಾ ಎಡವಿದ್ದೆಲ್ಲಿ?

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್