Virat Kohli: ವಿರಾಟ್ ಕೊಹ್ಲಿ ಮದುವೆಯಾಗಿದ್ದಕ್ಕೆ ಈಗ ಚೆನ್ನಾಗಿ ಆಡ್ತಿಲ್ಲ ಎಂದ ಮಾಜಿ ಕ್ರಿಕೆಟಿಗ

Shoaib Akhtar: ಒಬ್ಬ ಆಟಗಾರ, ವಿಶೇಷವಾಗಿ ತಂಡದ ನಾಯಕನು ತಂಡದಿಂದ ನಿವೃತ್ತಿಯಾದ ನಂತರವೇ ಮದುವೆಯಾಗಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.

Virat Kohli: ವಿರಾಟ್ ಕೊಹ್ಲಿ ಮದುವೆಯಾಗಿದ್ದಕ್ಕೆ ಈಗ ಚೆನ್ನಾಗಿ ಆಡ್ತಿಲ್ಲ ಎಂದ ಮಾಜಿ ಕ್ರಿಕೆಟಿಗ
Virat Kohli
Follow us
TV9 Web
| Updated By: Digi Tech Desk

Updated on:Jan 24, 2022 | 11:46 AM

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಈ ನಡುವೆ ಕೊಹ್ಲಿ ಫಾರ್ಮ್​ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನೀಡಿರುವ ಹೇಳಿಕೆ ಇದೀಗ ನಗೆಪಾಟಲಿಗೀಡಾಗಿದೆ. ಅಖ್ತರ್ ಅವರ ಪ್ರಕಾರ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅವರ ಆಟದ ಮೇಲೆ ಪರಿಣಾಮ ಬೀರಿದೆ. ಮದುವೆಯ ಒತ್ತಡವು ಅವರ ಆಟದ ಮೇಲೆ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಅಖ್ತರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, “ವಿರಾಟ್ ನಾಯಕತ್ವವನ್ನು ತೊರೆದಿಲ್ಲ. ಆದರೆ ತೊರೆಯುವಂತೆ ಒತ್ತಡ ಹೇರಲಾಯಿತು. ಇದು ಅವರಿಗೆ ಉತ್ತಮ ಸಮಯವಲ್ಲ. ಹೀಗಾಗಿ ಅವರು ಎಂತಹ ಆಟಗಾರ ಎಂಬುದನ್ನು ಈಗ ಸಾಬೀತುಪಡಿಸಬೇಕಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವರು ಉಕ್ಕಿನಿಂದ ಅಥವಾ ಕಬ್ಬಿಣದಿಂದ ಮಾಡಲ್ಪಟ್ಟಿದೆಯೇ? ಎಂಬುದು ಗೊತ್ತಾಗಲಿದೆ. ವಿರಾಟ್ 6-7 ವರ್ಷಗಳ ಕಾಲ ನಾಯಕತ್ವ ವಹಿಸಿದ್ದರು. ನಾನು ಅವರ ನಾಯಕತ್ವದ ಪರವಾಗಿ ಇಲ್ಲ. ಅವರು 100, 120 ರನ್ ಗಳಿಸಲು ಮತ್ತು ಅವರ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ ಎಂದು ಅಖ್ತರ್ ತಿಳಿಸಿದರು.

ಕೊಹ್ಲಿ ಮದುವೆಯಾಗುವುದರ ಬದಲು 10-12 ವರ್ಷಗಳ ಕಾಲ ರನ್ ಮತ್ತು ದಾಖಲೆಗಳ ಮೇಲೆ ಮಾತ್ರ ಗಮನ ಹರಿಸಬೇಕಿತ್ತು. ಈಗ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಆದರೆ ನಾನು ಕೊಹ್ಲಿ ಸ್ಥಾನದಲ್ಲಿದ್ದರೆ ನಾನು ಮದುವೆಯಾಗುತ್ತಿರಲಿಲ್ಲ. ಕೇವಲ ರನ್ ಗಳಿಸಿ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೆ ಎಂದು ಅಖ್ತರ್ ಹೇಳಿದರು.

ಈ 10-12 ವರ್ಷಗಳ ಕ್ರಿಕೆಟ್ ವಿಭಿನ್ನ ಸಮಯ ಮತ್ತು ಮತ್ತೆ ಬರುವುದಿಲ್ಲ. ನಾನು ಮದುವೆಯಾಗುವುದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಒಂದು ವೇಳೆ ನೀವು ಭಾರತಕ್ಕಾಗಿ ಆಡುತ್ತಿದ್ದೀರಿ, ನೀವು ಸ್ವಲ್ಪ ಸಮಯವನ್ನು ಕಾಯಬಹುದಿತ್ತು. ಏಕೆಂದರೆ ಅಭಿಮಾನಿಗಳು ಕೊಹ್ಲಿಯ ಬಗ್ಗೆ ಹುಚ್ಚರಾಗಿದ್ದಾರೆ. ಅವರು ಕಳೆದ 20 ವರ್ಷಗಳಿಂದ ಪಡೆಯುತ್ತಿರುವ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಹೀಗಾಗಿ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮದುವೆಯಾಗಬಾರದಿತ್ತು ಎಂದು ಅಖ್ತರ್ ಅಭಿಪ್ರಾಯಪಟ್ಟರು.

ಇದೇ ಮದುವೆಯ ಒತ್ತಡವು ಆಟಗಾರನ ಆಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ಹೌದು” ಎಂದು ಅಖ್ತರ್ ಉತ್ತರಿಸಿದರು. ಮಕ್ಕಳಿಂದ, ಕುಟುಂಬದವರಿಂದ ಒತ್ತಡವಿದೆ. ಜವಾಬ್ದಾರಿ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತದೆ. ಕ್ರಿಕೆಟಿಗರಿಗೆ 14-15 ವರ್ಷಗಳ ಅಲ್ಪ ವೃತ್ತಿಜೀವನವಿದೆ. ಅದರಲ್ಲಿ ನೀವು ಐದು-ಆರು ವರ್ಷಗಳ ಕಾಲ ಉತ್ತುಂಗದಲ್ಲಿದ್ದೀರಿ. ವಿರಾಟ್ ಅವರ ಆ ವರ್ಷಗಳು ದಾಟಿದೆ, ಈಗ ಹೋರಾಟ ಮಾಡಬೇಕಿದೆ ಎಂದು ಶೊಯೇಬ್ ಅಖ್ತರ್ ತಿಳಿಸಿದರು.

ಒಬ್ಬ ಆಟಗಾರ, ವಿಶೇಷವಾಗಿ ತಂಡದ ನಾಯಕನು ತಂಡದಿಂದ ನಿವೃತ್ತಿಯಾದ ನಂತರವೇ ಮದುವೆಯಾಗಬೇಕು ಎಂದು ಇದೇ ವೇಳೆ ಸಲಹೆ ನೀಡಿದ ಅಖ್ತರ್, ಆಡುವಾಗ ಹೆಚ್ಚು ಒತ್ತಡ ಇರಬಾರದು, ಮುಕ್ತವಾಗಿ ಆಟವಾಡಿ. ಹಾಗಾಗಿ ವೃತ್ತಿಜೀವನದಲ್ಲಿ ಮದುವೆಯಾಗಬೇಡಿ ಎಂದರು. ಅಲ್ಲದೆ ನಾನು ನಿವೃತ್ತಿಯಾದ ಬಳಿಕವಷ್ಟೇ ಮದುವೆಯಾದೆ ಇದೇ ವೇಳೆ ಶೊಯೇಬ್ ಅಖ್ತರ್ ತಿಳಿಸಿದರು.

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Shoaib Akhtar believes pressure of marriage affected Virat Kohli’s game)

Published On - 10:42 pm, Sun, 23 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್