IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
Ipl 2022 lucknow and ahmedabad players list: ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಯಾವ ತಂಡಕ್ಕೆ ಯಾರು ಆಯ್ಕೆಯಾಗಿದ್ದಾರೆ ನೋಡೋಣ....
Updated on: Jan 20, 2022 | 2:37 PM

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳು 6 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಲಕ್ನೋ ಹಾಗೂ ಅಮಹದಾನಾದ್ ತಂಡಗಳು ಸ್ಪೆಷಲ್ ಪಿಕ್ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಇಲ್ಲಿ ಲಕ್ನೋ ಫ್ರಾಂಚೈಸಿಯು ತಂಡದ ನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ ಮಾಡಿದ್ರೆ, ಅಹದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಆಗಿ ಆರಿಸಿಕೊಂಡಿದೆ. ಹೀಗಾಗಿ ಈ ಇಬ್ಬರು ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

ಇದಲ್ಲದೆ ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಯಾವ ತಂಡಕ್ಕೆ ಯಾರು ಆಯ್ಕೆಯಾಗಿದ್ದಾರೆ ನೋಡೋಣ....

ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಿದ ಮೂವರು ಆಟಗಾರರು:

ಕೆಎಲ್ ರಾಹುಲ್ (ನಾಯಕ)

ರವಿ ಬಿಷ್ಣೋಯ್ (ಸ್ಪಿನ್ನರ್)

ಮಾರ್ಕಸ್ ಸ್ಟೋಯಿನಿಸ್ ( ಆಸ್ಟ್ರೇಲಿಯಾ ಆಲ್ರೌಂಡರ್)

ಅಹಮದಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿದ ಮೂವರು ಆಟಗಾರರು:

ಹಾರ್ದಿಕ್ ಪಾಂಡ್ಯ (ನಾಯಕ)

ರಶೀದ್ ಖಾನ್ (ಅಫ್ಘಾನಿಸ್ತಾನ್ ಸ್ಪಿನ್ನರ್)

ಶುಭ್ಮನ್ ಗಿಲ್ (ಆರಂಭಿಕ ಆಟಗಾರ)
