South Africa vs India: ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ ಭಾರತಕ್ಕೆ ಭಾರೀ ಮುಖಭಂಗ: ಟೀಮ್ ಇಂಡಿಯಾ ಎಡವಿದ್ದೆಲ್ಲಿ?

India vs South Africa 3rd ODI: ಏಕದಿನ ಸರಣಿಯ ಈ ಹೀನಾಯ ಸೋಲಿಗೆ ಟೀಮ್ ಇಂಡಿಯಾಕ್ಕೆ ಪ್ರಮುಖವಾಗಿ ಕಾಡಿದ್ದು ಅದೇ ಮಧ್ಯಮ ಕ್ರಮಾಂಕ, ಅದು ಬ್ಯಾಟಿಂಗ್ ಮತ್ತು ಬೌಲಿಂಗ್. ಆರಂಭದ ಮೊದಲ 3 ವಿಕೆಟ್ ಪತನಗೊಂಡರೆ ನಂತರ ನಿತ್ತು ಆಡುವ ಆಟಗಾರರು ತಂಡದಲ್ಲಿದ್ದರೂ ಅವರೆಲ್ಲ ವಿಫಲರಾಗಿದ್ದು ವಿಪರ್ಯಾಸ.

South Africa vs India: ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ ಭಾರತಕ್ಕೆ ಭಾರೀ ಮುಖಭಂಗ: ಟೀಮ್ ಇಂಡಿಯಾ ಎಡವಿದ್ದೆಲ್ಲಿ?
South Africa vs India 3rd ODI
Follow us
TV9 Web
| Updated By: Vinay Bhat

Updated on: Jan 24, 2022 | 7:30 AM

ಹರಿಣಗಳ ನಾಡಿಗೆ ತೆರಳುವ ಮುನ್ನ ಭಾರತ ತಂಡದ ಮೇಲೆ ಸಾಕಷ್ಟು ವಿಶ್ವಾಸವಿತ್ತು. ಆಯ್ಕೆ ಸಮಿತಿ ರೋಹಿತ್ ಶರ್ಮಾ (Rohit Sharma) ಅಲಭ್ಯತೆ ನಡುವೆಯೂ ಬಲಿಷ್ಠ ತಂಡವನ್ನೇ ಕಳುಹಿಸಿತ್ತು. ಆದರೆ, ಅಲ್ಲಿ ಆಗಿದ್ದು ಮಾತ್ರ ಬೇರೆಯೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದಿದ್ದು ಬಿಟ್ಟರೆ ಉಳಿದ ಎಲ್ಲ ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲು ಕಂಡಿತು. 1-2 ಅಂತರದಿಂದ ಟೆಸ್ಟ್ ಸರಣಿ ಸೋತರೆ ಏಕದಿನ ಸರಣಿ 0-3 ರಿಂದ ವೈಟ್​ವಾಷ್ ಮುಖಭಂಗಕ್ಕೆ ಒಳಗಾಯಿತು. ಏಕದಿನ ಸರಣಿಯ ಈ ಹೀನಾಯ ಸೋಲಿಗೆ ಟೀಮ್ ಇಂಡಿಯಾಕ್ಕೆ ಪ್ರಮುಖವಾಗಿ ಕಾಡಿದ್ದು ಅದೇ ಮಧ್ಯಮ ಕ್ರಮಾಂಕ, ಅದು ಬ್ಯಾಟಿಂಗ್ ಮತ್ತು ಬೌಲಿಂಗ್. ಆರಂಭದ ಮೊದಲ 3 ವಿಕೆಟ್ ಪತನಗೊಂಡರೆ ನಂತರ ನಿತ್ತು ಆಡುವ ಆಟಗಾರರು ತಂಡದಲ್ಲಿದ್ದರೂ ಅವರೆಲ್ಲ ವಿಫಲರಾಗಿದ್ದು ವಿಪರ್ಯಾಸ. ಸೂಕ್ತ ನಾಯಕನ ಕೊರತೆಯೂ ಅಲ್ಪ ಮಟ್ಟಕ್ಕೆ ಭಾರತಕ್ಕೆ ಕಾಡಿದ್ದು ಸುಳ್ಳಲ್ಲ.

ಹೌದು, ಸುಲಭವಾಗಿ ಗೆಲ್ಲಬಹುದಾಗಿದ್ದ ಮೂರನೇ ಏಕದಿನ ಪಂದ್ಯವನ್ನು ಭಾರತ ತನ್ನ ಕೈಯಾರೆ ಕಳೆದುಕೊಂಡಿತು. ಕೊನೇಯ ಹಂತದವರೆಗೂ ರೋಚಕವಾಗಿ ಹೋರಾಡಿತಾದರೂ ಗೆಲುವು ಸಾಧ್ಯವಾಗಲಿಲ್ಲ. ಅದರಲ್ಲೂ ಅಂತಿಮ ಹಂತದಲ್ಲಿ ದೀಪಕ್ ಚಾಹರ್ ಮಾಡಿದ ಅದ್ಭುತ ಹೋರಾಟ ಸಂಪೂರ್ಣ ವ್ಯರ್ಥವಾಯಿತು. ದಕ್ಷಿಣ ಆಪ್ರಿಕಾ ತಂಡ ಅಂತಿಮ ಪಂದ್ಯವನ್ನು ಕೇವಲ 4 ರನ್‌ಗಳಿಂದ ಮಣಿಸಿತು. ಈ ಮೂಲಕ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 3-0 ಅಂತರದಿಂದ ವೈಟ್‌ವಾಶ್ ಮಾಡಿತು.

ಈ ಬಾರು ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್‌ ಮಾಡಿದ ಆಫ್ರಿಕಾ ಪವರ್‌ ಪ್ಲೇ ಓವರ್‌ಗಳಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಭಾರತೀಯ ಬೌಲರ್​​ಗಳ ಮತ್ತೆ ಎಡವಿದ್ದು ಮಧ್ಯಮ ಓವರ್​ನಲ್ಲೇ. ಟೀಮ್‌ ಇಂಡಿಯಾ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದ ವಿಕೆಟ್‌ಕೀಪರ್‌ ಬ್ಯಾಟರ್ ಕ್ವಿಟಂನ್‌ ಡಿಕಾಕ್‌ ಮನಮೋಹಕ ಶತಕ ಬಾರಿಸಿದರು. ಹರಿಣ ಪಡೆ 70ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದಾಗ 4ನೇ ವಿಕೆಟ್‌ಗೆ ಇನ್‌ ಫಾರ್ಮ್‌ ಬ್ಯಾಟ್ಸ್‌ಮನ್‌ ರಾಸಿ ವ್ಯಾನ್‌ ಡೆರ್‌ ಡುಸೆನ್‌ ಜೊತೆಗೆ ಡಿಕಾಕ್‌ ಶತಕದ ಜೊತೆಯಾಟವಾಡಿದರು.

ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಡಿಕಾಕ್‌ 108 ಎಸೆತಗಳಲ್ಲಿ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ 17ನೇ ಶತಕ ಬಾರಿಸಿದರು. 130 ಎಸೆತಗಳಲ್ಲಿ 124 ರನ್‌ ಗಳಿಸಿ ಡಿಕಾಕ್‌ ಔಟ್‌ ಆದ ಬಳಿಕ ಅಂತಿಮ ಹಂತದ ವೇಳೆ ಕೊಂಚ ಕಮ್‌ಬ್ಯಾಕ್‌ ಮಾಡಿದ ಭಾರತ ತಂಡ ಎದುರಾಳಿಯನ್ನು 49.5 ಓವರ್‌ಗಳಲ್ಲಿ 287 ರನ್‌ಗಳಿಗೆ ಆಲ್‌ಔಟ್‌ ಮಾಡಿತು.

ಟಾರ್ಗೆಟ್ ಬೆನ್ನಟ್ಟಿದ ಭಾರತವು ನಾಯಕ ಕೆ.ಎಲ್.ರಾಹುಲ್ (9) ವಿಕೆಟನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿದರು. 58 ಎಸೆತಗಳಲ್ಲಿ 50 ರನ್ ಪೂರೈಸಿದ ಧವನ್ ಸರಣಿಯಲ್ಲಿ 2ನೇ ಅರ್ಧಶತಕ ಗಳಿಸಿದರು. ಧವನ್ 73 ಎಸೆತಗಳಲ್ಲಿ 61 ರನ್ ಬಾರಿಸಿದರು. ಧವನ್ ಔಟಾದ ಬೆನ್ನಿಗೇ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ (0)ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್‌ರೊಂದಿಗೆ 4ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದ ಕೊಹ್ಲಿ 63 ಎಸೆತಗಳಲ್ಲಿ 64ನೇ ಅರ್ಧಶತಕ ಗಳಿಸಿದರು. ಆದರೆ ಕೊಹ್ಲಿಯವರ ಇನಿಂಗ್ಸ್‌ 84 ಎಸೆತಗಳಲ್ಲಿ 65 ರನ್​ಗೆ ಅಂತ್ಯವಾಯಿತು.

ಶ್ರೇಯಸ್ ಅಯ್ಯರ್ 26 ರನ್ ಮತ್ತು ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿದರಾದರೂ ತಂಡವನ್ನ ಗೆಲುವಿನ ತಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಗೆಲುವಿಗೆ ಹೋರಾಟ ನಡೆಸಿದ್ದು ಆಲ್‌ರೌಂಡರ್ ದೀಪಕ್ ಚಹಾರ್. ತಮ್ಮ ವೃತ್ತಿಜೀವನದಲ್ಲಿ 2ನೇ ಅರ್ಧಶತಕವನ್ನು ಗಳಿಸಿ ತಂಡದ ಜಯಕ್ಕೆ ಶ್ರಮಿಸಿದರು. ಬೌಲರ್ ಜಸ್‌ಪ್ರೀತ್ ಬುಮ್ರಾ ಅವರೊಂದಿಗೆ 8ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದ ಚಹಾರ್ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ, ಚಹಾರ್ ವಿಕೆಟ್ ಕಬಳಿಸಿದ ವೇಗದ ಬೌಲರ್ ಎನ್‌ಗಿಡಿ(3-58) ಭಾರತಕ್ಕೆ ಗೆಲುವು ನಿರಾಕರಿಸಿದರು. ಚಹಾರ್ ಕೇವಲ 34 ಎಸೆತಗಳಲ್ಲಿ  5 ಬೌಂಡರಿ, 2 ಸಿಕ್ಸರ್ ಸಿಡಿಸಿ 54 ರನ್​ ಬಾರಿಸಿದರು.

Virat Kohli: ವಿರಾಟ್ ಕೊಹ್ಲಿ ಮದುವೆಯಾಗಿದಕ್ಕೆ ಈಗ ಚೆನ್ನಾಗಿ ಆಡ್ತಿಲ್ಲ ಎಂದ ಮಾಜಿ ಕ್ರಿಕೆಟಿಗ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್