ICC U19 World Cup 2022: ಕಿರಿಯರ ವಿಶ್ವಕಪ್ನಲ್ಲಿ ಕ್ವಾರ್ಟರ್ಫೈನಲ್ಗೆ ಎಂಟ್ರಿ ಕೊಟ್ಟ ಭಾರತ
ಕ್ವಾರ್ಟರ್ಫೈನಲ್ನಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬಹುದು.
ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡವು ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದೆ. ಕ್ವಾರ್ಟರ್ಫೈನಲ್ನಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ದ ಆಡಲಿದೆ. ಭಾರತ, ಬಾಂಗ್ಲಾದೇಶ ಅಲ್ಲದೆ, ಇಂಗ್ಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎಂಟರ ಘಟ್ಟ ಪ್ರವೇಶಿಸಿವೆ. ಲೀಗ್ ಹಂತದಲ್ಲಿ ಗ್ರೂಪ್ ಬಿನಲ್ಲಿ ಅಗ್ರ ತಂಡವಾಗಿ ಹೊರಹೊಮ್ಮಿರುವ ಭಾರತ ಇದೀಗ ಜನವರಿ 29 ರಂದು ನಡೆಯಲಿರುವ ಕ್ವಾರ್ಟರ್ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಈ ಬಾರಿಯ ಕಿರಿಯರ ವಿಶ್ವಕಪ್ನಲ್ಲಿ ಒಟ್ಟು 16 ತಂಡಗಳು ಕಾಣಿಸಿಕೊಂಡಿದ್ದವು. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅದರಂತೆ ಪ್ರತಿ ಗೂಪ್ನಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳು ಮುಂದಿನ ಹಂತಕ್ಕೇರಿದೆ. ಭಾರತ ತಂಡವು ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡ ತಂಡಗಳನ್ನು ಮಣಿಸಿ ಕ್ವಾರ್ಟರ್ಫೈನಲ್ಗೆ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾದ ಐವರು ಪ್ರಮುಖ ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾಗ್ಯೂ ಭಾರತ ತಂಡವು ಉಗಾಂಡ ವಿರುದ್ದ 5 ವಿಕೆಟ್ ನಷ್ಟಕ್ಕೆ 405 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಎಲ್ಲರ ಗಮನ ಸೆಳೆದಿತ್ತು.
ಇದೀಗ ಕ್ವಾರ್ಟರ್ಫೈನಲ್ನಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬಹುದು. ಹೀಗಾಗಿ ಬಾಂಗ್ಲಾ ವಿರುದ್ದದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದೆ.
ಕ್ವಾರ್ಟರ್ಫೈನಲ್ ಪಂದ್ಯಗಳ ವೇಳಾಪಟ್ಟಿ ಹೀಗಿದೆ:
ಜನವರಿ 26: ಇಂಗ್ಲೆಂಡ್ vs ಸೌತ್ ಆಫ್ರಿಕಾ, ಸ್ಥಳ: ನಾರ್ತ್ ಸೌಂಡ್
ಜನವರಿ 27: ಅಫ್ಘಾನಿಸ್ತಾನ್ vs ಶ್ರೀಲಂಕಾ; ಸ್ಥಳ: ಕೂಲಿಡ್ಜ್
ಜನವರಿ 28: ಆಸ್ಟ್ರೇಲಿಯಾ vs ಪಾಕಿಸ್ತಾನ್; ಸ್ಥಳ: ನಾರ್ತ್ ಸೌಂಡ್
ಜನವರಿ 29: ಬಾಂಗ್ಲಾದೇಶ vs ಭಾರತ; ಸ್ಥಳ: ನಾರ್ತ್ ಸೌಂಡ್
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Super League Quarter-Finalists of ICC U19 World Cup 2022)
Published On - 8:34 pm, Sun, 23 January 22