Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್
Deepak Chahar in Tears, IND vs SA 3rd ODI: ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೇ ಕೆಲ ಎಸೆತಗಳಲ್ಲಿ ಎಡವಿದ ಭಾರತ ವಿರೋಚಿತ ಸೋಲುಕಂಡಿತು. ಗೆಲುವಿಗೆ ಹೋರಾಟ ನಡೆಸಿಯೂ ತಂಡ ಸೋತಾಗ ದುಃಖ ತಾಳಲಾರದೆ ದೀಪಕ್ ಚಹರ್ ಕಣ್ಣೀರಿಟ್ಟರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ (South Africa vs India) ಗೆಲುವಿಗೆ ಹೋರಾಟ ನಡೆಸಿದ್ದು ದೀಪಕ್ ಚಹರ್. 210 ರನ್ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದು ದೀಪಕ್ ಚಹರ್. ಜಸ್ ಪ್ರೀತ್ ಬುಮ್ರಾ (Jasprit Bumrah) ಜೊತೆಗೂಡಿ ಆಕರ್ಷಕ 55 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವನ್ನು ಸಮೀಪಿಸಿದರು. ಆದರೆ, ಥ್ರಿಲ್ಲಿಂಗ್ ಗೆಲುವು ಪಡೆಯುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾಕ್ಕೆ ಕೊನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಮಾರಕ ದಾಳಿ ನಡೆಸಿ ಸೋಲುಣಿಸಿದರು. ಚಹರ್ ಕೇವಲ 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಿಡಿಸಿ 54 ರನ್ ಚಚ್ಚಿ ಅಂತಿಮ ಹಂತದಲ್ಲಿ ಔಟಾದರು. ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ (Deepak Chahar) ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೇ ಕೆಲ ಎಸೆತಗಳಲ್ಲಿ ಎಡವಿದ ಭಾರತ ವಿರೋಚಿತ ಸೋಲುಕಂಡಿತು. ಗೆಲುವಿಗೆ ಹೋರಾಟ ನಡೆಸಿಯೂ ತಂಡ ಸೋತಾಗ ದುಃಖ ತಾಳಲಾರದೆ ದೀಪಕ್ ಚಹರ್ ಕಣ್ಣೀರಿಟ್ಟರು.
ಹೌದು, ಚಹರ್ ಅವರ ಬೌಂಡರಿ ಸಿಕ್ಸರ್ಗಳಿಂದ ಭಾರತ 45ನೇ ಓವರ್ನಲ್ಲಿ 250 ರನ್ಗಳ ಗಡಿ ದಾಟಿತ್ತು. ಕೇವಲ 31 ಎಸೆತಗಳಲ್ಲಿಯೇ ಏಕದಿನದಲ್ಲಿ ತಮ್ಮ 2ನೇ ಅರ್ಧಶತಕ ಪೂರೈಸಿದ ಚಹರ್ ತಂಡಕ್ಕೆ ಗೆಲುವು ನೀಡುವ ಸಂಪೂರ್ಣ ವಿಶ್ವಾಸದಲ್ಲಿದ್ದರು. ಕೊನೇ ಮೂರು ಓವರ್‌ಗಳಲ್ಲಿ ಭಾರತಕ್ಕೆ ಗೆಲ್ಲಲು ಬೇಕಿದ್ದಿದ್ದು ಕೇವಲ 10 ರನ್ ಮಾತ್ರ. ಇನ್ನೇನು ಭಾರತ ತಂಡ ಗೆಲ್ಲುವುದು ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಅದರಂತೆ ವಿಶ್ವಾಸದಲ್ಲಿದ್ದ ದೀಪಕ್ ಚಹರ್, ಲುಂಗಿ ಎನ್ಗಿಡಿ ಎಸೆತದಲ್ಲಿ ಕವರ್ಸ್ ಮೇಲೆ ಹೊಡೆಯಲು ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು.
ಚಹರ್ ಔಟಾಗಿದ್ದೇ ತಡ ಪಂದ್ಯದ ದಿಕ್ಕು ಎದುರಾಳಿ ತಂಡದತ್ತ ಮುಖ ಮಾಡಿತು. ಚಹರ್ ಔಟಾದರು ಅವರು ಡ್ರೆಸ್ಸಿಂಗ್ ರೂಮ್ಗೆ ತೆರಳಿಲ್ಲ. ಬೌಂಡರಿ ಲೈನ್ ಬಳಿ ಭಾರತ ಗೆಲುವು ಸಾಧಿಸುತ್ತದೆ ಎಂದು ನಂಬಿ ಕುಳಿತಿದ್ದರು. ಆದರೆ, ಆಗಿದ್ದೇ ಬೇರೆ. ದಕ್ಷಿಣ ಆಫ್ರಿಕಾ ವೇಗಿಗಳ ನಿಧಾನಗತಿಯ ಎಸೆತಗಳನ್ನು ಎದುರಿಸುವಲ್ಲಿ ಜಸ್‌ಪ್ರಿತ್ ಬುಮ್ರಾ, ಯುಜ್ವೇಂದ್ರ ಚಹಲ್ ಹಾಗೂ ಪ್ರಸಿಧ್ ಕೃಷ್ಣ ವಿಫಲರಾದರು. ಭಾರತ ಸೋಲು ಕಂಡಿತು. ತಂಡ ಸೋತಾಗ ದುಃಖ ತಾಳಲಾರದೆ ಚಹರ್ ಗಳಗಳನೇ ಕಣ್ಣೀರಿಟ್ಟರು. ಈ ವೇಳೆ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ದೀಪಕ್ ಅವರನ್ನು ಸಮಾಧಾನ ಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Sport ? pic.twitter.com/3MPTptkc04
— Benaam Baadshah (@BenaamBaadshah4) January 24, 2022
ಗೆಲುವಿವಾಗಿ ಹೋರಾಟ ನಡೆಸಿದ ದೀಪಕ್ ಚಹರ್ ಆಟವನ್ನು ನಾಯಕ ಕೆಎಲ್ ರಾಹುಲ್ ಕೊಂಡಾಡಿದ್ದಾರೆ. ದೀಪಕ್ ಚಹರ್ ನಮಗೆ ಗೆಲ್ಲಬಹುದಾದ ಉತ್ತಮ ಅವಕಾಶವನ್ನು ಮಾಡಿಕೊಟ್ಟಿದ್ದರು. ಪಂದ್ಯ ರೋಚಕತೆ ಸೃಷ್ಟಿಸುವಂತೆ ಮಾಡಿದರು ಎಂದು ಹೇಳಿದ್ದಾರೆ. ಈ ಮೂಲಕ ಪಂದ್ಯದ ಕೊನೆಯಲ್ಲಿ ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟರೂ ಕೂಡ ಆಟಗಾರರು ಉತ್ತಮ ಪ್ರದರ್ಶನ ನೀಡದೇ ಇರುವುದು ಸೋಲಿಗೆ ಕಾರಣವಾಯಿತು ಎಂಬುದನ್ನು ಕೆಎಲ್ ರಾಹುಲ್ ಪರೋಕ್ಷವಾಗಿ ತಿಳಿಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ದೀಪಕ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ
KL Rahul: ವೈಟ್ವಾಷ್ ಮುಖಭಂಗದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ