IND vs WI Series: ಭಾರತ-ವೆಸ್ಟ್ ಇಂಡೀಸ್ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
India vs West Indies Full Schedule: ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದೆ. ಕೊರೋನಾ ಕಾರಣದಿಂದಾಗಿ ಈ ಸರಣಿಯ ಏಕದಿನ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆದರೆ, ಟಿ20 ಸರಣಿಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಭಾರತ-ದಕ್ಷಿಣ ಆಫ್ರಿಕಾ ಸರಣಿ ಮುಕ್ತಾಯವಾಗಿದೆ. ಸೌತ್ ಆಫ್ರಿಕಾ ವಿರುದ್ದ ಕಳಪೆ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ (Team India) ಮುಂದಿನ ತಿಂಗಳು ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಸರಣಿ (IND vs WI Series) ಆಡಲಿದೆ. ಫೆಬ್ರವರಿ 6 ರಿಂದ ಈ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದೆ. ಕೊರೋನಾ ಕಾರಣದಿಂದಾಗಿ ಈ ಸರಣಿಯ ಏಕದಿನ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆದರೆ, ಟಿ20 ಸರಣಿಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಏಕದಿನ ಸರಣಿ ಯಾವಾಗ ಪ್ರಾರಂಭವಾಗುತ್ತವೆ? ಫೆಬ್ರವರಿ 6 ರಿಂದ 2022 ರಂದು ಪ್ರಾರಂಭವಾಗುತ್ತದೆ.
ಪಂದ್ಯದ ಸಮಯ? ಏಕದಿನ ಪಂದ್ಯಗಳು ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದೆ.
ಪಂದ್ಯದ ನಡೆಯುವ ಸ್ಟೇಡಿಯಂ ಯಾವುದು? ಏಕದಿನ ಸರಣಿ ಮೂರು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಟಿ20 ಸರಣಿ ಯಾವಾಗ ಪ್ರಾರಂಭ? ಫೆಬ್ರವರಿ 16, 2022 ರಂದು ಟಿ20 ಪ್ರಾರಂಭವಾಗಲಿದೆ.
ಪಂದ್ಯದ ಸಮಯ? ಟಿ20 ಸರಣಿಯ ಪಂದ್ಯಗಳು ಸಂಜೆ 7 ಗಂಟೆಯಿಂದ ಶುರುವಾಗಲಿದೆ.
ಪಂದ್ಯ ನಡೆಯುವ ಸ್ಥಳ? ಎಲ್ಲಾ ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು? ಎಲ್ಲಾ ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಹಾಟ್‌ಸ್ಟಾರ್‌ನಲ್ಲಿ ಇರಲಿದೆ.
ಏಕದಿನ ಸರಣಿಯ ವೇಳಾಪಟ್ಟಿ:
1ನೇ ODI, ಫೆಬ್ರವರಿ 6, ಭಾನುವಾರ, ಅಹಮದಾಬಾದ್
2ನೇ ODI, ಫೆಬ್ರವರಿ 9, ಬುಧವಾರ, ಅಹಮದಾಬಾದ್
3ನೇ ODI, ಫೆಬ್ರವರಿ 11, ಶುಕ್ರವಾರ, ಅಹಮದಾಬಾದ್
ಟಿ20 ಸರಣಿಯ ವೇಳಾಪಟ್ಟಿ:
1 ನೇ T20, ಫೆಬ್ರವರಿ 16 , ಬುಧವಾರ, ಕೋಲ್ಕತ್ತಾ
2 ನೇ T20, ಫೆಬ್ರವರಿ 18 , ಶುಕ್ರವಾರ, ಕೋಲ್ಕತ್ತಾ
3ನೇ T20, ಫೆಬ್ರವರಿ 20 , ಭಾನುವಾರ, ಕೋಲ್ಕತ್ತಾ
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(IND vs WI Series: India vs West Indies Full Schedule)