ಸತ್ತ ಮರಿಯ ಎದುರು ನಿಂತು ಈ ಮಮತಾಮಯಿ ತಾಯಿ ಆನೆ ಕಣ್ಣೀರು ಸುರಿಸುತ್ತಾ ರೋದಿಸಿತು
ಆಗಷ್ಟೇ ಈ ಮಮತಾಮಯಿ ತಾಯಿ ಅನೆಗೆ ತನ್ನ ಮರಿ ಸತ್ತಿರುವುದು ಗೊತ್ತಾಗಿದೆ. ರಕ್ಷಿತಾರಣ್ಯದ ಅಧಿಕಾರಿಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮರಿ ಅನೆ ಯಾವುದೋ ಕಾಯಿಲೆಯಿಂದ ನರಳುತಿತ್ತು. ಚಿಕಿತ್ಸೆ ಹೊರತಾಗಿಯೂ ಅದಕ್ಕೆ ಚೇತರಿಸಿಕೊಳ್ಳವುದು ಸಾಧ್ಯವಾಗಿಲ್ಲ.
ಸಾಕುಪ್ರಾಣಿಗಳಲ್ಲಿ (pets) ಅದರಲ್ಲೂ ವಿಶೇಷವಾಗಿ ನಾಯಿಗಳು ತಮ್ಮ ಯಜಮಾನ ಮತ್ತು ಕುಟುಂಬದ ಸದಸ್ಯರೊಂದಿಗೆ ಭಾವಾನಾತ್ಮಕ ಸಂಬಂಧ ಹೊಂದಿರುತ್ತವೆ ಅಂತ ನಮಗೆಲ್ಲ ಗೊತ್ತಿದೆ. ಕುಟುಂಬದ ಸದಸ್ಯರೊಬ್ಬರು ನಿಧನ ಹೊಂದಿದಾಗ ಅವು ಊಟ-ನೀರು ಬಿಟ್ಟು ರೋದಿಸುವದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಹಾಗಂತ ಕೇವಲ ಸಾಕು ಪ್ರಾಣಿಗಳಲ್ಲಿ ಮಾತ್ರ ಅಂಥ ಪ್ರವೃತ್ತಿ ಕಾಣುತ್ತದೆ ಅಂತ ಭಾವಿಸಬೇಡಿ. ವನ್ಯಪ್ರಾಣಿಗಳು (wild animals) ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಾಗ ದುಃಖಿಸುತ್ತವೆ ಮತ್ತು ರೋದಿಸುತ್ತವೆ. ನಮಗೆ ಚಾಮರಾಜನಗರ ಬಿ ಎರ್ ಟಿ ಅಭಯಾರಣ್ಯದ (BRT Reserve Forest) ಕೆ ಗುಡಿ ವಲಯದಿಂದ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋ ಲಭ್ಯವಾಗಿದೆ. ಇದನ್ನು ನೋಡುತ್ತಿದ್ದರೆ ವನ್ಯಜೀವಿಗಳಿಗೂ ನಮ್ಮಂತೆಯೇ ಭಾವನೆಗಳಿರುತ್ತವೆ ಅನ್ನುವುದು ವಿದಿತವಾಗುತ್ತದೆ.
ವಿಡಿಯೋನಲ್ಲಿ ಒಂದು ಹೆಣ್ಣಾನೆ ಅತಂಕದಿಂದ ಧಾವಿಸಿ ಬರುತ್ತಿರುವುದು ನಿಮಗೆ ಕಾಣುತ್ತದೆ. ಆಗಷ್ಟೇ ಈ ಮಮತಾಮಯಿ ತಾಯಿ ಅನೆಗೆ ತನ್ನ ಮರಿ ಸತ್ತಿರುವುದು ಗೊತ್ತಾಗಿದೆ. ರಕ್ಷಿತಾರಣ್ಯದ ಅಧಿಕಾರಿಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮರಿ ಅನೆ ಯಾವುದೋ ಕಾಯಿಲೆಯಿಂದ ನರಳುತಿತ್ತು. ಚಿಕಿತ್ಸೆ ಹೊರತಾಗಿಯೂ ಅದಕ್ಕೆ ಚೇತರಿಸಿಕೊಳ್ಳವುದು ಸಾಧ್ಯವಾಗಿಲ್ಲ. ಸೋಮವಾರದಂದು ಅದು ಅಸು ನೀಗಿದೆ.
ತಾಯಿ ಅನೆ ಕಣ್ಣುಗಳಿಂದ ನೀರು ಸುರಿಯುತ್ತಿರುವುದು ನಮಗೆ ಕಾಣಿತ್ತಿಲ್ಲವಾದರೂ ಅದು ಕಣ್ಣೀರು ಸುರಿಸಿತು ಅಂತ ಅಧಿಕಾರಿಗಳು ಹೇಳಿದ್ದಾರೆ. ಬಹಳ ಸಮಯದವರೆಗೆ ಅದು ಗೋಳಾಡಿದಂತೆ.
ಇದನ್ನೂ ಓದಿ: IPL 2022: ಭಾವನಾತ್ಮಕ ವಿಡಿಯೋ ಮೂಲಕ ಕೆಕೆಆರ್ಗೆ ವಿದಾಯ ಹೇಳಿದ ಶುಭ್ಮನ್ ಗಿಲ್; ವಿಡಿಯೋ ನೋಡಿ