‘ರಾಜ್ಕುಮಾರ್ ಸಂಭಾವನೆ 5 ಸಾವಿರದಿಂದ 10 ಸಾವಿರ ಆಗಲು ಹತ್ತು ಸಿನಿಮಾ ಮಾಡಿದ್ರು’
, ಸ್ಟಾರ್ ನಟರ ಸಂಭಾವನೆ ಹೆಚ್ಚುತ್ತಲೇ ಇದೆ. ಆದರೆ, ಅಂದಿನ ಕಾಲದಲ್ಲಿ ಹಾಗಿರಲಿಲ್ಲ. ರಾಜ್ಕುಮಾರ್ ಆಗಿನ ಕಾಲದಲ್ಲಿ ಐದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.
ಸ್ಯಾಂಡಲ್ವುಡ್ (Sandalwood) ಮಾರುಕಟ್ಟೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಸ್ಟಾರ್ ನಟರ ಸಿನಿಮಾಗಳು ಕೋಟಿಕೋಟಿ ಕಮಾಯಿ ಮಾಡುತ್ತವೆ. ಒಟಿಟಿ ಹಕ್ಕು, ಡಬ್ಬಿಂಗ್ ಹಕ್ಕು, ಚಿತ್ರಮಂದಿರದ ಕಲೆಕ್ಷನ್ ಸೇರಿದರೆ ದೊಡ್ಡ ಮಟ್ಟದಲ್ಲಿ ಗಳಿಕೆ ಆಗುತ್ತದೆ. ಹೀಗಾಗಿ, ಸ್ಟಾರ್ ನಟರ ಸಂಭಾವನೆ ಹೆಚ್ಚುತ್ತಲೇ ಇದೆ. ಆದರೆ, ಅಂದಿನ ಕಾಲದಲ್ಲಿ ಹಾಗಿರಲಿಲ್ಲ. ರಾಜ್ಕುಮಾರ್ ಆಗಿನ ಕಾಲದಲ್ಲಿ ಐದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಅದನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡಿಕೊಳ್ಳಲು ಅವರು 10 ಸಿನಿಮಾ ಮಾಡಬೇಕಾಯಿತು. ಈ ಬಗ್ಗೆ ಹಿರಿಯ ನಟ ಬೆಂಗಳೂರು ನಾಗೇಶ್ (Bangalore Nagesh) ಅವರು ಮಾತನಾಡಿದ್ದಾರೆ. ‘ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಾಗೇಶ್ ಅವರು ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದರು. ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ರಂಗದಲ್ಲಿ ನಮ್ಮಂಥ ಹಳಬರಿಗೆ ಈಗ ಅವಕಾಶವಿಲ್ಲ’; ಹಿರಿಯ ನಟನ ಬೇಸರ
ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್ವುಡ್ ಸುಂದರಿಯ ಕ್ಯೂಟ್ ಫೋಟೋ ಆಲ್ಬಂ