ಸರೋಗೇಸಿ ಮೂಲಕ ಪ್ರಿಯಾಂಕಾ ಮತ್ತು ನಿಕ್ ಮಗು ಪಡೆದಿದ್ದಾರೆ, ಭಾರತದಲ್ಲಿ ಬಾಡಿಗೆ ತಾಯ್ತನಕ್ಕೆ ಅವಕಾಶವಿದೇಯೇ?
ಸ್ವಾರ್ಥರಹಿತ ಬಾಡಿಗೆ ತಾಯ್ತನ ಅಂದರೆ, ಮಾನವೀಯ ನೆಲೆಗಟ್ಟಿನಲ್ಲಿ ನಡೆಯುವಂಥದ್ದು. ಇದರಲ್ಲಿ ಹಣದ ವಿನಿಮಯ, ಹಣದ ರೂಪದಲ್ಲಿ ಉಡುಗೊರೆ (ಅಂದರೆ ಬಾಡಿಗೆ ತಾಯಿಗೆ ನೀಡುವಂಥದ್ದು) ಇರೋದಿಲ್ಲ. ಕೇವಲ ವೈದ್ಯಕೀಯ ವೆಚ್ಚವನ್ನು ಮಾತ್ರ ಮಗುವನ್ನು ಪಡೆಯಬಯಸುವ ದಂಪತಿ ಭರಿಸಬೇಕಾಗುತ್ತದೆ.
ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಪುನಃ ಸುದ್ದಿಯಲ್ಲಿರೋದು ಗೊತ್ತಿರುವ ವಿಚಾರವೇ. ಅವರು ಮತ್ತು ಪತಿ ನಿಕ್ ಜೋನಾಸ್ (Nick Jonas) ಸರೋಗೇಸಿಯ (Surrogacy) (ಬಾಡಿಗೆ ತಾಯ್ತನ) ಮೂಲಕ ಮಗೊವೊಂದನ್ನು ಪಡೆದು ಮಮ್ಮಿ-ಡ್ಯಾಡಿ ಅಗಿದ್ದಾರೆ. ಕಳೆದ ಶುಕ್ರವಾರ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಮಗು ಪಡೆದಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಅರೈಕೆಯಲ್ಲಿ ಇಬ್ಬರೂ ತಲ್ಲೀನರಾಗಿರುವುದರಿಂದ ಯಾರೂ ಡಿಸ್ಟರ್ಬ್ ಮಾಡದೆ ತಮ್ಮ ಖಾಸಗಿತನವನನ್ನು ಗೌರವಿಸಬೇಕೆಂದು ಒಂದೇ ತೆರನಾಗಿರುವ ತಮ್ಮ ಬೇರೆ ಬೇರೆ ಪೋಸ್ಟ್ಗಳಲ್ಲಿ ಹೇಳಿಕೊಂಡಿದ್ದಾರೆ. ಪೋಸ್ಟ್ಗಳಲ್ಲಿ ಬೇಬಿ ಅಂತ ಹೇಳಿದ್ದಾರೆಯೇ ಹೊರತು ಗಂಡು ಬೇಬಿಯೋ ಆಥವಾ ಹೆಣ್ಣು ಬೇಬಿಯೋ ಅಂತ ಹೇಳಿಲ್ಲ. ಹಾಗೆ ನೋಡಿದರೆ, ಕೆಲ ಸಮಯದ ಹಿಂದೆ ಭಾರತದಲ್ಲಿ ಬಾಡಿಗೆ ತಾಯ್ತನ ಕಾನೂನುಬಾಹಿರ ಅಂತ ಹೇಳಲಾಗುತ್ತಿತ್ತು. ಇತ್ತೀಚಿಗೆ ಸಂಸತ್ತಿನಲ್ಲಿ ಒಂದು ಮಸೂದೆ ಪಾಸು ಮಾಡಲಾಗಿದೆ ಮತ್ತು ಅದರಲ್ಲಿ ಕಮರ್ಶಿಯಲ್ ಮತ್ತು ಸ್ವಾರ್ಥರಹಿತ ಸರೋಗೇಸಿಗೆ ಅವಕಾಶವಿದೆ.
ಸ್ವಾರ್ಥರಹಿತ ಬಾಡಿಗೆ ತಾಯ್ತನ ಅಂದರೆ, ಮಾನವೀಯ ನೆಲೆಗಟ್ಟಿನಲ್ಲಿ ನಡೆಯುವಂಥದ್ದು. ಇದರಲ್ಲಿ ಹಣದ ವಿನಿಮಯ, ಹಣದ ರೂಪದಲ್ಲಿ ಉಡುಗೊರೆ (ಅಂದರೆ ಬಾಡಿಗೆ ತಾಯಿಗೆ ನೀಡುವಂಥದ್ದು) ಇರೋದಿಲ್ಲ. ಕೇವಲ ವೈದ್ಯಕೀಯ ವೆಚ್ಚವನ್ನು ಮಾತ್ರ ಮಗುವನ್ನು ಪಡೆಯಬಯಸುವ ದಂಪತಿ ಭರಿಸಬೇಕಾಗುತ್ತದೆ. ‘ಕಮರ್ಶಿಯಲ್ ಸರೋಗೇಸಿ’ ಯ ಅರ್ಥ ಮಾನವ ಭ್ರೂಣವನ್ನು ಮಾರುವುದು ಅಥವಾ ಖರೀದಿಸುವುದನ್ನು ಒಳಗೊಂಡಿರುತ್ತದೆ. ಅಂದರೆ, ಬಾಡಿಗೆ ತಾಯಿಗೆ ಹಣ ನೀಡಬೇಕಾಗುತ್ತದೆ.
ಭಾರತದಲ್ಲಿ ಸರೋಗೇಸಿಗೆ ಸಬಂಧಪಟ್ಟಂತೆ ಈಗ ಜಾರಿಗೊಳಿಸಿರುವ ಹೊಸ ಕಾಯ್ದೆಯಲ್ಲಿ ಕೆಲ ಮಾರ್ಪಾಟುಗಳನ್ನು ಮಾಡುವ ಪ್ರಸ್ತಾಪವಿದೆ. ಅಧಿಕೃತವಾಗಿ ಅಂದರೆ ಕಾನೂನಾತ್ಮಕವಾಗಿ 5 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ದಂಪತಿಗಳಾಗಿರುವ ದಂಪತಿಗಳು ಮಾತ್ರ ಸರೋಗೇಸಿ ವಿಧಾನದ ಮೂಲಕ ಮಗುವನ್ನು ಪಡೆಯಬಹುದು.
ಬಂಜೆತನ ಅನುಭವಿಸುತ್ತಿರುವ ಮತ್ತು 23-50 ವಯಸ್ಸಿನ ಮಹಿಳೆ ಮತ್ತು 26-55 ವರ್ಷ ವಯಸ್ಸಿನ ಪುರುಷ; ವಿವಾಹಿತ ಭಾರತೀಯ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಅರ್ಹರು.
ಬಾಡಿಗೆ ತಾಯಿ ಹೆರಿಗಾಗಿ ಆಸ್ಪತ್ರೆಗೆ ದಾಖಲಾಗುವಾಗ ಒಬ್ಬ ರೋಗಿಯಂತೆ ದಾಖಲಾಗಬೇಕು. ಹಾಗೆ ದಾಖಲಾಗುವಾಗ ಅಕೆ ಮಗುವಿನ ಅಸಲಿ ತಂದೆ-ತಾಯಿ, ಅವರ ವಯಸ್ಸು, ವಿಳಾಸ ಮೊದಲಾದ ಎಲ್ಲ ವಿವರಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಬೇಕು. ಮಗುವನ್ನು ಆಕೆ ಹೆರುತ್ತಾಳಾದರೂ ಅದರ ಮೇಲೆ ಹಕ್ಕು ಜತಾಯಿಸಲಾರಳು.
ಸರೋಗೇಸಿ ಮೂಲಕ ಮಗುವನ್ನು ಪಡೆಯುವಾಗ ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ.
ಇದನ್ನೂ ಓದಿ: ‘ನಮ್ಮ ನಿರ್ಧಾರ ಬದಲಾಗಿಲ್ಲ’; ಮಗಳ ವೈರಲ್ ವಿಡಿಯೋ ಬಗ್ಗೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಪ್ರತಿಕ್ರಿಯೆ