ಈಬನ್ ಹ್ಯಾಮ್ಸ್ ಜೊತೆ ಬ್ರೇಕ್-ಅಪ್ ಆದ ನಂತರ ಒಂಟಿತನ ಅನುಭವಿಸುತ್ತಿದ್ದ ಕೃಷ್ಣಾ ಶ್ರಾಫ್ಗೆ ಅಣ್ಣ ಟೈಗರ್ ಶ್ರಾಫ್ ಮೆಂಟರ್!
ಕಳೆದ ವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಕೃಷ್ಣಾಗೆ ತಮ್ಮ ಕೈಬರಹದ ಸುಂದರ ಸಂದೇಶವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಟೈಗರ್ ಅವರಿಗೆ ಮಾಲ್ಡೀವ್ಸ್ ಪ್ರವಾಸದ ಪ್ಯಾಕೇಜನ್ನು ಉಡುಗೊರೆಯಾಗಿ ನೀಡಿ ಪ್ರೀತಿಯನ್ನು ಅವರ ಮೇಲೆ ಸುರಿದಿದ್ದಾರೆ.
ಜಾಕಿ ಶ್ರಾಫ್ (Jackie Shroff) ಮಕ್ಕಳು ಟೈಗರ್ ಶ್ರಾಫ್ (Jackie Shroff) ಮತ್ತು ಕೃಷ್ಣಾ ಶ್ರಾಫ್ (Krishna Shroff) ಭಾರತದಲ್ಲಿ ಎಲ್ಲರಿಗೂ ಪರಿಚಿತರು. ಟೈಗರ್ ಬಾಲಿವುಡ್ ನಲ್ಲಿ ಅಪ್ಪನ ಹಾಗೆ ದೊಡ್ಡ ಹೆಸರು ಮಾಡಿದ್ದಾರೆ. ಬಾಂಡ್ ಶೈಲಿಯ ಸಿನಿಮಾ ಮಾಡಬಯಸುವ ನಿರ್ಮಾಪಕರಿಗೆ ಮೊದಲು ಹೊಳೆಯುವ ಹೆಸರೇ ಫಿಟ್ನೆಸ್ ಫ್ರೀಕ್ ಟೈಗರ್. ಗಮನಿಸಬೇಕಾದ ಅಂಶವೆಂದೆ ಅಣ್ಣನ ಹಾಗೆ ಕೃಷ್ಣಾ ಸಹ ಈಗ ಮಾರ್ಷಲ್ ಆರ್ಟ್ಸ್ನಲ್ಲಿ ಪರಿಣಿತೆ. ಟೈಗರ್ ನೊಂದಿಗೆ ಅವರು ಕೂಡ ಜಿಮ್ ನಲ್ಲಿ ದೇಹ ದಣಿಸುತ್ತಾರೆ. ಒಂದರ್ಥದಲ್ಲಿ ಅಣ್ಣನೇ ಆವರಿಗೆ ಗುರು, ಮಾರ್ಗದರ್ಶಕ ಮತ್ತು ಮೆಂಟರ್. ನಿಮಗೆ ನೆನಪಿರಬಹುದು, ಕೃಷ್ಣಾ ಆಸ್ಟ್ರೇಲಿಯಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಈಬನ್ ಹ್ಯಾಮ್ಸ್ ಜೊತೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಅವರಿಬ್ಬರ ನಿಶ್ಚಿತಾರ್ಥವೂ ಆಗಿತ್ತೆಂದು ಹೇಳುತ್ತಾರೆ. ಅವರಿಬ್ಬರು ಬೀಚ್ಗಳಲ್ಲಿ, ರೆಸ್ಟುರಾಂಟ್ ಗಳಲ್ಲಿ, ಜೊತೆಯಾಗಿರುವ ಅನೇಕ ಫೋಟೋಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ 29 ವರ್ಷ ವಯಸ್ಸಿನ ಕೃಷ್ಣಾ, ಈಬನ್ ನಿಂದ ಬೇರ್ಪಟ್ಟು ಆಸ್ಟ್ರೇಲಿಯದಿಂದ ವಾಪಸ್ಸಾಗಿ ಎರಡು ವರ್ಷ ಕಳೆದಿವೆ.
ಅಲ್ಲಿಂದೀಚಿಗೆ ಟೈಗರ್ ತಂಗಿಯಲ್ಲಿ ನೈತಿಕ ಸ್ಥೈರ್ಯ ತುಂಬುತ್ತಾ ಅವರಿಗೆ ಮೆಂಟರ್ ಆಗಿದ್ದಾರೆ. ಕಳೆದ ವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಕೃಷ್ಣಾಗೆ ತಮ್ಮ ಕೈಬರಹದ ಸುಂದರ ಸಂದೇಶವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಟೈಗರ್ ಅವರಿಗೆ ಮಾಲ್ಡೀವ್ಸ್ ಪ್ರವಾಸದ ಪ್ಯಾಕೇಜನ್ನು ಉಡುಗೊರೆಯಾಗಿ ನೀಡಿ ಪ್ರೀತಿಯನ್ನು ಅವರ ಮೇಲೆ ಸುರಿದಿದ್ದಾರೆ.
ಅದ್ಭುತವಾದ ಮೈಮಾಟ ಮತ್ತು ಆಕರ್ಷಕ ರೂಪದ ಒಡತಿಯಾಗಿದ್ದರೂ ಕೃಷ್ಣಾ ಸಿನಿಮಾಗಳಲ್ಲಿ ನಟಿಸುವ ಬಯಕೆ ಯಾವತ್ತೂ ತೋರಿಲ್ಲ. ಅವರಿಗೆ ಇಷ್ಟವಿಲ್ಲವೋ ಆಥವಾ ತಾಯಿ ಆಯೇಶಾ ಶ್ರಾಫ್ ತಡೆದರೋ ಅಂತ ಸ್ಪಷ್ಟವಾಗಿಲ್ಲ ಮಾರಾಯ್ರೇ. ಅದರೆ ಬೆಳ್ಳಿಪರದೆಯ ಮೇಲೆ ಮಿಂಚಬಲ್ಲ ಚೆಲುವು ಮತ್ತು ಅಂಗಸೌಷ್ಠವ ಅವರಿಗಿದೆ. ಟೈಗರ್ ಜೊತೆ ಸೇರಿ ತಮ್ಮ ದೇಹವನ್ನು ಮತ್ತಷ್ಟು ಟ್ರಿಮ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶಮಂತ್ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್ ಮಾಡಿದ ಕಿಚ್ಚ ಸುದೀಪ್; ವೈರಲ್ ಆಯ್ತು ವಿಡಿಯೋ