ಶಮಂತ್​ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್​ ಮಾಡಿದ ಕಿಚ್ಚ ಸುದೀಪ್​; ವೈರಲ್​ ಆಯ್ತು ವಿಡಿಯೋ

ಶಮಂತ್​ ಬ್ರೋ ಗೌಡ ಖರೀದಿಸಿದ ಐಷಾರಾಮಿ ಕಾರು ರೈಡ್​ ಮಾಡಿದ ಕಿಚ್ಚ ಸುದೀಪ್​; ವೈರಲ್​ ಆಯ್ತು ವಿಡಿಯೋ
ಸುದೀಪ್​-ಶಮಂತ್​

ಶಮಂತ್​ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಕಾರನ್ನು ಸುದೀಪ್​ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು.

TV9kannada Web Team

| Edited By: Rajesh Duggumane

Jan 24, 2022 | 1:30 PM


ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಅತಿ ಲಕ್ಕಿ ಪರ್ಸನ್​ ಎಂದೇ ಖ್ಯಾತಿ ಪಡೆದುಕೊಂಡವರು ಶಮಂತ್​ ಬ್ರೋ ಗೌಡ (Shamanth BroGowda). ಬಿಗ್​ ಬಾಸ್​ ಜರ್ನಿಯಲ್ಲಿ ಅವರು ಕೊನೆಯವರೆಗೂ ಉಳಿದುಕೊಂಡಿದ್ದು ಒಂದು ಅಚ್ಚರಿಯೇ ಸರಿ. ಆರಂಭದಲ್ಲಿ ಸ್ಲೋ ಇದ್ದ ಅವರು ನಂತರ ವೇಗ ಹೆಚ್ಚಿಸಿಕೊಂಡಿದ್ದರು. ಇದರಿಂದ ಅವರ ವೃತ್ತಿಜೀವನಕ್ಕೂ ವೇಗ ಸಿಕ್ಕಿದೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ಜನರು ಅವರನ್ನು ಹಿಂಬಾಲಿಸುತ್ತಿದ್ದಾರೆ. ಇತ್ತೀಚೆಗೆ ಅವರು ಐಷಾರಾಮಿ ಕಾರು ಖರೀದಿ ಮಾಡಿದ್ದರು. ಅವರ ಕಾರನ್ನು ಕಿಚ್ಚ ಸುದೀಪ್ (Kichcha Sudeep)​ ಅವರು ರೈಡ್​ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ.

ಕಿಚ್ಚ ಸುದೀಪ್​ಗೆ ಬಿಗ್​ ಬಾಸ್​ ಸ್ಪರ್ಧಿಗಳ ಮೇಲೆ ಯಾವಾಗಲೂ ವಿಶೇಷ ಗೌರವ ಇದೆ. ಅವರನ್ನು ತಮ್ಮ ಮನೆಯವರು ಎಂಬ ರೀತಿಯಲ್ಲೇ ಬಿಗ್​ ಬಾಸ್​ ಸ್ಪರ್ಧಿಗಳನ್ನು ಟ್ರೀಟ್​ ಮಾಡುತ್ತಾರೆ. ಬಿಗ್​ ಬಾಸ್​ ಸ್ಪರ್ಧಿ ಆಗಿದ್ದ ಸೋನು ಪಾಟೀಲ್​ ತಾಯಿಗೆ ಅನಾರೋಗ್ಯ ಆದಾಗ ಸುದೀಪ್​ ಆರ್ಥಿಕ ಸಹಾಯ ಮಾಡಿದ್ದರು. ಬಿಗ್​ ಬಾಸ್​ 8ರಲ್ಲಿ ಸ್ಪರ್ಧಿಗಳಿಗೆ ವಿಶೇಷ ಅಡುಗೆ ಮಾಡಿ ಕಳುಹಿಸಿದ್ದರು. ಈ ಮೂಲಕ ಬಿಗ್​ ಬಾಸ್​ ಸ್ಪರ್ಧಿಗಳ ಮೇಲೆ ಇರುವ ಪ್ರೀತಿ ಎಷ್ಟು ಎಂಬುದನ್ನು ಸುದೀಪ್ ತೋರಿಸಿದ್ದರು. ಈಗ ಅವರು ಮಾಡಿದ ಮತ್ತೊಂದು ಕೆಲಸದ ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ.

ಶಮಂತ್​ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಈ ಕಾರನ್ನು ಸುದೀಪ್​ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು. ಅದು ಈಗ ಈಡೇರಿದೆ.

ಸುದೀಪ್​ ‘ವಿಕ್ರಾಂತ್​ ರೋಣ’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕೊವಿಡ್​ ಅಬ್ಬರ ಕಡಿಮೆ ಆದರೆ ಮುಂದಿನ ತಿಂಗಳು ಚಿತ್ರ ರಿಲೀಸ್​ ಆಗಲಿದೆ. ಇದರ ಮಧ್ಯೆ ಬಿಡುವು ಮಾಡಿಕೊಂಡು ಶಮಂತ್​ ಬ್ರೋ ಗೌಡ ಕಾರನ್ನು ಅವರು ಓಡಿಸಿದ್ದಾರೆ. ಈ ವಿಡಿಯೋವನ್ನು ಬ್ರೋ ಗೌಡ ಹಂಚಿಕೊಂಡಿದ್ದಾರೆ.

ಶಮಂತ್​ ಅವರು ತಮ್ಮ ಬಿಎಂಡಬ್ಲ್ಯೂ ಕಾರನ್ನು ಸುದೀಪ್​ ಮನೆಗೆ ತಂದಿದ್ದಾರೆ. ಸುದೀಪ್​ ಅವರು ಕಾರನ್ನು ಓಡಿಸಿದ್ದಾರೆ. ಅಲ್ಲದೆ, ಕಾರಿನ ಮೇಲೆ ಸುದೀಪ್​ ಆಟೋಗ್ರಾಫ್​ ಕೂಡ ಹಾಕಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಸುದೀಪ್​ ಆಶೀರ್ವಾದ ಪಡೆದ ಶಮಂತ್​ ಸಾಕಷ್ಟು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಬಗ್ಗೆ ಹೊಸ ಅಪ್​ಡೇಟ್​; ಇದು ಸುದೀಪ್​ ಅಭಿಮಾನಿಗಳು ಖುಷಿಪಡೋ ವಿಚಾರ

ವೇದಿಕೆ ಮೇಲೆ ಲವ್​ ಪ್ರಪೋಸ್​ ಮಾಡಿದ ಶಮಂತ್ ಬ್ರೋ ಗೌಡ; ಎದುರಿನಿಂದ ಬಂತು ನೋ ಅನ್ನೋ ಉತ್ತರ

Follow us on

Related Stories

Most Read Stories

Click on your DTH Provider to Add TV9 Kannada