ಪುನೀತ್​ ನಟನೆಯ ‘ಜೇಮ್ಸ್​’ ಎದುರು ‘ಆರ್​ಆರ್​ಆರ್​’ ರಿಲೀಸ್​? ರಾಜಮೌಳಿಗೆ ಧರ್ಮಸಂಕಟ

James Movie Release Date: ಒಂದು ವೇಳೆ ಮಾ.18ರಂದು ‘ಆರ್​ಆರ್​ಆರ್​’ ತೆರೆಕಂಡರೆ ಪುನೀತ್ ನಟನೆಯ ‘ಜೇಮ್ಸ್​’ ಮಾತ್ರವಲ್ಲದೇ ಅಕ್ಷಯ್​ ಕುಮಾರ್​ ನಟನೆಯ ‘ಬಚ್ಚನ್​ ಪಾಂಡೆ’ ಚಿತ್ರದ ಜೊತೆಗೂ ಕ್ಲ್ಯಾಷ್​ ಏರ್ಪಡಲಿದೆ.

ಪುನೀತ್​ ನಟನೆಯ ‘ಜೇಮ್ಸ್​’ ಎದುರು ‘ಆರ್​ಆರ್​ಆರ್​’ ರಿಲೀಸ್​? ರಾಜಮೌಳಿಗೆ ಧರ್ಮಸಂಕಟ
ಪುನೀತ್​ ರಾಜ್​ಕುಮಾರ್​, ಜ್ಯೂ. ಎನ್​ಟಿಆರ್​, ರಾಮ್​ ಚರಣ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 24, 2022 | 7:52 AM

ಬಹುನಿರೀಕ್ಷಿತ ‘ಆರ್​ಆರ್​ಆರ್​’ (RRR Movie) ಸಿನಿಮಾದ ರಿಲೀಸ್​ ಡೇಟ್​ ಕುರಿತಂತೆ ಹಲವು ಗೊಂದಲಗಳು ಮನೆ ಮಾಡಿವೆ. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಈ ವರ್ಷದ ಆರಂಭದಲ್ಲಿಯೇ ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಬ್ಬರಿಸಬೇಕಿತ್ತು. ಜ.7ರಂದು ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿತ್ತು. ಆದರೆ ಕೊರೊನಾ ಹಾವಳಿ ಹೆಚ್ಚಿದ್ದರಿಂದ ರಿಲೀಸ್​ ಡೇಟ್​ ಮುಂದೂಡಲ್ಪಟ್ಟಿತು. ಈಗ ಎರಡು ಹೊಸ ರಿಲೀಸ್​ ದಿನಾಂಕವನ್ನು ಘೋಷಿಸಿಕೊಂಡಿರುವ ಈ ಚಿತ್ರತಂಡಕ್ಕೆ ಧರ್ಮಸಂಕಟ ಶುರುವಾಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮತ್ತು ಆಲಿಯಾ ಭಟ್​ ಅಭಿನಯದ ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಆದರೆ ಕರ್ನಾಟಕದಲ್ಲಿ ಬಹಳ ಎಚ್ಚರಿಕೆಯಿಂದ ಬಿಡುಗಡೆ ಮಾಡಬೇಕಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ ಎದುರು ‘ಆರ್​ಆರ್​ಆರ್​’ ರಿಲೀಸ್​ ಆಗುವ ಸಾಧ್ಯತೆ ದಟ್ಟವಾಗಿದೆ. ‘ಜೇಮ್ಸ್​’ ಸಿನಿಮಾ (James Kannada Movie) ಮಾ.17ರಂದು ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅದರ ಮರುದಿನವೇ, ಅಂದರೆ ಮಾ.18ಕ್ಕೆ ‘ಆರ್​ಆರ್​ಆರ್​’ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಕ್ಲ್ಯಾಶ್​ ತಪ್ಪಿಸಲು ರಾಜಮೌಳಿ ಏನು ಮಾಡುತ್ತಾರೋ ತಿಳಿದಿಲ್ಲ.

ಪುನೀತ್​ ನಟನೆಯ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಮೇಲೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಿರೀಕ್ಷೆ ಇದೆ. ಚೇತನ್​ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್​ ಮುಗಿದಿದೆ. ಈ ವರ್ಷ ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್​’ ರಿಲೀಸ್​ ಆಗಬೇಕು ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಾ.17ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇಟ್ಟುಕೊಂಡೇ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಫ್ಯಾನ್ಸ್​ ಬಯಸಿದಂತೆ ಮಾ.17ಕ್ಕೆ ‘ಜೇಮ್ಸ್​’ ತೆರೆಕಂಡರೆ ‘ಆರ್​ಆರ್​ಆರ್​’ ಜೊತೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಶತಸಿದ್ಧ.

‘ಆರ್​ಆರ್​ಆರ್​’ ಚಿತ್ರದ ಬಿಡುಗಡೆ ದಿನಾಂಕ ಗೊಂದಲಮಯ ಆಗಿದೆ. ಎರಡು ಸಂಭಾವ್ಯ ದಿನಾಂಕಗಳನ್ನು ಚಿತ್ರತಂಡ ಘೋಷಿಸಿದೆ. ಮಾರ್ಚ್​ 18 ಅಥವಾ ಏಪ್ರಿಲ್​ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಮಾ.18ರ ದಿನಾಂಕ ರಾಜಮೌಳಿ ಅವರ ಮೊದಲ ಆದ್ಯತೆ. ಆದರೆ ಅಷ್ಟರೊಳಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗದೇ ಇದ್ದರೆ ನಷ್ಟ ಆಗುತ್ತದೆ ಎಂಬ ಚಿಂತೆ ಕೂಡ ಅವರಿಗೆ ಇದೆ. ಹಾಗಾಗಿ ಎರಡನೇ ಆಯ್ಕೆಯಾಗಿ ಏ.28ರ ದಿನಾಂಕವನ್ನು ಅವರು ಲಾಕ್​ ಮಾಡಿದ್ದಾರೆ. ಒಂದು ವೇಳೆ ಮಾ.18ರಂದು ‘ಆರ್​ಆರ್​ಆರ್​’ ತೆರೆಕಂಡರೆ ಪುನೀತ್ ನಟನೆಯ ‘ಜೇಮ್ಸ್​’ ಮಾತ್ರವಲ್ಲದೇ ಅಕ್ಷಯ್​ ಕುಮಾರ್​ ನಟನೆಯ ‘ಬಚ್ಚನ್​ ಪಾಂಡೆ’ ಚಿತ್ರದ ಜೊತೆಗೂ ಕ್ಲ್ಯಾಷ್​ ಏರ್ಪಡಲಿದೆ. ಯಾಕೆಂದರೆ, ಮಾ.18ರಂದು ಬಿಡುಗಡೆ ಆಗುವುದಾಗಿ ‘ಬಚ್ಚನ್​ ಪಾಂಡೆ’ ಸಿನಿಮಾ ಈಗಾಗಲೇ ಘೋಷಣೆ ಮಾಡಿದೆ.

ಕೊರೊನಾದ ಕಣ್ಣಾಮುಚ್ಚಾಲೆಯಿಂದಾಗಿ ಅನೇಕ ಹೈ ಬಜೆಟ್​ ಸಿನಿಮಾಗಳು ರಿಲೀಸ್​ ಡೇಟ್​ ವಿಚಾರದಲ್ಲಿ ಸಂಕಟವನ್ನು ಎದುರಿಸುತ್ತಿವೆ. ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಾಳೆ ಪರಿಸ್ಥಿತಿ ಏನಾಗಬಹುದೋ ಎಂಬ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದೆ. ‘ರಾಧೆ ಶ್ಯಾಮ್​’, ‘ಸರ್ಕಾರು ವಾರಿ ಪಾಟ’, ‘ಕೆಜಿಎಫ್​: ಚಾಪ್ಟರ್​ 2’, ‘ವಿಕ್ರಾಂತ್​ ರೋಣ’ ಮುಂತಾದ ಬಹುನಿರೀಕ್ಷಿತ​ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಅವುಗಳ ಜೊತೆಗೂ ‘ಆರ್​ಆರ್​ಆರ್​’ ಚಿತ್ರ ಕ್ಲ್ಯಾಶ್​ ತಪ್ಪಿಸಿಕೊಳ್ಳಲು ಪ್ಲ್ಯಾನ್​ ಮಾಡಬೇಕಿದೆ.

‘ಆರ್​ಆರ್​ಆರ್​’ ಚಿತ್ರದಲ್ಲಿ ಅಜಯ್​ ದೇವಗನ್​ ಸಹ ಅಭಿನಯಿಸಿದ್ದಾರೆ.​ ಒಂದು ವೇಳೆ ಮಾ.18ರ ಬದಲಿಗೆ ಏಪ್ರಿಲ್​ 28ಕ್ಕೆ ‘ಆರ್​ಆರ್​ಆರ್​’ ತೆರೆಕಂಡರೆ ಆಗ ಅಜಯ್​ ದೇವಗನ್​ ನಟನೆಯ ‘ರನ್​ ವೇ 34’ ಸಿನಿಮಾ ಜೊತೆ ಗಲ್ಲಾಪೆಟ್ಟಿಗೆ ಕದನ ಏರ್ಪಡಲಿದೆ. ಆ ಚಿತ್ರ ಮಾ.29ಕ್ಕೆ ಬಿಡುಗಡೆ ಆಗಲಿದೆ. ಒಟ್ಟಿನಲ್ಲಿ ರಾಜಮೌಳಿ ಅವರಿಗೆ ತಮ್ಮ ಸಿನಿಮಾವನ್ನು ಸೂಕ್ತ ದಿನಾಂಕದಲ್ಲಿ ತೆರೆಕಾಣಿಸುವುದು ನಿಜಕ್ಕೂ ಸವಾಲಿನ ಕೆಲಸ ಆಗಿದೆ.

ಇದನ್ನೂ ಓದಿ:

ಪುನೀತ್​ ನಟನೆಯ ‘ಜೇಮ್ಸ್​’ ಶೂಟಿಂಗ್​ ಮುಕ್ತಾಯ; ರಿಲೀಸ್​ ಡೇಟ್​ ತಿಳಿಯಲು ಕಾದಿರುವ ಅಭಿಮಾನಿಗಳು

‘ಜೇಮ್ಸ್’​ ಚಿತ್ರದಲ್ಲಿ ಪುನೀತ್​, ಶಿವಣ್ಣ, ರಾಘಣ್ಣ; ​ಫ್ಯಾನ್ಸ್​ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್​

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ