Rashmika Mandanna: ಬಿ-ಟೌನ್​ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ರಶ್ಮಿಕಾ; ಇದಕ್ಕೆ ಕಾರಣ ಒಂದೇ ಒಂದು ಭೇಟಿ!

Karan Johar: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಹಲವು ಭಾಷೆಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಇತ್ತೀಚೆಗೆ ನಟಿ ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕರೊಬ್ಬರ ಕಚೇರಿ ಮುಂದೆ ಕಾಣಿಸಿಕೊಂಡಿದ್ದು, ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ.

Rashmika Mandanna: ಬಿ-ಟೌನ್​ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ರಶ್ಮಿಕಾ; ಇದಕ್ಕೆ ಕಾರಣ ಒಂದೇ ಒಂದು ಭೇಟಿ!
ರಶ್ಮಿಕಾ ಮಂದಣ್ಣ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Jan 25, 2022 | 2:52 PM

ಕೊಡಗಿನ ಕುವರಿ ರಶ್ಮಿಕಾ‌ ಮಂದಣ್ಣ (Rashmika Mandanna) ಇದೀಗ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾರ ಕಾಲ್​ಶೀಟ್ ಪಡೆಯಲು ಖ್ಯಾತ ನಿರ್ಮಾಪಕರು ಕಾಯುತ್ತಿದ್ದಾರೆ. ಅದಾಗ್ಯೂ ಸ್ಕ್ರಿಪ್ಟ್ ವಿಚಾರದಲ್ಲಿ ಚ್ಯೂಸಿಯಾಗಿರುವ ಅವರು, ಉತ್ತಮ ಕತೆಗಳ ಕಡೆಗಷ್ಟೇ ಒಲವು ತೋರುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಖ್ಯಾತ ಬಾಲಿವುಡ್ ನಿರ್ಮಾಪಕರೊಬ್ಬರ ಕಚೇರಿಯ ಮುಂದೆ ಕಾಣಿಸಿಕೊಂಡಿದ್ದು, ಬಿಟೌನ್ ನಲ್ಲಿ ತೀವ್ರ ಸಂಚಲನ‌ ಸೃಷ್ಟಿಸಿದೆ. ಹೌದು. ಆ ನಿರ್ಮಾಪಕ‌ ಮತ್ಯಾರೂ ಅಲ್ಲ, ಕರಣ್ ಜೋಹರ್! ಬಾಲಿವುಡ್ ನಲ್ಲಿ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಅಪಾರ ಖ್ಯಾತಿ ಪಡೆದಿರುವವರು ಕರಣ್ ಜೋಹರ್ (Karan Johar). ಅವರ ಧರ್ಮ ಪ್ರೊಡಕ್ಷನ್ಸ್ (Dharma Productions) ಬ್ಯಾನರ್​ನಲ್ಲಿ ನಟಿಸುವುದು ಸೆಲೆಬ್ರಿಟಿಗಳಿಗೂ ಸೇರಿದಂತೆ ಅನೇಕ‌ ಕಲಾವಿದರಿಗೆ ಕನಸು. ಇದೀಗ ರಶ್ಮಿಕಾ ಕರಣ್ ಜೋಹರ್ ಕಚೇರಿಯ‌ ಮುಂದೆ ಕಾಣಿಸಿಕೊಂಡಿದ್ದು, ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಈ ವಿಚಾರ ರಶ್ಮಿಕಾರ ಮುಂದಿನ ಚಿತ್ರದ ಕುರಿತು ತೀವ್ರ ಕುತೂಹಲ ಹುಟ್ಟುಹಾಕಲು ಕಾರಣವಾಗಿದೆ.

ಪ್ರಸ್ತುತ ರಶ್ಮಿಕಾ ‘ಪುಷ್ಪ: ದಿ ರೈಸ್’ ಯಶಸ್ಸಿನಲ್ಲಿದ್ದಾರೆ. ವಿಶ್ವದೆಲ್ಲೆಡೆ ಅತ್ಯುತ್ತಮ ಕಲೆಕ್ಷನ್ ಮಾಡಿರುವ ಚಿತ್ರ, ವಿಶೇಷವಾಗಿ ಬಾಲಿವುಡ್​ನಲ್ಲಿ ನಿರೀಕ್ಷೆಗೂ ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಕಮಾಯಿ ಮಾಡಿದೆ. ಇದು ರಶ್ಮಿಕಾರ ಬಾಲಿವುಡ್​ ಜನಪ್ರಿಯತೆಯನ್ನು ಹೆಚ್ಚಿಸಲು ಕಾರಣವಾಗಿದೆ. ಇದಲ್ಲದೇ ಮೂಲ ಬಾಲಿವುಡ್​ನ ಕೆಲವು ಚಿತ್ರಗಳಿಗೆ ರಶ್ಮಿಕಾ ಈಗಾಗಲೇ ಸೈನ್ ಹಾಕಿದ್ದಾರೆ. ಒಟ್ಟಿನಲ್ಲಿ ಟಾಲಿವುಡ್ ನಂತರ ಅವರು ಬಾಲಿವುಡ್​ನಲ್ಲಿ ನೆಲೆಯೂರಲಿದ್ದಾರೆ ಎನ್ನಬಹುದು. ಇದಕ್ಕೆ ಪೂರಕವಾಗಿ ಇದೀಗ ಹೊಸ ಅವಕಾಶ ಅವರಿಗೆ ಒಲಿಯಲಿದೆಯೇ ಎಂಬ ಕುತೂಹಲವನ್ನು ಅವರ ಭೇಟಿ ಹುಟ್ಟುಹಾಕಿದೆ.

ಕರಣ್ ಜೋಹರ್ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ರಶ್ಮಿಕಾ: ಮುಂಬೈನಲ್ಲಿರುವ ಕರಣ್ ಜೋಹರ್ ಕಚೇರಿಗೆ ರಶ್ಮಿಕಾ ನಿನ್ನೆ ಅಂದರೆ ಜನವರಿ 24ರಂದು ಆಗಮಿಸಿದ್ದರು. ಇತ್ತೀಚೆಗಷ್ಟೇ ಕರಣ್ ಜೋಹರ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ಪುಷ್ಪ’ ಚಿತ್ರವನ್ನು ಹಾಗೂ ಅದರ ನಿರ್ದೇಶಕ ಸುಕುಮಾರ್ ಪರಿಶ್ರಮವನ್ನು ವಿಶೇಷವಾಗಿ ಹೊಗಳಿದ್ದರು. ಅಲ್ಲದೇ ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಇದೀಗ ರಶ್ಮಿಕಾ ಕರಣ್ ಜೋಹರ್ ಕಚೇರಿಗೆ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆ.

ಕರಣ್ ಜೋಹರ್ ಕಚೇರಿಯ ಮುಂದೆ ನೆರೆದಿದ್ದ ಪಾಪರಾಜಿಗಳಿಗೆ ಕೈಬೀಸಿರುವ ರಶ್ಮಿಕಾ, ಕ್ಯಾಮೆರಾಕ್ಕೆ ಮಸ್ತ್ ಪೋಸ್ ಕೂಡ ನೀಡಿದ್ದಾರೆ. ಆ ಚಿತ್ರಗಳು ಸದ್ಯ ವೈರಲ್ ಆಗಿವೆ.

ಕರಣ್ ಕಚೇರಿಗೆ ರಶ್ಮಿಕಾ ಭೇಟಿ ನೀಡಿದ್ದರ ಚಿತ್ರಗಳು:

ಚಿತ್ರಗಳ ವಿಷಯಕ್ಕೆ ಬಂದರೆ ರಶ್ಮಿಕಾ ಸದ್ಯ ‘ಪುಷ್ಪ: ದಿ ರೂಲ್’ ಚಿತ್ರೀಕರಣಕ್ಕೆ ಎದುರು ನೋಡುತ್ತಿದ್ದಾರೆ. ತೆಲುಗಿನ ‘ಆಡವಾಲ್ಲು ಮೀಕು ಜೋಹಾರ್ಲು’, ಹಿಂದಿಯ ‘ಮಿಷನ್ ಮಜ್ನು’, ‘ಗುಡ್ ಬೈ’ ಮೊದಲಾದ ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ರಶ್ಮಿಕಾ ಬತ್ತಳಿಕೆಯಲ್ಲಿವೆ. ಸಾಲು ಸಾಲು ಯಶಸ್ಸಿನಿಂದ ಬೀಗುತ್ತಿರುವ ರಶ್ಮಿಕಾ ಖಾತೆಗೆ ಸದ್ಯದಲ್ಲೇ ಮತ್ತಷ್ಟು ಸಿನಿಮಾಗಳು ಸೇರ್ಪಡೆಗೊಂಡರೆ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ?

ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ