ಕಂಗನಾ ಹೇಳಿದ್ದೇನು?:
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ದಕ್ಷಿಣದ ಚಿತ್ರಗಳು ಹಾಗೂ ನಾಯಕ ನಟರನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ‘ಪುಷ್: ದಿ ರೈಸ್’ ಬಾಲಿವುಡ್ನಲ್ಲಿ ಪಡೆದ ಅಪಾರ ಜನಪ್ರಿಯತೆ ಹಾಗೂ ಯಶ್ ನಟನೆಯ ಕೆಜಿಎಫ್ ಗಳಿಸಿದ್ದ ಮೆಚ್ಚುಗೆ ಮೊದಲಾದವುಗಳ ಹಿನ್ನೆಲೆಯಲ್ಲಿ ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಕ್ಷಿಣದ ಚಿತ್ರಗಳು ಹಾಗೂ ಇಲ್ಲಿನ ನಾಯಕ ನಟರು ಏಕೆ ಖ್ಯಾತಿ ಗಳಿಸುತ್ತಿದ್ದಾರೆ ಎಂಬುದನ್ನು ವಿವರಿಸಿರುವ ಕಂಗನಾ, ‘‘ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆ. ಪಾಶ್ಚಾತ್ಯರಿಂದ ಪ್ರಭಾವಿತರಾಗದೇ ತಮ್ಮ ಕುಟುಂಬವನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಅವರ ವೃತ್ತಿಪರತೆಗೆ ಸರಿಸಾಟಿ ಇಲ್ಲ’’ ಎಂದು ಬರೆದಿದ್ದಾರೆ.
ಇಷ್ಟೆಲ್ಲಾ ವಿವರಿಸಿರುವ ಕಂಗನಾ ದಕ್ಷಿಣದವರಿಗೆ ಒಂದು ಸಲಹೆಯನ್ನೂ ನೀಡಿದ್ದು, ಬಾಲಿವುಡ್ನಿಂದ ಈ ಪರಂಪರೆಯನ್ನು ಹಾಳಾಗಲು ಬಿಡಬೇಡಿ. ಬಾಲಿವುಡ್ನಿಂದ ಭ್ರಷ್ಟರಾಗಬೇಡಿ ಎಂದಿದ್ದಾರೆ.
ಕಂಗನಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಕಂಗನಾ ಸ್ಟೋರಿಯಲ್ಲಿ ಹಂಚಿಕೊಂಡ ಬರಹ
ಚಿತ್ರಗಳ ವಿಷಯಕ್ಕೆ ಬಂದರೆ ಕಂಗನಾ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2022ರ ಮೇನಲ್ಲಿ ಕಂಗನಾ ನಟನೆಯ ‘ಧಾಕಡ್’ ತೆರೆಕಾಣಲಿದೆ. ‘ತೇಜಸ್’ ಚಿತ್ರದಲ್ಲಿ ಪೈಲಟ್ ಆಗಿ ಕಂಗನಾ ಬಣ್ಣಹಚ್ಚುತ್ತಿದ್ದಾರೆ. ‘ಟೀಕು ವೆಡ್ಸ್ ಶೇರು’ ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ಕಂಗನಾ ನಿರ್ಮಿಸುತ್ತಿದ್ದು ಅದರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:
ಭುವನ ಸುಂದರಿ ಹರ್ನಾಜ್ ಸಂಧು ಈಗೆಲ್ಲಿದ್ದಾರೆ?
ಧನುಷ್ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ