ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ
ಸಮಂತಾ, ನಾಗ ಚೈತನ್ಯ

Samantha Naga Chaitanya: ತಾರಾ ಜೋಡಿಯಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ- ರೀಲ್ ಹಾಗೂ ರಿಯಲ್​ ಲೈಫ್​ನಲ್ಲಿ ಜನರನ್ನು ಮೋಡಿ ಮಾಡಿದ್ದರು. ಈರ್ವರೂ ಬೇರೆಯಾಗಿದ್ದು ಅಭಿಮಾನಿಗಳಿಗೆ ಅಪಾರ ಬೇಸರ ಉಂಟುಮಾಡಿತ್ತು. ಇದೀಗ ನಾಗ ಚೈತನ್ಯ ಮಾಜಿ ಪತ್ನಿಯ ಬಗ್ಗೆ ವಿಶೇಷ ವಿಚಾರ ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Jan 25, 2022 | 2:49 PM

ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaitanya) ನಿಜ ಜೀವನದಲ್ಲಿ ದಂಪತಿಗಳಾಗುವ ಮುನ್ನ ಹಲವು ಹಿಟ್ ಚಿತ್ರಗಳನ್ನು ಜತೆಯಾಗಿ ನೀಡಿದವರು. ತೆರೆಯ ಮೇಲೆ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿದ್ದ ಈ ಜೋಡಿ ನಂತರ ನಿಜ ಜೀವನದಲ್ಲೂ ಸತಿಪತಿಗಳಾದರು. ಆದರೆ ಕಾಲಾನಂತರದಲ್ಲಿ ತಮ್ಮ ದಾರಿಗಳು ಬೇರೆ ಬೇರೆ ಎಂದು ನಿರ್ಧರಿಸಿದ ಈ ಸೆಲೆಬ್ರಿಟಿಗಳು, ಬೇರ್ಪಡುವ ನಿರ್ಧಾರ ಮಾಡಿದರು. ಇಬ್ಬರೂ ಪರಸ್ಪರ ಒಪ್ಪಿ, ಗೌರವಯುತವಾಗಿ ಬೇರೆಯಾಗುತ್ತಿದ್ದೇವೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ನಂತರ ಹಲವು ಸಂದರ್ಶನಗಳಲ್ಲಿ ಈರ್ವರೂ ಮಾತನಾಡಿದಾಗ, ಪರಸ್ಪರರ ಬಗ್ಗೆ ಯಾವುದೇ ಆರೋಪಗಳಿಲ್ಲದೇ, ಸಾವಧಾನವಾಗಿ ಉತ್ತರಿಸಿದ್ದರು. ಇತ್ತೀಚೆಗೆ ನಾಗ ಚೈತನ್ಯ ತಮ್ಮ ಮಾಜಿ ಪತ್ನಿಯ ಕುರಿತು ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಿವುಡ್ ಹಂಗಾಮಾ ಜತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗ ಚೈತನ್ಯ ಈ ಹಿಂದೆ ಜತೆಯಾಗಿ ನಟಿಸಿರುವವರ ನಾಯಕಿಯರ ಕುರಿತು ಹಾಗೂ ಬಾಲಿವುಡ್ (Bollywood) ನಾಯಕಿಯರಲ್ಲಿ ಯಾರ ಜತೆ ನಟಿಸುವ ಆಸೆ ಇದೆ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಸ್ಯಾಮ್ ಬಗ್ಗೆ ಚೈ ಹೇಳಿದ್ದೇನು?: ಸಂದರ್ಶನದಲ್ಲಿ ನಾಗ ಚೈತನ್ಯಗೆ ‘‘ಯಾವ ನಾಯಕಿಯೊಂದಿಗೆ ತೆರೆಯ ಮೇಲೆ ನಿಮ್ಮ ಹೊಂದಾಣಿಕೆ ಅತ್ಯುತ್ತಮವಾಗಿ ಮೂಡಿಬಂದಿತ್ತು?’’ ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ನಾಗ ಚೈತನ್ಯ ತಮ್ಮ ಮಾಜಿ ಗೆಳತಿ ‘ಸಮಂತಾ’ ಹೆಸರನ್ನು ಉದ್ಗರಿಸಿದರು. ಮುಕ್ತವಾಗಿ ತಮ್ಮ ಅನಿಸಿಕೆಯನ್ನು ತಿಳಿಸಿದ ನಾಗ ಚೈತನ್ಯ ಅವರ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಂತಾ ಹಾಗೂ ನಾಗ ಚೈತನ್ಯ ಜೋಡಿ ‘ಮನಂ’, ‘ಯೇ ಮಾಯಾ ಚೇಸಾವೇ’, ‘ಆಟೋನಗರ್ ಸೂರ್ಯ’ ಮೊದಲಾದ ಚಿತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿತ್ತು. ಬಹುದೊಡ್ಡ ಹಿಟ್​ಗಳನ್ನು ನೀಡಿದ್ದ ಈ ಜೋಡಿ ನಿಜ ಜೀವನದಲ್ಲಿ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಅಪಾರ ನೋವುಂಟು ಮಾಡಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲೂ ನಾಗ ಚೈತನ್ಯ ಸಮಂತಾ ಪರ ಮಾತನಾಡಿದ್ದರು. ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಉತ್ತರಿಸಿದ್ದ ಅವರು, ‘‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’’ ಎಂದು ಹೇಳಿದ್ದರು. ಪರಸ್ಪರ ಪ್ರೀತಿಸಿದ್ದ ಸ್ಯಾಮ್-ಚೈ 2017ರಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.

ಬಾಲಿವುಡ್​ನಲ್ಲಿ ಯಾವ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ಇದೆ ಎಂಬುದನ್ನು ತಿಳಿಸಿದ ನಾಗ ಚೈತನ್ಯ: ನಾಗ ಚೈತನ್ಯಗೆ ಸಂದರ್ಶನದಲ್ಲಿ ಮತ್ತೊಂದು ಪ್ರಶ್ನೆಯನ್ನು ಕೇಳಲಾಗಿತ್ತು. ಬಾಲಿವುಡ್​ ನಟಿಯರ ಪೈಕಿ ಯಾರೊಂದಿಗೆ ಕೆಲಸ ಮಾಡುವ ಆಸೆ ಇದೆ ಎಂಬ ಪ್ರಶ್ನೆಗೆ ನಾಗ ಚೈತನ್ಯ ಉತ್ತರಿಸಿ, ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಹೆಸರನ್ನು ಹೇಳಿದರು. ಈರ್ವರೂ ಉತ್ತಮ ಕಲಾವಿದರು. ಅವರೊಂದಿಗೆ ಮುಂದೊಂದು ದಿನ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ ಖುಷಿ ಎಂದು ಅವರು ಹೇಳಿದ್ದಾರೆ. ನಾಗ ಚೈತನ್ಯ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಮೂಲಕ ಬಾಲಿವುಡ್​​ ಪದಾರ್ಪಣೆ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಬೇರೆಯಾಗುತ್ತಿರುವುದನ್ನು ಘೋಷಿಸಿದ್ದ ಪೋಸ್ಟ್ ಅಳಿಸಿದ್ದ ಸಮಂತಾ: ಬಹುಭಾಷಾ ನಟಿ ಸಮಂತಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಗ ಚೈತನ್ಯರೊಂದಿಗೆ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದ ಪೋಸ್ಟ್ ಅನ್ನು ಡಿಲೀಟಿ ಮಾಡಿದ್ದರು. ಇದು ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು. ಆದರೆ ಈ ಕುರಿತು ನಟಿ ಅಧಿಕೃತವಾಗಿ ಏನನ್ನೂ ಪ್ರತಿಕ್ರಿಯಿಸಿಲ್ಲ. ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ಹಲವು ಪ್ರದೇಶಗಳಿಗೆ ಪ್ರವಾಸವನ್ನೂ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಮಾಡ್ತಾರಾ ಸಮಂತಾ? ವಿಚ್ಛೇದನದ ಪೋಸ್ಟ್​ ಏಕಾಏಕಿ ಡಿಲೀಟ್​

Samantha: ‘ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ’; ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಾಗ ಚೈತನ್ಯ

Follow us on

Related Stories

Most Read Stories

Click on your DTH Provider to Add TV9 Kannada