ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆದಿತ್ಯ ನಾರಾಯಣ್- ಶ್ವೇತಾ; ವಿಶೇಷ ಫೋಟೋ ಮೂಲಕ ಸಿಹಿಸುದ್ದಿ ಹಂಚಿಕೊಂಡ ತಾರಾ ಜೋಡಿ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಆದಿತ್ಯ ನಾರಾಯಣ್- ಶ್ವೇತಾ; ವಿಶೇಷ ಫೋಟೋ ಮೂಲಕ ಸಿಹಿಸುದ್ದಿ ಹಂಚಿಕೊಂಡ ತಾರಾ ಜೋಡಿ
ಆದಿತ್ಯ ನಾರಾಯಣ್- ಶ್ವೇತಾ ಅಗರ್ವಾಲ್ ಫೋಟೋಶೂಟ್

Aditya Narayan |Shwetha Agarwal: ಹಿಂದಿಯ ತಾರಾ ಜೋಡಿ ಆದಿತ್ಯ ನಾರಾಯಣ್ ಹಾಗೂ ಶ್ವೇತಾ ಅಗರ್ವಾಲ್ ಬರೋಬ್ಬರಿ 11 ವರ್ಷಗಳ ಕಾಲ ಜತೆಯಾಗಿ ಸುತ್ತಾಡಿದ್ದರು. ಅಂತಿಮವಾಗಿ 2020ರ ಡಿಸೆಂಬರ್​ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಇದೀಗ ಈರ್ವರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

TV9kannada Web Team

| Edited By: shivaprasad.hs

Jan 25, 2022 | 3:45 PM

ಹಿಂದಿಯ ಖ್ಯಾತ ನಿರೂಪಕ, ಹಾಡುಗಾರ ಆದಿತ್ಯ ನಾರಾಯಣ್ (Aditya Narayan) ಹಾಗೂ ಅವರ ಪತ್ನಿ, ನಟಿ ಶ್ವೇತಾ ಅಗರ್ವಾಲ್ (Shwetha Agarwal) ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಸೋಮವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಈ ತಾರಾ ಜೋಡಿ, ಫೋಟೋಗಳನ್ನು ಹಂಚಿಕೊಂಡಿದೆ. ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರನಾಗಿರುವ ಆದಿತ್ಯ ನಾರಾಯಣ್, ಹಿಂದಿ ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಈ ಜೋಡಿ ಪೋಷಕರಾಗುತ್ತಿರುವ ಸಂತಸದಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೆಟರ್ನಿಟಿ ಫೋಟೋಶೂಟ್​ನ (Maternity Photoshoot) ಚಿತ್ರ ಹಂಚಿಕೊಂಡಿರುವ ಆದಿತ್ಯ ನಾರಾಯಣ್ ‘‘ಮೊದಲ ಮಗುವನ್ನು ಸದ್ಯದಲ್ಲೇ ನಿರೀಕ್ಷಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಆದಿತ್ಯ- ಶ್ವೇತಾ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪೋಸ್ಟ್:

ವೈರಲ್ ಆಯ್ತು ಫೋಟೋ ತೆಗೆಯುತ್ತಿರುವ ಸಂದರ್ಭದ ಚಿತ್ರಗಳು: ಮೆಟರ್ನಿಟಿ ಫೋಟೋ ಶೂಟ್​ಗೂ ಮುನ್ನ ತಯಾರಿ ಹೇಗಿತ್ತು ಎಂಬುದನ್ನು ವಿವರಿಸುವ ಚಿತ್ರವನ್ನು ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಖುರ್ಚಿಯ ಮೇಲೆ ಕುಳಿತಿರುವ ಆದಿತ್ಯ, ಪತ್ಬನಿ ಶ್ವೇತಾರನ್ನು ಆಲಂಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಶ್ವೇತಾ ಹಾಗೂ ಆದಿತ್ಯ ಹಂಚಿಕೊಂಡಿದ್ದು ಅಭಿಮಾನಿಗಳ ಮನಗೆದ್ದಿದೆ.

BTS of Shwetha and Aditya baby arrival photo shoot

ಆದಿತ್ಯ- ಶ್ವೇತಾ ಫೋಟೋಶೂಟ್ ಹಿಂದಿನ ದೃಶ್ಯ

ಆದಿತ್ಯ- ಶ್ವೇತಾರಿಗೆ ಸೆಲೆಬ್ರಿಟಿಗಳಿಂದ ಶುಭಾಶಯ: ಪೋಷಕರಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿರುವ ಆದಿತ್ಯ ನಾರಾಯಣ್ ಹಾಗೂ ಶ್ವೇತಾ ಅಗರ್ವಾಲ್ ಅಗರ್ವಾಲ್ ಅವರಿಗೆ ಬಾಲಿವುಡ್ ಹಾಗೂ ಕಿರುತೆರೆಯ ಖ್ಯಾತನಾಮರು ಶುಭಾಶಯ ಹೇಳಿದ್ದಾರೆ. ಗಾಯಕಿ ನೇಹಾ ಕಕ್ಕರ್, ಅವಿಕಾ ಗೋರ್, ನೀತಿ ಮೋಹನ್, ಅನುಷ್ಕಾ ಸೇನ್, ವಿಕ್ರಾಂತ್ ಮೆಸ್ಸಿ ಮೊದಲಾದವರು ಅಭಿನಂದನೆ ಸಲ್ಲಿಸಿದ್ದಾರೆ.

ಆದಿತ್ಯ ನಾರಾಯಣ್ ಹಾಗೂ ಶ್ವೇತಾ ಅಗರ್ವಾಲ್ 2020ರ ಡಿಸೆಂಬರ್​ನಲ್ಲಿ ವಿವಾಹವಾಗಿದ್ದರು. ಇದಕ್ಕೂ ಮುನ್ನ ಬರೋಬ್ಬರಿ 11 ವರ್ಷಗಳ ಕಾಲ ಈ ತಾರಾ ಜೋಡಿ ಜತೆಯಾಗಿ ಸುತ್ತಾಡಿತ್ತು. ಕಳೆದ ತಿಂಗಳು ಡಿಸೆಂಬರ್ 1ರಂದು ವಿವಾಹದ ಮೊದಲ ವಾರ್ಷಿಕೋತ್ಸವವನ್ನು ಶ್ವೇತಾ- ಆದಿತ್ಯ ಆಚರಿಸಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:

Rashmika Mandanna: ಬಿ-ಟೌನ್​ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ರಶ್ಮಿಕಾ; ಇದಕ್ಕೆ ಕಾರಣ ಒಂದೇ ಒಂದು ಭೇಟಿ!

ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada