AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್​​-ಸಬಾ ಬಗ್ಗೆ ಹೊರಬಿತ್ತು ಮತ್ತೊಂದು ರಹಸ್ಯ​; ಇವರ ಸಂಬಂಧ ಇಷ್ಟೊಂದು ಮುಂದುವರಿದಿದೆಯಾ?

ಹೃತಿಕ್​ಗೆ ಗೆಳೆಯರೊಬ್ಬರ ಮೂಲಕ ಸಬಾ ಪರಿಚಯ ಆಗಿದೆ. ಇಬ್ಬರ ಟೇಸ್ಟ್​ ಒಂದೇ ರೀತಿ ಇದ್ದಿದ್ದರಿಂದ ಬೇಗ ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರು ಭೇಟಿ ಆಗಿದ್ದಾರೆ. ಆ ಬಳಿಕ ಇವರು ಡೇಟಿಂಗ್​ ಶುರುಹಚ್ಚಿಕೊಂಡಿದ್ದಾರೆ.

ಹೃತಿಕ್​​-ಸಬಾ ಬಗ್ಗೆ ಹೊರಬಿತ್ತು ಮತ್ತೊಂದು ರಹಸ್ಯ​; ಇವರ ಸಂಬಂಧ ಇಷ್ಟೊಂದು ಮುಂದುವರಿದಿದೆಯಾ?
ಸಬಾ-ಹೃತಿಕ್
TV9 Web
| Edited By: |

Updated on: Feb 01, 2022 | 1:25 PM

Share

ಬಾಲಿವುಡ್​ನ ಖ್ಯಾತ ಹೃತಿಕ್​ ರೋಷನ್ (Hrithik Roshan)​ ಹಾಗೂ ನಟಿ ಸಬಾ ಆಜಾದ್ (Saba Azad)​ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳು ಒಂದೆರಡಲ್ಲ. ಇತ್ತೀಚೆಗೆ ಇಬ್ಬರೂ ಸುತ್ತಾಡುತ್ತಿರುವ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆಗಲೇ ಹೃತಿಕ್​ ಮತ್ತು ಸಬಾ ಮಧ್ಯೆ (Hrithik Roshan And Saba Azad Dating) ಏನೋ ನಡೆಯುತ್ತಿದೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇವರ ಸಂಬಂಧ ತುಂಬಾನೇ ಮುಂದುವರಿದಿದೆ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇವರ ಬಗ್ಗೆ ಈಗ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಈ ವಿಚಾರ ಕೇಳಿ ಅನೇಕ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಹಾಗಾದರೆ, ಅವರ ರಿಲೇಷನ್​ಶಿಪ್​ ಯಾವ ಹಂತದಲ್ಲಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿದ್ದಿದೆ. ಆದರೆ, ಹೃತಿಕ್​ ಸಂಪೂರ್ಣವಾಗಿ ಮೂವ್​ಆನ್​ ಆಗಿದ್ದಾರೆ. ಹಾಗಂತ ಹೃತಿಕ್ ಅವರು ರಿಲೇಷನ್​ಶಿಪ್​ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ಅವರು ಸಬಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ.

ಹೃತಿಕ್​ಗೆ ಗೆಳೆಯರೊಬ್ಬರ ಮೂಲಕ ಸಬಾ ಪರಿಚಯ ಆಗಿದೆ. ಇಬ್ಬರ ಟೇಸ್ಟ್​ ಒಂದೇ ರೀತಿ ಇದ್ದಿದ್ದರಿಂದ ಬೇಗ ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರು ಭೇಟಿ ಆಗಿದ್ದಾರೆ. ಆ ಬಳಿಕ ಇವರು ಡೇಟಿಂಗ್​ ಶುರುಹಚ್ಚಿಕೊಂಡಿದ್ದಾರೆ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ವಿಚಾರ ಎಂದರೆ ಹೊಸ ವರ್ಷವನ್ನು ಈ ಜೋಡಿ ಗೋವಾದಲ್ಲಿ ಒಟ್ಟಾಗಿ ಆಚರಿಸಿದೆಯಂತೆ. ರೆಸಾರ್ಟ್​ ಒಂದರಲ್ಲಿ ಇಬ್ಬರೇ ಸಮಯ ಕಳೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ವಿಚಾರ ಕೇಳಿ ಫ್ಯಾನ್ಸ್​ ಅಚ್ಚರಿ ಹೊರ ಹಾಕಿದ್ದಾರೆ. ಇವರ ಸಂಬಂಧ ಇಷ್ಟೊಂದು ಮುಂದುವರಿದಿದೆಯೇ ಎಂದು ಅಚ್ಚರಿ ಹೊರಹಾಕುತ್ತಿದ್ದಾರೆ.

ನಟ ಹೃತಿಕ್​ ರೋಷನ್​ ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ. ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್​ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್​ ಆಗಿ ಬಿಡುತ್ತವೆ. ಹೃತಿಕ್​ ಮನೆಯಿಂದ ಹೊರಬಿದ್ದರೆ ಸಾಕು ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಾರೆ. ಈಗ ಹೃತಿಕ್​ ಪ್ರೀತಿ ಪ್ರೇಮದ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಮೌನ ತಾಳಿದ್ದ ಸಬಾ 

ಮಾಧ್ಯಮವೊಂದರ ಸಂದರ್ಶನಕ್ಕೆ ಸಬಾ ಸಿಕ್ಕಿದ್ದರು. ಈ ವೇಳೆ ನೇರವಾಗಿ ಅವರ ಎದುರು ಈ ಪ್ರಶ್ನೆಯನ್ನು ಇಡಲಾಯಿತು. ಅವರು ಈ ವೇಳೆ ಜಾಣತನ ತೋರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಏನೇ ಹೇಳಿದರೂ ನಾನಾ ರೀತಿಯ ಕಥೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ, ಸಬಾ ಈ ಪ್ರಶ್ನೆಗೆ ಮೌನ ತಾಳಿದ್ದಾರೆ. ಈ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:  ಒಂದೇ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​, ಹೃತಿಕ್​; ‘ಅವೆಂಜರ್ಸ್​ ಎಂಡ್​ಗೇಮ್​’ ರೀತಿ ಬಾಲಿವುಡ್​ ಪ್ಲ್ಯಾನ್​

‘ಹೃತಿಕ್​ ರೋಷನ್​ ಜತೆ ನೀವು ಡೇಟಿಂಗ್​ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ