‘ತೈಮೂರ್​ ಜತೆಗೂ ಅಕ್ಷಯ್​ ಸಿನಿಮಾ ಮಾಡ್ತಾರೆ’; ಕರೀನಾ​ ಹೇಳಿದ ಈ ಮಾತು ನಿಜವೋ? ತಮಾಷೆಯೋ?

‘ತೈಮೂರ್​ ಜತೆಗೂ ಅಕ್ಷಯ್​ ಸಿನಿಮಾ ಮಾಡ್ತಾರೆ’; ಕರೀನಾ​ ಹೇಳಿದ ಈ ಮಾತು ನಿಜವೋ? ತಮಾಷೆಯೋ?
ಅಕ್ಷಯ್​ ಕುಮಾರ್​, ಕರೀನಾ, ಸೈಫ್​, ತೈಮೂರ್​ ಅಲಿ ಖಾನ್​

ಅಕ್ಷಯ್​ ಕುಮಾರ್​ ಮತ್ತು ಕರೀನಾ ಕಪೂರ್​ ಖಾನ್​ ನಡುವೆ 13 ವರ್ಷಗಳ ವಯಸ್ಸಿನ ಅಂತರ ಇದೆ. ಅಕ್ಷಯ್​ ನಟನೆಯ ಸಿನಿಮಾಗಳ ಶೂಟಿಂಗ್​ ನೋಡಲು ಹೋಗುವಾಗ ಕರೀನಾ ಕಪೂರ್​ ಚಿಕ್ಕ ಬಾಲಕಿ ಆಗಿದ್ದರು.

TV9kannada Web Team

| Edited By: Madan Kumar

Feb 02, 2022 | 8:48 AM

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅವರ ಬಗ್ಗೆ ನಿರ್ಮಾಪಕರಿಗೆ ಎಲ್ಲಿಲ್ಲದ ಭರವಸೆ. ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಅಲ್ಲದೇ, ಅಕ್ಷಯ್​​ ಕುಮಾರ್​ ಅವರು ಕೆಲಸ ಮಾಡುವ ಪರಿಗೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ನಟಿ ಕರೀನಾ ಕಪೂರ್​ ಖಾನ್ (Kareena Kapoor Khan)​ ಅವರಿಗೂ ಅಕ್ಷಯ್​ ಕುಮಾರ್​ ಎಂದರೆ ಬಹಳ ಇಷ್ಟ. ಆದರೆ ಅವರ ಜೊತೆ ಸಿನಿಮಾ ಮಾಡವಾಗ ಕೊಂಚ ಕಸಿವಿಸಿ ಆಗುತ್ತದೆ ಎಂದು ಕೂಡ ಕರೀನಾ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಮುಂದಿನ ದಿನಗಳಲ್ಲಿ ತೈಮೂರ್​ ಅಲಿ ಖಾನ್ (Taimur Ali Khan)​ ಜೊತೆಗೂ ಅಕ್ಷಯ್​ ಕುಮಾರ್​ ಸಿನಿಮಾ ಮಾಡುತ್ತಾರೆ ಎಂದು ಕರೀನಾ ಕಪೂರ್​ ಖಾನ್ ​ಹೇಳಿದ್ದಾರೆ. ಹಾಗಾದರೆ ಅವರ ಮಾತಿನ ಅರ್ಥವೇನು? ನಿಜಕ್ಕೂ ತೈಮೂರ್​ ಜೊತೆ ಸಿನಿಮಾ ಮಾಡಲು ಅಕ್ಷಯ್​ ಕುಮಾರ್​ ರೆಡಿ ಆಗಿದ್ದಾರಾ? ಇಲ್ಲಿದೆ ಪೂರ್ತಿ ವಿವರ..

ಅಕ್ಷಯ್​ ಕುಮಾರ್​ ಅವರಿಗೆ ಈಗ 54 ವರ್ಷ ವಯಸ್ಸು. 1987ರ ಸಮಯದಿಂದಲೂ ಅವರು ಸಿನಿಮಾ ಮಾಡುತ್ತಿದ್ದಾರೆ. ಅಂದು ಅವರ ಜೊತೆ ರೊಮ್ಯಾನ್ಸ್​ ಮಾಡಿದ ನಟಿಯರೆಲ್ಲ ಇಂದು ಮೂಲೆಗುಂಪಾಗಿದ್ದಾರೆ. ಕರೀನಾ ಕಪೂರ್​ ಸಹೋದರಿ ಕರೀಷ್ಮಾ ಕಪೂರ್​ ಅವರು ಅನೇಕ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್​ಗೆ ನಾಯಕಿ ಆಗಿದ್ದರು. ಬಳಿಕ ಅವರ ತಂಗಿ ಕರೀನಾ ಕಪೂರ್​ ಕೂಡ ಅಕ್ಷಯ್​ ಕುಮಾರ್​ಗೆ ನಾಯಕಿ ಆದರು. ‘ಅಕ್ಕನ ಜೊತೆ ರೊಮ್ಯಾನ್ಸ್​ ಮಾಡಿದ್ದ ಹೀರೋಗಳು ಜೊತೆ ನಾನು ನಟಿಸುವಾಗ ವಿಚಿತ್ರ ಎನಿಸುತ್ತದೆ’ ಎಂದು ಕರೀನಾ ಕಪೂರ್​ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ಮತ್ತು ಕರೀನಾ ಕಪೂರ್​ ಖಾನ್​ ನಡುವೆ 13 ವರ್ಷಗಳ ವಯಸ್ಸಿನ ಅಂತರ ಇದೆ. ಕರೀಷ್ಮಾ ಕಪೂರ್​ ಮತ್ತು ಅಕ್ಷಯ್​ ಕುಮಾರ್​ ಜೋಡಿಯಾಗಿ ನಟಿಸುವಾಗ ಕರೀನಾ ಕಪೂರ್​ ಅವರು ಇನ್ನೂ ಚಿಕ್ಕ ಬಾಲಕಿ ಆಗಿದ್ದರು. ಶಾಲೆಯ ಯೂನಿಫಾರ್ಮ್​ ಧರಿಸಿ ಅವರು ಶೂಟಿಂಗ್​ ನೋಡಲು ಹೋಗುತ್ತಿದ್ದರು. ನಂತರ ಅದೇ ಕರೀನಾ ಕಪೂರ್​ ಜೊತೆ ಅಕ್ಷಯ್​ ಕುಮಾರ್​ ಜೋಡಿಯಾಗಿ ನಟಿಸಿದರು. ಇನ್ನೂ ಹಲವು ವರ್ಷಗಳ ಕಾಲ ಅವರು ಹೀರೋ ಆಗಿಯೇ ಮಿಂಚುತ್ತಾರೆ. 75ನೇ ವಯಸ್ಸಿನಲ್ಲೂ ಅವರು ಹೀರೋ ಪಾತ್ರ ಮಾಡುತ್ತಾರೆ ಎಂಬುದು ಕರೀನಾ ಕಪೂರ್​ ಅನಿಸಿಕೆ. ‘ಅಕ್ಷಯ್ ಕುಮಾರ್​ ಈಗಾಗಲೇ ತೈಮೂರ್​ ಜೊತೆ ಹೀರೋ ಆಗಿ ನಟಿಸಲು ಪ್ಲ್ಯಾನ್​ ಮಾಡಿದ್ದಾರೆ. ಈ ಬಗ್ಗೆ ನನಗೆ ಹೇಳಿದ್ದಾರೆ’ ಎಂದು ಕರೀನಾ ಕಪೂರ್​ ತಮಾಷೆ ಮಾಡಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ:

Saif Ali Khan: ಕರೀನಾ ಕಪೂರ್​ಗಿಂದ ಕತ್ರಿನಾ ಹೆಚ್ಚು ಹಾಟ್ ಎಂದಿದ್ದ ಸೈಫ್; ಹಳೇ ವಿಡಿಯೋ ಮತ್ತೆ ವೈರಲ್

175 ಕೋಟಿ ರೂ. ಎದುರಿಗಿಟ್ಟರೂ ಆಫರ್​ ಒಪ್ಪಲಿಲ್ಲ ಅಕ್ಷಯ್​ ಕುಮಾರ್​; ಇದು ‘ಬಚ್ಚನ್​ ಪಾಂಡೆ’ ತಾಕತ್ತು

Follow us on

Related Stories

Most Read Stories

Click on your DTH Provider to Add TV9 Kannada