175 ಕೋಟಿ ರೂ. ಎದುರಿಗಿಟ್ಟರೂ ಆಫರ್​ ಒಪ್ಪಲಿಲ್ಲ ಅಕ್ಷಯ್​ ಕುಮಾರ್​; ಇದು ‘ಬಚ್ಚನ್​ ಪಾಂಡೆ’ ತಾಕತ್ತು

ಬರೋಬ್ಬರಿ 175 ಕೋಟಿ ರೂಪಾಯಿ ಕೊಟ್ಟು ‘ಬಚ್ಚನ್​ ಪಾಂಡೆ’ ಸಿನಿಮಾವನ್ನು ಕೊಂಡುಕೊಳ್ಳಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಅದನ್ನು ಅಕ್ಷಯ್​ ಕುಮಾರ್​ ಮತ್ತು ತಂಡ ಒಪ್ಪಿಕೊಳ್ಳಲಿಲ್ಲ.

175 ಕೋಟಿ ರೂ. ಎದುರಿಗಿಟ್ಟರೂ ಆಫರ್​ ಒಪ್ಪಲಿಲ್ಲ ಅಕ್ಷಯ್​ ಕುಮಾರ್​; ಇದು ‘ಬಚ್ಚನ್​ ಪಾಂಡೆ’ ತಾಕತ್ತು
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 24, 2022 | 9:29 AM

ಬಾಲಿವುಡ್​ನಲ್ಲಿ ನಟ ಅಕ್ಷಯ್​ ಕುಮಾರ್​ (Akshay Kumar) ಅವರ ಕೆಲಸದ ಶೈಲಿಗೆ ಬೇರೆ ಯಾವ ನಟರೂ ಸಾಟಿ ಇಲ್ಲ. ತುಂಬ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುವುದು ಅವರ ಸ್ಟೈಲ್​. ಸರಿಯಾದ ಸಮಯಕ್ಕೆ ಶೂಟಿಂಗ್​ ಶುರುವಾಗಬೇಕು, ಸರಿಯಾದ ಸಮಯಕ್ಕೆ ಮುಗಿಯಬೇಕು. ಆ ರೀತಿ ಕಟ್ಟುನಿಟ್ಟಿನ ವೇಳಾಪಟ್ಟಿ ಹಾಕಿಕೊಂಡು ಅಕ್ಷಯ್​ ಕುಮಾರ್ ಕೆಲಸ ಮಾಡುತ್ತಾರೆ. ಆ ಕಾರಣದಿಂದ ಅವರನ್ನು ಕಂಡರೆ ಎಲ್ಲ ನಿರ್ಮಾಪಕರಿಗೂ ಅಚ್ಚುಮೆಚ್ಚು. ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡಬೇಕು ಎಂಬುದು ಅಕ್ಷಯ್​ ಕುಮಾರ್​ ಟಾರ್ಗೆಟ್​. ಆದರೆ ಕೊರೊನಾ ಕಾರಣಗಳಿಂದ ಆ ವೇಗಕ್ಕೆ ಕೊಂಚ ಪೆಟ್ಟು ಬಿದ್ದಿದೆ. ಆದರೂ ಸಹ, ಅಕ್ಷಯ್​ ಕುಮಾರ್​ ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗುತ್ತಿವೆ. ಇತ್ತೀಚೆಗೆ ಅವರ ‘ಅತರಂಗಿ ರೇ’ ಸಿನಿಮಾ ಒಟಿಟಿ ಮೂಲಕ ಬಿಡುಗಡೆ ಆಯಿತು. ಈಗ ‘ಬಚ್ಚನ್​ ಪಾಂಡೆ’ (Bachchan Pandey Movie) ಚಿತ್ರ ರಿಲೀಸ್​ಗೆ ಸಿದ್ಧವಾಗಿದೆ. ಚಿತ್ರಮಂದಿರದಲ್ಲಿಯೇ ಈ ಸಿನಿಮಾವನ್ನು ತೆರೆಕಾಣಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಪ್ರತಿಷ್ಠಿತ ಒಟಿಟಿ (OTT Platform) ಸಂಸ್ಥೆಯೊಂದರಿಂದ ಬರೋಬ್ಬರಿ 175 ಕೋಟಿ ರೂ. ಆಫರ್​ ನೀಡಲಾಗಿತ್ತು. ಆದರೆ ಅದನ್ನು ಅಕ್ಷಯ್​ ಕುಮಾರ್ ಮತ್ತು ಚಿತ್ರತಂಡದವರು​ ನೇರವಾಗಿ ತಿರಸ್ಕರಿಸಿದರು ಎಂಬ ಸುದ್ದಿ ಈಗ ಕೇಳಿಬಂದಿದೆ.

‘ಬಚ್ಚನ್​ ಪಾಂಡೆ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಡಿಫರೆಂಟ್​ ಗೆಟಪ್​ ಇದೆ. ಅವರ ಜೊತೆ ಕೃತಿ ಸನೋನ್​, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾ.18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ದೇಶಾದ್ಯಂತ ಕೊರೊನಾ ವೈರಸ್​ ಕಣ್ಣಾಮುಚ್ಚಾಲೆ ಆಡುತ್ತಿದೆ. ಹಾಗಾಗಿ ಅನೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಗಿದೆ. ಈ ಸಂದರ್ಭದಲ್ಲಿ ಅನೇಕ ಸಿನಿಮಾಗಳು ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಆಗುತ್ತಿವೆ. ಹಾಗಾಗಿ ಸ್ಟಾರ್​ ನಟರ ಸಿನಿಮಾದ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಅನೇಕ ಒಟಿಟಿ ಸಂಸ್ಥೆಗಳು ನಾಮುಂದು ತಾಮುಂದು ಅಂತ ಉತ್ಸಾಹ ತೋರಿಸುತ್ತಿವೆ. ಅಕ್ಷಯ್​ ಕುಮಾರ್​ ಅಭಿನಯದ ‘ಬಚ್ಚನ್​ ಪಾಂಡೆ’ ಚಿತ್ರದ ವಿಚಾರದಲ್ಲೂ ಹಾಗೆಯೇ ಆಯಿತು ಎನ್ನುತ್ತಿವೆ ಮೂಲಗಳು.

ಬರೋಬ್ಬರಿ 175 ಕೋಟಿ ರೂಪಾಯಿ ಕೊಟ್ಟು ‘ಬಚ್ಚನ್​ ಪಾಂಡೆ’ ಸಿನಿಮಾವನ್ನು ಕೊಂಡುಕೊಳ್ಳಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಇನ್ನೇನು ಆ ಡೀಲ್ ಒಪ್ಪಿಕೊಳ್ಳಬೇಕು ಅಂತ ನಿರ್ಮಾಪಕರು ರೆಡಿ ಆಗಿದ್ದರು. ಆದರೆ ಚಿತ್ರದ ಟೀಸರ್​ ಅನ್ನು ಒಮ್ಮೆ ದೊಡ್ಡ ಪರದೆಯಲ್ಲಿ ನೋಡಿದ ಬಳಿಕ ನಿರ್ಮಾಪಕರ ಮನಸ್ಸು ಬದಲಾಯಿತು. ಇದು ಥಿಯೇಟರ್​ನಲ್ಲಿಯೇ ನೋಡಿ ಸವಿಯಬೇಕಾದ ಸಿನಿಮಾ ಎಂಬ ನಿರ್ಧಾರಕ್ಕೆ ಬಂದರು. ಕೂಡಲೇ ಅಕ್ಷಯ್​ ಕುಮಾರ್​ ಜೊತೆ ಅವರು ಚರ್ಚೆ ಮಾಡಿದರು. ಚಿತ್ರಮಂದಿರದಲ್ಲಿಯೇ ರಿಲೀಸ್ ಮಾಡಿದರೆ ಉತ್ತಮ ಎಂಬುದು ಅಕ್ಷಯ್​ ಕುಮಾರ್​ ಅವರ ಅಭಿಪ್ರಾಯ ಕೂಡ ಆಗಿತ್ತು. ಹಾಗಾಗಿ ಒಟಿಟಿ ಸಂಸ್ಥೆಯ 175 ಕೋಟಿ ಆಫರ್ ಅನ್ನು ಅಲ್ಲೇ ಕೈ ಬಿಡಲಾಯಿತು ಎನ್ನುತ್ತಿವೆ ಚಿತ್ರತಂಡದ ಆಪ್ತ ಮೂಲಗಳು.

ಸದ್ಯ ಅಕ್ಷಯ್​ ಕುಮಾರ್​ ಅವರು ರಜೆಯ ಮಜಾ ಸವಿಯುತ್ತಿದ್ದಾರೆ. ಮಗಳ ಜೊತೆ ರಣಥಂಬೋರ್​ ರಾಷ್ಟ್ರೀಯ ಉದ್ಯಾನಕ್ಕೆ ಅವರು ಭೇಟಿ ನೀಡಿದ್ದು, ಅಲ್ಲಿನ ಪ್ರಾಣಿಗಳನ್ನು ಮುದ್ದಿಸಿದ್ದಾರೆ. ಮಗಳು ನಿತಾರಾ ಜೊತೆ ಸೇರಿಕೊಂಡು ಪ್ರಾಣಿಗಳಿಗೆ ಆಹಾರ ತಿನಿಸುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಶೇರ್​ ಮಾಡಿಕೊಂಡಿದ್ದರು. ‘ಈ ಮಣ್ಣಿನ ವಾಸನೆ, ಗೋವುಗಳಿಗೆ ಆಹಾರ ನೀಡೋದು, ಮರಗಳಿಂದ ಬೀಸುವ ತಂಗಾಳಿ.. ಇವುಗಳ ಅನುಭವನ್ನು ಮಕ್ಕಳಿಗೆ ನೀಡುವುದರಲ್ಲಿ ಏನೋ ಒಂಥರಾ ಖುಷಿ ಇದೆ. ನಾಳೆ ಆಕೆಗೆ ಕಾಡಿನಲ್ಲಿ ಹುಲಿ ಕಾಣಿಸಿದರೆ ಇನ್ನೂ ಸಂತೋಷವಾಗಲಿದೆ. ಸುಂದರವಾದ ರಣಥಂಬೋರ್​ ಉದ್ಯಾನಕ್ಕೆ ಭೇಟಿ ನೀಡಿದ್ದೇವೆ. ಈ ರೀತಿಯ ಅದ್ಭುತವಾದ ಸ್ಥಳಗಳನ್ನು ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಅಕ್ಷಯ್​ ಕುಮಾರ್​ ಬರೆದುಕೊಂಡಿದ್ದರು.

ಇದನ್ನೂ ಓದಿ:

ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

ಅಕ್ಷಯ್​ ಕುಮಾರ್​ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್​

Published On - 9:23 am, Mon, 24 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ