AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saif Ali Khan: ಕರೀನಾ ಕಪೂರ್​ಗಿಂದ ಕತ್ರಿನಾ ಹೆಚ್ಚು ಹಾಟ್ ಎಂದಿದ್ದ ಸೈಫ್; ಹಳೇ ವಿಡಿಯೋ ಮತ್ತೆ ವೈರಲ್

Katrina Kaif | Kareena Kapoor: ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋ ಒಂದರ ವಿಡಿಯೋ ಮತ್ತೆ ವೈರಲ್ ಆಗಿದೆ. ಅದರಲ್ಲಿ ಸೈಫ್ ಅಲಿ ಖಾನ್ ಕತ್ರಿನಾ ಅಥವಾ ಕರೀನಾ ಯಾರು ಹೆಚ್ಚು ಹಾಟ್ ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದರು.

Saif Ali Khan: ಕರೀನಾ ಕಪೂರ್​ಗಿಂದ ಕತ್ರಿನಾ ಹೆಚ್ಚು ಹಾಟ್ ಎಂದಿದ್ದ ಸೈಫ್; ಹಳೇ ವಿಡಿಯೋ ಮತ್ತೆ ವೈರಲ್
ಕರೀನಾ, ಸೈಫ್, ಕತ್ರಿನಾ (ಸಂಗ್ರಹ ಚಿತ್ರ)
TV9 Web
| Edited By: |

Updated on: Jan 05, 2022 | 9:59 PM

Share

ಕರಣ್ ಜೋಹರ್ ಸೆಲೆಬ್ರಿಟಿಗಳನ್ನು ಪೇಚಿಗೆ ಸಿಲುಕಿಸುವುದರಲ್ಲಿ ಎತ್ತಿದ ಕೈ. ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕರಣ್, ಅನಿರೀಕ್ಷಿತ ಪ್ರಶ್ನೆಗಳಿಂದ ಅತಿಥಿಗಳನ್ನು ಗೊಂದಲಕ್ಕೆ ಬೀಳಿಸಿದ್ದಾರೆ. ಇತ್ತೀಚೆಗೆ ಸೈಫ್ ಅಲಿ ಖಾನ್ ಭಾಗಿಯಾಗಿದ್ದ ರಿಯಾಲಿಟಿ ಶೋ ಒಂದರ ವಿಡಿಯೋ ಮತ್ತೆ ವೈರಲ್ ಆಗಿದೆ. ಅದರಲ್ಲಿ ಕರಣ್ ಜೋಹರ್ ಕೇಳಿದ ಪ್ರಶ್ನೆ ಹಾಗೂ ಸೈಫ್ ಉತ್ತರ ಮತ್ತೆ ನೆಟ್ಟಿಗರ ಮಾತಿಗೆ ಆಹಾರವಾಗಿದೆ. 2015ರ ಸಮಯದಲ್ಲಿ ಸೈಫ್ ಅಲಿ ಖಾನ್ ಹಾಗೂ ಕತ್ರಿನಾ ಕೈಫ್ ತಮ್ಮ ‘ಫ್ಯಾಂಟಮ್’ ಚಿತ್ರದ ಪ್ರಚಾರಕ್ಕಾಗಿ ಡಾನ್ಸ್ ರಿಯಾಲಿಟಿ ಶೋ ಆದ ‘ಝಲಕ್ ದಿಖ್ಲಾ ಜಾ 8’ರಲ್ಲಿ ಭಾಗವಹಿಸಿದ್ದರು. ಆ ಶೋಗೆ ಕರಣ್ ಜೋಹರ್ ಹಾಗೂ ಶಾಹಿದ್ ಕಪೂರ್ ನಿರ್ಣಾಯಕರಾಗಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೈಫ್​ಗೆ ಕರಣ್ ಅನಿರೀಕ್ಷಿತ ಪ್ರಶ್ನೆಯನ್ನು ಮುಂದಿಟ್ಟರು. ಅದರಲ್ಲಿ ‘‘ಕತ್ರಿನಾ ಅಥವಾ ಕರೀನಾ.. ಇಬ್ಬರಲ್ಲಿ ಯಾರು ಹೆಚ್ಚು ಹಾಟ್?’’ ಎಂದು ಕೇಳಿದ್ದರು. ಆಗ ಸೈಫ್ ತಮ್ಮ ಪತ್ನಿ ಕರೀನಾರ ಹೆಸರು ಹೇಳಿರಲಿಲ್ಲ; ಕತ್ರಿನಾರನ್ನು ಹೆಚ್ಚು ಹಾಟ್ ಎಂದಿದ್ದರು. ಆಗ ಶಾಹಿದ್ ಕಪೂರ್ ನಕ್ಕಿದ್ದರು. ಪತ್ನಿಯನ್ನು ಬಿಟ್ಟು ಮತ್ತೊಬ್ಬರನ್ನು ಹೆಚ್ಚು ಹಾಟ್ ಎಂದ ಸೈಫ್ ಮಾತನ್ನು ಒಂದಷ್ಟು ಜನ ಆಡಿಕೊಂಡಿದ್ದರೆ, ಬಾಯಿಗೆ ಬಂದಂತೆ ಪ್ರಶ್ನೆ ಕೇಳುತ್ತಾರೆ ಎಂದು ಕರಣ್ ಜೋಹರ್​ರನ್ನು ವೀಕ್ಷಕರು ತರಾಟೆಗೆ ತೆಗೆದುಕೊಂಡಿದ್ದರು.

ಕಾರ್ಯಕ್ರಮದಲ್ಲಿ ಕರಣ್ ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ಶಾಹಿದ್ ಹಾಗೂ ಸೈಫ್​ಗೆ ನಿಮ್ಮ ನಿಮ್ಮ ನೆಚ್ಚಿನ ಹಾಟ್ ತಾರೆಯರು ಯಾರು ಎಂದು ಕೇಳಿದ್ದರು. ಆಗ ಸೈಫ್ ತಮ್ಮ ಪತ್ನಿ ಕರೀನಾ ಹೆಸರು ಹೇಳಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕತ್ರಿನಾ ಆಗಿನ ತಮ್ಮ ಗೆಳೆಯ ರಣಬೀರ್ ಕಪೂರ್ ಹೆಸರನ್ನು ಮೂರು ಬಾರಿ ಉಚ್ಛರಿಸಿದ್ದರು. ಶಾಹಿದ್ ಕಪೂರ್ ತಮ್ಮ ಪತ್ನಿಯೇ ಹಾಟ್ ಎಂದಿದ್ದರು.

ಮೊದಲ ಪ್ರಶ್ನೆಗೆ ಸೈಫ್ ಉತ್ತರ ನೋಡಿ ಶಾಹಿದ್ ಕಪೂರ್ ನಕ್ಕಿದ್ದಕ್ಕೂ ವೀಕ್ಷಕರು ಬೇರೆ ಅರ್ಥ ಕಲ್ಪಿಸಿದ್ದರು. ಕಾರಣ, ಶಾಹಿದ್ ಮೊದಲು ಕರೀನಾ ಜತೆ ಸುತ್ತಾಡಿದ್ದರು. ನಂತರ ಬೇರೆಯಾಗಿದ್ದರು. 2012ರಲ್ಲಿ ಸೈಫ್ ಹಾಗೂ ಕರೀನಾ ವಿವಾಹವಾದರು. 2017ರಲ್ಲಿ ಶಾಹಿದ್ ಮೀರಾರನ್ನು ವಿವಾಹವಾದರು. ಅದಾಗ್ಯೂ ಶಾಹಿದ್ ಹಾಗೂ ಸೈಫ್ 2017ರಲ್ಲಿ ‘ರಂಗೂನ್’ ಚಿತ್ರದಲ್ಲಿ ಜತೆಯಾಗಿ ಬಣ್ಣಹಚ್ಚಿದ್ದರು.

ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಕೊನೆಯದಾಗಿ ವಿವಾಹವಾದವರು ಕತ್ರಿನಾ. ಇತ್ತೀಚೆಗೆ ವಿಕ್ಕಿ ಕೌಶಲ್ ಜತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರಣ್ ಜೋಹರ್ ಬಾಡಿಗೆ ತಾಯ್ತನದ ಮೂಲಕ ರೂಹಿ ಹಾಗೂ ಯಶ್ ಎಂಬ ಪುಟಾಣಿಗಳ ಪೋಷಕರಾಗಿದ್ದಾರೆ.

ಇದನ್ನೂ ಓದಿ:

Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Esther Acebo: ‘ಮನಿ ಹೈಸ್ಟ್​​’ ಖ್ಯಾತಿಯ ಈ ತಾರೆಯ ಮನೆಯಲ್ಲಿ ‘ಗಣೇಶ’!; ಚಿತ್ರ ನೋಡಿ ಸಖತ್ ಖುಷಿ ಪಟ್ಟ ನೆಟ್ಟಿಗರು

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?