Esther Acebo: ‘ಮನಿ ಹೈಸ್ಟ್​​’ ಖ್ಯಾತಿಯ ಈ ತಾರೆಯ ಮನೆಯಲ್ಲಿ ‘ಗಣೇಶ’!; ಚಿತ್ರ ನೋಡಿ ಸಖತ್ ಖುಷಿ ಪಟ್ಟ ನೆಟ್ಟಿಗರು

Lord Ganesha: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಿರುವ, ಯಾವುದೇ ಭಾರತೀಯ ಹಿನ್ನೆಲೆಯಿರದ ತಾರೆಯೊಬ್ಬರ ಮನೆಯಲ್ಲಿ ಗಣೇಸನ ಚಿತ್ರವಿದ್ದರೆ ಭಾರತೀಯರು ಎಷ್ಟು ಖುಷಿಪಟ್ಟಾರು? ಇಲ್ಲಿದೆ ನಿದರ್ಶನ.

Esther Acebo: ‘ಮನಿ ಹೈಸ್ಟ್​​’ ಖ್ಯಾತಿಯ ಈ ತಾರೆಯ ಮನೆಯಲ್ಲಿ ‘ಗಣೇಶ’!; ಚಿತ್ರ ನೋಡಿ ಸಖತ್ ಖುಷಿ ಪಟ್ಟ ನೆಟ್ಟಿಗರು
ನಟಿ ಇಸ್ತರ್ ಎಸ್ಬೊ

‘ಮನಿ ಹೈಸ್ಟ್’ ಯಾರಿಗೆ ಗೊತ್ತಿಲ್ಲ ಹೇಳಿ? ಸ್ಪಾನಿಷ್ ಮೂಲದ ಈ ನೆಟ್​ಫ್ಲಿಕ್ಸ್​​ ಸೀರೀಸ್ ಜಗತ್ತಿನಾದ್ಯಂತ ಜನರನ್ನು ಮೋಡಿ ಮಾಡಿದೆ. ಅದರಲ್ಲಿ ಬರುವ ಪ್ರೊಫೆಸರ್ ಹಾಗೂ ಇತರ ಪಾತ್ರಗಳು ವೀಕ್ಷಕರಿಗೆ ಅಚ್ಚುಮೆಚ್ಚು. ಇದೀಗ ಮನಿ ಹೈಸ್ಟ್​​ನ ನಟಿಯೊಬ್ಬರು ಭಾರತದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಸ್ಪಾನಿಷ್ ಮೂಲದ ನಟಿ ಭಾರತೀಯರ ಗಮನ ಸೆಳೆದಿದ್ದು ಹೇಗೆ ಅಂತೀರಾ? ಅಲ್ಲೇ ಇರೋದು ವಿಚಾರ. ಇಸ್ತರ್ ಎಸ್ಬೊ ‘ಮನಿ ಹೈಸ್ಟ್​’ನಲ್ಲಿ ಸ್ಟಾಕ್​ಹೋಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಅವರು ಗಮನ ಸೆಳೆದಿರುವುದು ಬೇರೆಯದೇ ವಿಚಾರಕ್ಕೆ. ಇಸ್ತರ್ ಅವರ ಮನೆಯಲ್ಲಿ ಗಣೇಶನ ಚಿತ್ರವಿದೆ. ಅವರು ಅದರ ಮುಂದೆ ನಿಂತಿರುವ ಹಲವು ಚಿತ್ರಗಳು ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

ಇಸ್ತರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಗಣೇಶನ ಫೋಟೋ ಮುಂದೆ ನಿಂತಿದ್ದಾರೆ. ಭಾರತದಲ್ಲಿ ಮನಿ ಹೈಸ್ಟ್​ ಫ್ಯಾನ್ಸ್ ಸಂಖ್ಯೆ ಹೆಚ್ಚೇ ಇದೆ. ಅದರಲ್ಲಿನ ನಟಿಯರನ್ನು ಮೆಚ್ಚುಗೆಯಿಂದ ಹಿಂಬಾಲಿಸುವ ಜನರು ಇದನ್ನು ಗಮನಿಸಿದ್ದಾರೆ. ಅಲ್ಲದೇ ವಿಡಿಯೋದ ಸ್ಕ್ರೀನ್ ಶಾಟ್​​ಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪರಂಪರೆಯ ದೇವರು ಅಂತಾರಾಷ್ಟ್ರೀಯ ಖ್ಯಾತಿಯ, ಭಾರತೀಯ ಹಿನ್ನೆಲೆಯಿಲ್ಲದ ನಟಿಯ ಮನೆಯಲ್ಲಿರುವುದು ಎಲ್ಲರನ್ನೂ ಚಕಿತಗೊಳಿಸಿದೆ. ಅಲ್ಲದೇ ಈ ಚಿತ್ರಗಳು ಸಖತ್ ವೈರಲ್ ಆಗಿದೆ.

ವೈರಲ್ ಆಗಿರುವ ಚಿತ್ರ ಇಲ್ಲಿದೆ:

ಬಹಳ ಅಪರೂಪದ ದೃಶ್ಯವಿದು, ನೋಡಿ ಖುಷಿಯಾಯಿತು ಎಂದು ಓರ್ವ ನೆಟ್ಟಿಗರು ಕಾಮೆಂಟ್ ಮಾಡಿದ್ದರೆ, ಮತ್ತಷ್ಟು ಜನ ಬಹಳ ಹೆಮ್ಮೆಯಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ರಾತ್ರೋರಾತ್ರಿ ಸ್ಪಾನಿಷ್ ನಟಿ ಭಾರತೀಯರ ಮನಗೆದ್ದಿದ್ದಾರೆ.

ಭಾರತದಲ್ಲಿ ರಿಮೇಕ್ ಆಗುತ್ತಿದೆ ಮನಿ ಹೈಸ್ಟ್: ‘ಮನಿ ಹೈಸ್ಟ್’ ಸೀರೀಸ್ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಅದಕ್ಕೆ ‘ಥ್ರಿ ಮಂಕೀಸ್’ ಎಂದು ಹೆಸರಿಡಲಾಗಿದೆ. ಅರ್ಜುನ್ ರಾಂಪಾಲ್ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅಬ್ಬಾಸ್ ಮಸ್ತಾನ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಇದನ್ನೂ ಓದಿ:

NBK107: ದುನಿಯಾ ವಿಜಯ್ ಆಯ್ತು, ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ; ಹಿರಿದಾಗುತ್ತಿದೆ ‘ಎನ್​ಬಿಕೆ107’ ತಾರಾಗಣ

Shubha Poonja: ದೀರ್ಘಕಾಲದ ಗೆಳೆಯ ಸುಮಂತ್ ಜತೆ ಶುಭಾ ಸಿಂಪಲ್ ಶಾದಿ; ಚಿತ್ರಗಳು ಇಲ್ಲಿವೆ

Published On - 8:17 pm, Wed, 5 January 22

Click on your DTH Provider to Add TV9 Kannada